ETV Bharat / city

ಇಂದಿನಿಂದ ಪದವಿ ಕಾಲೇಜು ಆರಂಭ: ಆನ್​ಲೈನ್ - ಆಫ್​ಲೈನ್ ಹಾಜರಾತಿ ಕಡ್ಡಾಯ - today Graduate Colleges reopen

ಇಂದಿನಿಂದ ರಾಜ್ಯದಲ್ಲಿ ಡಿಪ್ಲೊಮಾ ಸೇರಿದಂತೆ ಎಲ್ಲ ಪದವಿ, ಸ್ನಾತಕೋತ್ತರ ಪದವಿ, ಇಂಜಿನಿಯರಿಂಗ್ ಕೋರ್ಸ್​ಗಳಿಗೆ ಭೌತಿಕ ತರಗತಿಗಳು ಪ್ರಾರಂಭವಾಗಿವೆ.

today Graduate Colleges reopen
ಭೌತಿಕ ತರಗತಿಗಳು ಇಂದಿನಿಂದ ಆರಂಭ
author img

By

Published : Jul 26, 2021, 12:11 PM IST

ಬೆಂಗಳೂರು/ ಕೊಪ್ಪಳ: ಕೋವಿಡ್​ನಿಂದಾಗಿ ಶೈಕ್ಷಣಿಕ ವರ್ಷಕ್ಕೆ ಹೆಚ್ಚು ತೊಡಕು ಉಂಟಾಗಿತ್ತು. ಇದೀಗ 2ನೇ ಅಲೆಯ ಅಟ್ಟಹಾಸ ಕಡಿಮೆಯಾಗಿದ್ದು, ಯುಜಿಸಿ ಮಾರ್ಗಸೂಚಿಯಂತೆ ಕಾಲೇಜುಗಳಲ್ಲಿ ಭೌತಿಕ ತರಗತಿಗಳು ಇಂದಿನಿಂದ ಆರಂಭಗೊಂಡಿದೆ.

ಇಂದಿನಿಂದ ರಾಜ್ಯದಲ್ಲಿ ಡಿಪ್ಲೊಮಾ ಸೇರಿದಂತೆ ಎಲ್ಲಾ ಪದವಿ, ಸ್ನಾತಕೋತ್ತರ ಪದವಿ, ಇಂಜಿನಿಯರಿಂಗ್ ಕೋರ್ಸ್​ಗಳಿಗೆ ಭೌತಿಕ ತರಗತಿ ಶುರುವಾಗಿದೆ‌. ಆದರೆ, ವಿದ್ಯಾರ್ಥಿಗಳು ಭೌತಿಕ ತರಗತಿಗಳಿಗೆ ಹಾಜರಾಗಲೇಬೇಕು ಎಂದು ಕಡ್ಡಾಯ ಮಾಡಿಲ್ಲ. ಆಫ್ ಲೈನ್ ಅಥವಾ ಆನ್​ಲೈನ್ 2 ರಲ್ಲಿ ಯಾವುದಾದರೂ ಒಂದನ್ನು ಕಡ್ಡಾಯವಾಗಿ ಆಯ್ಕೆ ಮಾಡಿಕೊಳ್ಳಬೇಕು, ಹಾಗೂ ಹಾಜರಾತಿ ಕಡ್ಡಾಯ ಎಂದು ತಿಳಿಸಲಾಗಿದೆ.

ಭೌತಿಕ ತರಗತಿಗಳು ಇಂದಿನಿಂದ ಆರಂಭ

ಲಸಿಕೆ ಪಡೆದವರಿಗಷ್ಟೇ ಕಾಲೇಜಿಗೆ ಎಂಟ್ರಿ:

ಕೋವಿಡ್ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚನೆ ನೀಡಲಾಗಿದ್ದು, ವಿದ್ಯಾರ್ಥಿಗಳು, ಬೋಧಕ- ಬೋಧಕೇತರ ಸಿಬ್ಬಂದಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಸೂಚಿಸಲಾಗಿದೆ.‌ ಭೌತಿಕ ತರಗತಿಗೆ ಹಾಜರಾಗಬೇಕು ಅಂದರೆ ಕೋವಿಡ್ ನಿಯಮ ಪಾಲನೆ ಅಷ್ಟೇ ಅಲ್ಲದೇ, ಕೊರೊನಾ ಲಸಿಕೆ ಹಾಕಿಸಿಕೊಂಡಿರಬೇಕು.

ಈಗಾಗಲೇ ಶೇ.74 ರಷ್ಟು ವಿದ್ಯಾರ್ಥಿಗಳಿಗೆ ಲಸಿಕೆ ಹಾಕಲಾಗಿದ್ದು, ಕೆಲ ವಿಶ್ವವಿದ್ಯಾಲಯದಲ್ಲಿ ಲಸಿಕೀಕರಣ ಮುಂದುವರೆದಿದೆ. ಒಂದು ಡೋಸ್ ಲಸಿಕೆ ಪಡೆದವರಿಗಷ್ಟೇ ಕಾಲೇಜಿಗೆ ಪ್ರವೇಶ ನೀಡಲಾಗುತ್ತಿದೆ‌. ಬಹುಮುಖ್ಯವಾಗಿ ಹೊರ ರಾಜ್ಯದಿಂದ ಬರುವ ವಿದ್ಯಾರ್ಥಿಗಳಿಗೆ ಆರ್​ಟಿಪಿಸಿಆರ್ ಟೆಸ್ಟ್ ಕಡ್ಡಾಯ.

ವಿದ್ಯಾರ್ಥಿಗಳನ್ನು ಬರಮಾಡಿಕೊಂಡ ಆಡಳಿತ ಮಂಡಳಿ:

ವಿದ್ಯಾರ್ಥಿಗಳು ಕಾಲೇಜ್​ ಮುಖ ನೋಡಿ ಬಹಳ ಸಮಯವೇ ಕಳೆದಿದೆ.‌ ಹೀಗಾಗಿ ನಗರದ ಬಹುತೇಕ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಹೂ ಕೊಟ್ಟು, ಸಿಹಿ ಹಂಚಿ ನಂತರ ತರಗತಿಗಳಿಗೆ ಬರಮಾಡಿಕೊಳ್ಳಲಾಯಿತು. ಹಾಗೆಯೇ ತರಗತಿಗಳಲ್ಲೂ ಒಂದು ಡೆಸ್ಕ್​ಗೆ ಇಬ್ಬರೇ ವಿದ್ಯಾರ್ಥಿಗಳನ್ನು ಕೂರಿಸಲಾಗುತ್ತಿದೆ. ನಗರದ ಶೇಷಾದ್ರಿಪುರಂ ಕಾಲೇಜು, ವಿವೇಕಾನಂದ ಕಾಲೇಜು, ಬೆಂಗಳೂರು ನಗರ ವಿಶ್ವವಿದ್ಯಾಲಯ ಸೇರಿದಂತೆ ಬಹುತೇಕ ಕಾಲೇಜುಗಳಲ್ಲಿ ದೈಹಿಕ ಅಂತರ ವ್ಯವಸ್ಥೆ ಮಾಡಲಾಗಿತ್ತು.

ಮೊದಲ ದಿನವೇ ಪರೀಕ್ಷೆ:

ಶ್ರೀಕೃಷ್ಣದೇವರಾಯ ವಿವಿ ವ್ಯಾಪ್ತಿಯ ಪದವಿ ಕಾಲೇಜುಗಳಲ್ಲಿ ಕಾಲೇಜು ಆರಂಭದ ಮೊದಲ ದಿನವೇ ಪರೀಕ್ಷೆ ಪ್ರಾರಂಭಗೊಂಡಿವೆ‌. ಇಂದಿನಿಂದ ಬಿಎ, ಬಿಕಾಂ ಹಾಗೂ ಬಿಎಸ್​ಸಿ ಮೊದಲ ಮತ್ತು ಮೂರನೇ ಸೆಮಿಸ್ಟರ್​​ನ ಬೇಸಿಕ್ ಇಂಗ್ಲಿಷ್ ವಿಷಯದ ಪರೀಕ್ಷೆ ನಡೆಸಲಾಯಿತು. ಬೆಳಗ್ಗೆ 9 ಗಂಟೆಗೆ ಪರೀಕ್ಷೆ ಆರಂಭಗೊಂಡಿತು.

ಕೊಪ್ಪಳ ನಗರದ ಸರ್ಕಾರಿ ಪದವಿ ಕಾಲೇಜಿನಲ್ಲಿ 1,040 ವಿದ್ಯಾರ್ಥಿಗಳ ಪೈಕಿ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಕ್ಸಿನ್ ಹಾಕಿಸಿಕೊಂಡಿರಲಿಲ್ಲ. ನಂತರ ವ್ಯಾಕ್ಸಿನ್ ಹಾಕಿಸಿಕೊಂಡು ಬಂದು ಪರೀಕ್ಷೆ ಬರೆಯುವಂತೆ ವ್ಯವಸ್ಥೆ ಮಾಡಲಾಯಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.