ETV Bharat / city

ಅಮಿತ್ ಶಾ ಆಗಮನದ ಹಿನ್ನೆಲೆ ಟ್ರಾಫಿಕ್ ಜಾಮ್: ಸವಾರರಿಗೆ ಧನ್ಯವಾದ ತಿಳಿಸಿದ ಭಾಸ್ಕರ್ ರಾವ್ - ಕೇಂದ್ರ ಗೃಹ ಸಚಿವ ಅಮಿತ್ ಶಾ ಬೆಂಗಳೂರು ಭೇಟಿ ನ್ಯೂಸ್

ಕೇಂದ್ರ ಗೃಹ ಸಚಿವ ಅಮಿತ್ ಶಾ ನಗರಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ‌ ನಗರದ ಕೆಲಕಡೆ ಇಂದು ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು.

Traffic jam with the arrival of Amit Sha in benglore
ಟ್ರಾಫಿಕ್ ಜಾಮ್
author img

By

Published : Jan 18, 2020, 9:08 PM IST

ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ನಗರಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ‌ ನಗರದ ಕೆಲಕಡೆಗಳಲ್ಲಿ ಇಂದು ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು.

ಬೆಂಗಳೂರಿನ ಕೆಲವೆಡೆ ಟ್ರಾಫಿಕ್ ಜಾಮ್

ಎಚ್​ಎಎಲ್ ವಿಮಾನ ನಿಲ್ದಾಣದಿಂದ ಅಮಿತ್ ಶಾ ಸಂಚರಿಸುವ ಮಾರ್ಗಗಳಲ್ಲಿ ಜಿರೋ ಟ್ರಾಫಿಕ್ ವ್ಯವಸ್ಥೆ ಮಾಡಿ, ಬಿಗಿ ಪೊಲೀಸ್ ಬಂದೋಬಸ್ತ್‌ ಮಾಡಿದ್ದರಿಂದ ವಾಹನ ಸವಾರರು ರಸ್ತೆಯಲ್ಲೇ ಕೆಲಕಾಲ ಬಸವಳಿದರು. ಶಾ ಆಗಮಿಸುವ ಅರ್ಧಗಂಟೆ ಮುನ್ನವೇ ವಾಹನ ಸಂಚಾರ ಸ್ಥಗಿತಗೊಳಿಸಿದ್ದರಿಂದ ಕಿಲೋ ಮೀಟರ್‌ಗಟ್ಟಲೆ ರಸ್ತೆಯಲ್ಲಿ ಸವಾರರು ಪರದಾಡುವಂತಾಯಿತು.

ಮಧ್ಯಾಹ್ನ ಅರಮನೆ ಮೈದಾನದಲ್ಲಿ ಕಾರ್ಯಕ್ರಮಕ್ಕೆ ಅಮಿತ್ ಶಾ ಆಗಮನ‌‌‌ ಹಿನ್ನೆಲೆಯಲ್ಲಿ ಹೆಬ್ಬಾಳದ ಎಸ್​ಟಿಎಂ ಮಾಲ್​ನಿಂದ ಕುಮಾರಕೃಪ ರಸ್ತೆಯವರೆಗೂ ಟ್ರಾಫಿಕ್ ಜಾಮ್ ಉಂಟಾಯಿತು. ಸಂಸದ ತೇಜಸ್ವಿ ಅವರ ಕಚೇರಿ ಉದ್ಘಾಟನೆಗಾಗಿ ಜಯನಗರಕ್ಕೆ‌ ಆಗಮಿಸಿದ್ದರಿಂದ ಈ ಭಾಗದಲ್ಲಿಯೂ ಕೆಲಗಂಟೆಗಳ ಕಾಲ ವಾಹನ ದಟ್ಟನೆ ಉಂಟಾಯಿತು.

ಇನ್ನು ವಾಹನ ಸವಾರರಿಗೆ ಅಡಚಣೆ ಉಂಟಾದ ಹಿನ್ನೆಲೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಪೊಲೀಸರಿಗೆ ಸಹಕರಿಸಿದ ನಗರದ ಜನತೆಗೆ ಧನ್ಯವಾದ ಅರ್ಪಿಸಿದ್ದಾರೆ.

Traffic jam with the arrival of Amit Sha in benglore
ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಟ್ವೀಟ್​

Intro:Body:ರಾಜಧಾನಿಗೆ ಅಮಿತ್ ಶಾ ಆಗಮಿಸಿದ ಹಿನ್ನೆಲೆಯಲ್ಲಿ ಬಹುತೇಕ ಕಡೆ ಟ್ರಾಫಿಕ್ ಜಾಮ್: ಸಹಕರಿಸಿದ ಸವಾರರಿಗೆ ಧನ್ಯವಾದ ಅರ್ಪಿಸಿದ ಭಾಸ್ಕರ್ ರಾವ್

ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ನಗರಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ‌ ನಗರದೆಲ್ಲೆಡೆ ಇಂದು ವಾಹನ ಸಂಚಾರದಲ್ಲಿ ಅಸ್ತವ್ಯಸ್ತವಾಯಿತು. ದೆಹಲಿಯಲ್ಲಿ‌ ನೇರವಾಗಿ ಎಚ್ ಎಎಲ್ ವಿಮಾನ ನಿಲ್ದಾಣದಿಂದ ಅಮಿತ್ ಶಾ ಸಂಚರಿಸುವ ಮಾರ್ಗಗಳಲ್ಲಿ ಜಿರೋ ಟ್ರಾಫಿಕ್ ವ್ಯವಸ್ತೆ‌ ಮಾಡಿ ಬಿಗಿ ಪೊಲೀಸ್ ಬಂದೋಬಸ್ತ್‌ ಮಾಡಿದ್ದರಿಂದ ವಾಹನ ಸಂಚಾರರು ರಸ್ತೆಯಲ್ಲೇ ಬಸವಳಿದರು..
ಶಾ ಆಗಮಿಸುವ ಅರ್ಧಗಂಟೆ ಮುನ್ನವೇ ವಾಹನ ಸಂಚಾರ ಸ್ಥಗಿತಗೊಳಿಸಿದ್ದರಿಂದ ಕಿಲೋ ಮೀಟರ್ ಗಟ್ಟಲೇ ರಸ್ತೆಯಲ್ಲಿ ಸವಾರರು ಪರದಾಡುವಂತಾಯಿತು.. ಮಧ್ಯಾಹ್ನ ಅರಮನೆ ಮೈದಾನದಲ್ಲಿ ಕಾರ್ಯಕ್ರಮಕ್ಕೆ ಅಮಿತ್ ಶಾ ಆಗಮನ‌‌‌ ಹಿನ್ನೆಲೆಯಲ್ಲಿ ಸಂಚಾರಿ ಪೊಲೀಸರು ಸಂಚಾರ ಸ್ಥಗಿತಗೊಳಿಸಿದ್ದ ಹಿನ್ನೆಲೆಯಲ್ಲಿ ಹೆಬ್ಬಾಳದ ಎಸ್ಟಿ‌ಮ್ ಮಾಲ್ ನಿಂದ ಕುಮಾರಕೃಪ ರಸ್ತೆವರೆಗೂ ಟ್ರಾಫಿಕ್ ಜಾಮ್ ಉಂಟಾಯಿತು.. ಸಂಸದ ತೇಜಸ್ವಿ ಅವರ ಕಚೇರಿ ಉದ್ಘಾಟನೆಗಾಗಿ ಜಯನಗರಕ್ಕೆ‌ ಆಗಮಿಸಿದ್ದರಿಂದ ಈ ಭಾಗದಲ್ಲಿಯೂ ಕೆಲವು ಗಂಟೆಗಳ ಟ್ರಾಫಿಕ್ ಜಾಮ್ ಉಂಟಾಯಿತು. ತುರ್ತು ಕೆಲಸಗಳಿಗಾಗಿ ಹೋಗುವ ವಾಹನ‌ ಸವಾರರರು ಬೈಗುಳ ಸಾಮಾನ್ಯವಾಗಿತ್ತು...
ವಾಹನ ಸವಾರರ ಅಡಚಣೆಗೆ ತಮ್ಮ ಟ್ವೀಟರ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಪೊಲೀಸರಿಗೆ ಸಹಕರಿಸಿದ ನಗರದ ಜನತೆಗೆ ಧನ್ಯವಾದ ಅರ್ಪಿಸಿದ್ದಾರೆ.
Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.