ಬೆಂಗಳೂರು: ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದ್ದು, ರಾಜ್ಯದಲ್ಲಿ ಒಂದೇ ದಿನ 34 ಪಾಸಿಟಿವ್ ಕೇಸ್ಗಳು ದೃಢಪಟ್ಟಿವೆ.
ಒಟ್ಟು ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 313 ಕ್ಕೇರಿದೆ. ಬೆಂಗಳೂರು ನಗರ 2, ಬೆಳಗಾವಿ 20, ಕಲಬುರಗಿ 1, ಮೈಸೂರು 3, ಗದಗ 1, ವಿಜಯಪುರ 7 ಒಟ್ಟು 34 ಪ್ರಕರಣ ಇಂದು ದೃಢಪಟ್ಟಿವೆ. ಮೈಸೂರಿನ ವ್ಯಕ್ತಿಯಿಂದ ಸೋಂಕು ತಗುಲಿಸಿಕೊಂಡವರ ಸಂಖ್ಯೆ 51ಕ್ಕೆ ಏರಿಕೆಯಾಗಿದೆ.
ರಾಜ್ಯದಲ್ಲಿ ಕೊರೊನಾ ಪಾಸಿಟಿವ್ ಕೇಸ್ ಬೆಂಗಳೂರಿನಿಂದಲೇ ಆರಂಭಗೊಂಡಿದ್ದರೂ ಈಗ ಕೋವಿಡ್ -19 ಆ್ಯಕ್ಟೀವ್ ಕೇಸ್ಗಳಲ್ಲಿ ರಾಜ್ಯ ರಾಜಧಾನಿಯನ್ನೇ ಮೈಸೂರು ಹಿಂದಿಕ್ಕಿ ಮೊದಲ ಸ್ಥಾನಕ್ಕೇರಿದೆ. ಆ್ಯಕ್ಟೀವ್ ಕೋವಿಡ್ ಪಾಸಿಟಿವ್ ಕೇಸ್ ವಿಚಾರದಲ್ಲಿ ರಾಜ್ಯ ರಾಜಧಾನಿಯನ್ನೇ ಮೈಸೂರು ಓವರ್ಟೇಕ್ ಮಾಡಿದೆ. ಬೆಂಗಳೂರಿನಲ್ಲಿ ಒಟ್ಟು ಪಾಸಿಟಿವ್ ಕೇಸ್ -71 ಇದ್ದರೆ, ಮೈಸೂರಿನಲ್ಲಿ ಒಟ್ಟು ಪಾಸಿಟಿವ್ ಕೇಸ್-58 ಇವೆ. ಆದರೆ ಬೆಂಗಳೂರಿನ 71 ಕೇಸ್ಗಳಲ್ಲಿ ಗುಣಮುಖರಾಗಿ ಡಿಸ್ಚಾರ್ಜ್ ಆದವರ ಸಂಖ್ಯೆ 35 ಇದ್ದು, 3 ಸಾವು ಸಂಭವಿಸಿವೆ. ಸದ್ಯ ಬೆಂಗಳೂರಿನಲ್ಲಿರುವ ಆ್ಯಕ್ಟೀವ್ ಕೇಸ್ 34 ಮಾತ್ರ, ಮೈಸೂರಿನ 58 ಪ್ರಕರಣದಲ್ಲಿ ಡಿಸ್ಚಾರ್ಜ್ ಆದವರು 12 ಮಂದಿ. ಮೈಸೂರಿನಲ್ಲಿರುವ ಕೊರೊನಾ ಆ್ಯಕ್ಟೀವ್ ಕೇಸ್ 46, ಬೆಂಗಳೂರಿಗಿಂತ ಮೈಸೂರಿನಲ್ಲಿ 12 ಆ್ಯಕ್ಟೀವ್ ಕೊರೊನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾಗಿವೆ.
ಬೆಂಗಳೂರಿನಿಂದಲೇ ಕೊರೊನಾ ರಾಜ್ಯಕ್ಕೆ ಕಾಲಿಟ್ಟಿತ್ತು. ಕೊರೊನಾ ಪಾಸಿಟಿವ್ ಕಂಡುಬಂದ ಪಟ್ಟಿಯಲ್ಲಿ ರಾಜಧಾನಿ ಅಗ್ರಸ್ಥಾನದಲ್ಲಿಯೇ ಇದೆ. ಆದರೆ ಈಗ ಆ್ಯಕ್ಟೀವ್ ಕೇಸ್ಗಳಲ್ಲಿ ರಾಜ್ಯದಲ್ಲಿ ಮೈಸೂರು ಮೊದಲ ಸ್ಥಾನಕ್ಕೇರಿದೆ.