ETV Bharat / city

ರಾಜ್ಯದಲ್ಲಿಂದು 139 ಮಂದಿಗೆ ಕೊರೊನಾ - ಕರ್ನಾಟಕದ ಇಂದಿನ ಕೊರೊನಾ ವರದಿ

ರಾಜ್ಯದ ಇಂದಿನ ಕೋವಿಡ್ ವರದಿ...

ರಾಜ್ಯದ ಕೊರೊನಾ ವರದಿ
ರಾಜ್ಯದ ಕೊರೊನಾ ವರದಿ
author img

By

Published : Apr 23, 2022, 8:32 PM IST

ಬೆಂಗಳೂರು: ರಾಜ್ಯದಲ್ಲಿಂದು 10,118 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ಇದರಲ್ಲಿ 139 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 39,46,874 ಕ್ಕೆ ಏರಿಕೆ ಆಗಿದೆ. ಇಂದು 55 ಮಂದಿ ಡಿಸ್ಚಾರ್ಜ್ ಆಗಿದ್ದು, 39,05,096 ಜನ ಗುಣಮುಖರಾಗಿದ್ದಾರೆ.

ಇಂದು ಸೋಂಕಿಗೆ ಯಾರೂ ಮೃತಪಟ್ಟಿಲ್ಲ. ಇದುವರೆಗೂ ಒಟ್ಟು ಮೃತಪಟ್ಟವರ ಸಂಖ್ಯೆ 40,057 ಆಗಿದೆ. ಸದ್ಯ 1679 ಸಕ್ರಿಯ ಪ್ರಕರಣಗಳಿವೆ. ಈ ಮೂಲಕ ಸೋಂಕಿತರ ಪ್ರಮಾಣ ಶೇ.1.37 ರಷ್ಟಿದೆ. ವಿಮಾನ ನಿಲ್ದಾಣದಿಂದ ಇಂದು 2739 ಮಂದಿ ಸೇರಿದಂತೆ ಇದುವರೆಗೂ 83,1869 ಪ್ರಯಾಣಿಕರು ಕೋವಿಡ್ ತಪಾಸಣೆಗೆ ಒಳಪಟ್ಟಿದ್ದಾರೆ. 23 ಜಿಲ್ಲೆಯಲ್ಲಿಂದು ಯಾವುದೇ ಹೊಸ ಸಾವಿನ ಪ್ರಕರಣ ವರದಿಯಾಗಿಲ್ಲ.

ಇನ್ನು ರಾಜಧಾನಿ ಬೆಂಗಳೂರಿನಲ್ಲಿ ಇಂದು 132 ಮಂದಿಗೆ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 17,82,879 ಕ್ಕೆ ಏರಿಕೆ ಆಗಿದೆ. 51 ಮಂದಿ ಇಂದು ಬಿಡುಗಡೆಯಾಗಿದ್ದು, ಇದುವರೆಗೂ 17,64,315 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಕೋವಿಡ್​ನಿಂದ ಇಂದು ಯಾರೂ ಮೃತಪಟ್ಟಿಲ್ಲ. ಒಟ್ಟು ಇದುವರೆಗೂ 16,962 ಮಂದಿ ಮೃತಪಟ್ಟಿದ್ದಾರೆ.ಇನ್ನು ಸಕ್ರಿಯ ಪ್ರಕರಣಗಳು 1601 ಇದೆ.

ಇದನ್ನೂ ಓದಿ: ಕೊರೊನಾ ಕರಿಛಾಯೆ: ದಣಿವಿಲ್ಲದೇ ಹಾಡುವ ಈ ಗೀಗಿ ಪದಗಾರ್ತಿ ಕಷ್ಟ ಕೇಳೋರ್ಯಾರು?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.