ETV Bharat / city

'ನನ್ನಮ್ಮ ಸೂಪರ್‌ ಸ್ಟಾರ್' ರಿಯಾಲಿಟಿ ಶೋ ಬಾಲಕಿ ಸಾವು ಪ್ರಕರಣ : ಟಿಪ್ಪರ್ ಚಾಲಕ ಅರೆಸ್ಟ್ - ಬೆಂಗಳೂರು ರಸ್ತೆ ಅಪಘಾತ

ನಿನ್ನೆ ಸಂಜೆ ವಾಜರಹಳ್ಳಿಯ ಲಿಬರ್ಟಿ ಸ್ಕೇರ್ ಅಪಾರ್ಟ್​ಮೆಂಟ್‌ನಿಂದ ಅಮೃತ ನಾಯ್ಡು ಮತ್ತು ಸಮನ್ವಿ ತೆರಳುತ್ತಿದ್ದರು. ಈ ವೇಳೆ ಕೋಣನಕುಂಟೆಯಿಂದ ನೈಸ್ ರಸ್ತೆ ಮಾರ್ಗವಾಗಿ ಹೋಗುತ್ತಿದ್ದ ಟಿಪ್ಪರ್ ಲಾರಿ ಅಮೃತ ಚಲಾಯಿಸುತ್ತಿದ್ದ ಟಿವಿಎಸ್ ಸ್ಕೂಟಿಗೆ ಡಿಕ್ಕಿ ಹೊಡೆದಿತ್ತು..

ಪಶ್ಚಿಮ ವಿಭಾಗ ಟ್ರಾಫಿಕ್ ಡಿಸಿಪಿ ಕುಲ್ ದೀಪ್ ಕುಮಾರ್ ಜೈನ್

author img

By

Published : Jan 14, 2022, 1:14 PM IST

ಬೆಂಗಳೂರು : ತಾಯಿ ಎದುರು ಪ್ರಾಣ ಕಳೆದುಕೊಂಡಿದ್ದ ರಿಯಾಲಿಟಿ ಶೋ ಸ್ಫರ್ಧಿ ಸಮನ್ವಿ ಪ್ರಾಣ ತೆಗೆದ ಯಮರೂಪಿ ಟಿಪ್ಪರ್ ಚಾಲಕನನ್ನ ಕುಮಾರಸ್ವಾಮಿ ಲೇಔಟ್ ಸಂಚಾರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಚಾಲಕ ಮಂಚೇಗೌಡನನ್ನು ಬಂಧಿಸಿರುವ ಕೆ.ಎಸ್ ಲೇಔಟ್ ಸಂಚಾರಿ ಪೊಲೀಸರು, ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಆಟೋ ಹಿಂದಿಕ್ಕುವ ಭರದಲ್ಲಿ ಸ್ಕೂಟರ್​ಗೆ ಡಿಕ್ಕಿ ಹೊಡೆದಿದ್ದಾಗಿ ವಿಚಾರಣೆ ವೇಳೆ ಚಾಲಕ ಹೇಳಿಕೆ ಕೊಟ್ಟಿದ್ದಾನೆ.

ಆರೋಪಿ ಬಂಧನ ಕುರಿತು ಮಾಹಿತಿ ನೀಡಿರುವ ಡಿಸಿಪಿ ಕುಲ್ ದೀಪ್ ಕುಮಾರ್ ಜೈನ್..

ನಿನ್ನೆ ಸಂಜೆ ವಾಜರಹಳ್ಳಿಯ ಲಿಬರ್ಟಿ ಸ್ಕೇರ್ ಅಪಾರ್ಟ್​ಮೆಂಟ್‌ನಿಂದ ಅಮೃತ ನಾಯ್ಡು ಮತ್ತು ಸಮನ್ವಿ ತೆರಳುತ್ತಿದ್ದರು. ಈ ವೇಳೆ ಕೋಣನಕುಂಟೆಯಿಂದ ನೈಸ್ ರಸ್ತೆ ಮಾರ್ಗವಾಗಿ ಹೋಗುತ್ತಿದ್ದ ಟಿಪ್ಪರ್ ಲಾರಿ ಅಮೃತ ಚಲಾಯಿಸುತ್ತಿದ್ದ ಟಿವಿಎಸ್ ಸ್ಕೂಟಿಗೆ ಡಿಕ್ಕಿ ಹೊಡೆದಿತ್ತು.

ಆಗ ಸ್ಕೂಟಿಯಲ್ಲಿದ್ದ ಸಮನ್ವಿ ಕೆಳಕ್ಕೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದಳು. ಕೂಡಲೇ ಬಾಲಕಿಯನ್ನು ಆಸ್ಪತ್ರೆಗೆ ಸೇರಿಸಲಾಗಿತ್ತಾದರೂ ಅಷ್ಟೊತ್ತಿಗಾಗಲೇ ಆಕೆ ಮೃತಪಟ್ಟಿದ್ದಾಳೆ ಎಂದು ಪಶ್ಚಿಮ ವಿಭಾಗ ಟ್ರಾಫಿಕ್ ಡಿಸಿಪಿ ಕುಲ್ ದೀಪ್ ಕುಮಾರ್ ಜೈನ್ ತಿಳಿಸಿದ್ದಾರೆ.

ಓದಿ: 'ನನ್ನಮ್ಮ ಸೂಪರ್‌ ಸ್ಟಾರ್' ರಿಯಾಲಿಟಿ ಶೋದಲ್ಲಿ ಮಿಂಚಿದ ಬಾಲಕಿ ದುರಂತ ಸಾವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.