ETV Bharat / city

ನೂತನ ಸಚಿವರ ಖಾತೆ ಹಂಚಿಕೆ ಪಟ್ಟಿ ನಾಳೆ ಬೆಳಗ್ಗೆ ಬಿಡುಗಡೆ: ಸಿಎಂ ಸ್ಪಷ್ಟನೆ - Tomorrow Cabinet meeting

ಕಾಂಗ್ರೆಸ್ ನಾಯಕರು ಭಾಷಣ ಮಾಡುವಾಗ ಜನರು ಎದ್ದು ಎದ್ದು ಹೋಗಿದ್ದನ್ನು ನೋಡಿದ್ದೇವೆ. ಅವರೆಲ್ಲರನ್ನು ಎಲ್ಲಿಂದಲೋ ಕರೆದುಕೊಂಡು ಬಂದಿದ್ದರು. ಅವರು ಎದ್ದು ಹೋಗಿದ್ದನ್ನು ನಾವು ನೋಡಿದ್ದೇವೆ ಎಂದು ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಲೇವಡಿ ಮಾಡಿದರು.

Chief Minister BS Yediyurappa
ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ
author img

By

Published : Jan 20, 2021, 10:17 PM IST

ಬೆಂಗಳೂರು: ಸಚಿವರ ಖಾತೆ ಹಂಚಿಕೆ ಎಲ್ಲವೂ ಸಿದ್ಧವಿದೆ. ನಾಳೆ ಬೆಳಗ್ಗೆ 8 ಗಂಟೆಯೊಳಗೆ ಪಟ್ಟಿ ಬಿಡುಗಡೆ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

ವಿಧಾನಸೌಧದಲ್ಲಿ ಮಾತನಾಡಿದ ಅವರು, ನಾಳೆ ಸಂಜೆ ಮಂತ್ರಿ ಮಂಡಲ ಸಭೆ ಇದೆ. ಅಷ್ಟರೊಳಗೆ ಖಾತೆ ಪಟ್ಟಿ ಬಿಡುಗಡೆ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ...ವಿಧಾನಸೌಧದತ್ತ ತಲೆ ಹಾಕುತ್ತಿಲ್ಲ: ಖಾತೆಗಳಿಗಾಗಿ ಜವಾಬ್ದಾರಿ ಮರೆತರಾ ನೂತನ ಸಚಿವರು?

ಇದೇ ವೇಳೆ ಕಾಂಗ್ರೆಸ್ ಪ್ರತಿಭಟನೆಗೆ ಪ್ರತಿಕ್ರಿಯಿಸಿದ ಅವರು, ಆಗೊಮ್ಮೆ, ಈಗೊಮ್ಮೆ ನಾವು ಬದುಕಿದ್ದೇವೆ ಎಂದು ಕಾಂಗ್ರೆಸ್ ನಾಯಕರು ಪ್ರತಿಭಟನೆ ಮಾಡುತ್ತಾರೆ. ಅದಕ್ಕೆ ನಾನು ಬೇಡ ಅನ್ನೋಕೆ ಆಗುತ್ತಾ? ಎಂದು ಲೇವಡಿ ಮಾಡಿದರು.

ಅವರ ಕಾಲದಲ್ಲಿ ಏನಾಯಿತು? ನಮ್ಮ ಕಾಲದಲ್ಲಿ ನಾವೇನು ಮಾಡಿದ್ದೇವೆ ಎಂಬುದು ಜನರಿಗೆ ಗೊತ್ತಿದೆ. ನಾನು ಸುಮಾರು ಎಂಟು ಗಂಟೆಗಳ ಕಾಲ ಇಲ್ಲಿ ಕುಳಿತು ಸಭೆ ಮಾಡಿದ್ದೇನೆ. ಅವರು ಯಾರನ್ನೋ ಕರೆದುಕೊಂಡು ಮೆರವಣಿಗೆ ಮಾಡಿಸಿ, ರಾಜಭವನಕ್ಕೆ ನುಗ್ಗುತ್ತೇವೆ ಎಂದು ಹೋಗಿದ್ದರು. ಪಾಪ ಈ ಮೂಲಕ ನಾವು ಇನ್ನೂ ಬದುಕಿದ್ದೇವೆ ಅಂತಾ ತೋರಿಸುವ ಕೆಲಸ ಮಾಡಿದ್ದಾರೆ ಎಂದು ಟೀಕಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.