ETV Bharat / city

ನಾಳೆ ಚಾಮರಾಜಪೇಟೆ ಬಂದ್, ಹೆಚ್ಚುವರಿ ಪೊಲೀಸರ ನಿಯೋಜನೆ: ಆರಗ ಜ್ಞಾನೇಂದ್ರ - ಚಾಮರಾಜಪೇಟೆ ಬಂದ್ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ

ನಮ್ಮ ಬೊಮ್ಮಾಯಿ ಸರ್ಕಾರ ಎಲ್ಲ ಮುಂಜಾಗ್ರತಾ ಕ್ರಮಗಳನ್ನ ತೆಗೆದುಕೊಂಡು ತಕ್ಷಣ ಪರಿಹಾರ ಕೂಡ ಕೊಡುತ್ತಿದೆ. ಸದ್ಯ ತಹಶೀಲ್ದಾರರ ಬಳಿಯೇ ಪರಿಹಾರ ಹಣವಿದ್ದು, ಅಲ್ಲೇ ಪರಿಹಾರ ವಿತರಿಸಲಾಗುತ್ತಿದೆ ಎಂದು ಗೃಹ ಸಚಿವರು ಮಾಹಿತಿ ನೀಡಿದರು.

ಆರಗ ಜ್ಞಾನೇಂದ್ರ
ಆರಗ ಜ್ಞಾನೇಂದ್ರ
author img

By

Published : Jul 11, 2022, 3:46 PM IST

ಬೆಂಗಳೂರು: ನಾಳಿನ ಚಾಮರಾಜಪೇಟೆ ಬಂದ್​​ಗೆ ಕೈಗೊಳ್ಳಬೇಕಾದ ಬಂದೋಬಸ್ತ್ ಬಗ್ಗೆ ಹಿರಿಯ ಅಧಿಕಾರಿಗಳ ಜೊತೆ ಚರ್ಚೆ ಮಾಡಿದ್ದೇನೆ. ಹೆಚ್ಚುವರಿ ಪೊಲೀಸರ ನಿಯೋಜಿಸಿ, ಕಾನೂನು ಸುವ್ಯವಸ್ಥೆ ಹದಗೆಡದ ರೀತಿಯಲ್ಲಿ ಎಲ್ಲ ಬಂದೋಬಸ್ತ್ ಮಾಡಿದ್ದೇವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಪಷ್ಟಪಡಿಸಿದ್ದಾರೆ.

ಸಿಎಂ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಾಮರಾಜಪೇಟೆ ಬಂದ್ ಸಂಬಂಧ ನಾನು ಈಗಾಗಲೇ ಅಧಿಕಾರಿಗಳ ಜೊತೆ ಮಾತನಾಡಿ, ಕಮಿಷನರ್ ನೇತೃತ್ವದಲ್ಲಿ ಭಾರೀ ಬಂದೋಬಸ್ತ್ ಮಾಡುವಂತೆ ಸೂಚನೆ ನೀಡಿದ್ದೇನೆ ಎಂದರು.

ಮಳೆ ಹಾನಿ ಪೀಡಿತ ಪ್ರದೇಶಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರು ಭೇಟಿ ನೀಡುತ್ತಿಲ್ಲ ಎಂಬ ಆರೋಪ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಗೃಹ ಸಚಿವರು, ಯಾವ್ಯಾವ ಏರಿಯಾದಲ್ಲಿ ಮಳೆ ಹಾನಿಯಾಗಿದೆಯೋ ಅಲ್ಲಿ ನಮ್ಮ ಸಚಿವರು ಹೋಗುತ್ತಿದ್ದಾರೆ. ಎಲ್ಲರೂ ಮಳೆಹಾನಿ ಪ್ರದೇಶಗಳಿಗೆ ಹೋಗಬೇಕು. ನಾನು ಕೂಡ ಹೋಗಿದ್ದೆ. ಆಗುಂಬೆ ಬಳಿ ಗುಡ್ಡು ಕುಸಿದು ರಸ್ತೆ ಕಟ್ ಆಗಿ ಟ್ರಾಫಿಕ್ ಜಾಮ್ ಆಗಿತ್ತು.

ಶಿವಮೊಗ್ಗ ಮತ್ತು ಉಡುಪಿ ಹೆದ್ದಾರಿ ಕಟ್ಟಾಗಿದೆ. ನಮ್ಮ ಇಂಜಿನೀಯರ್​​ಗಳಿಗೆ ಕೂಡಲೇ ದುರಸ್ತಿ ಮಾಡುವಂತೆ ಆದೇಶ ಕೊಟ್ಟಿದ್ದೇನೆ. ಎರಡು ದಿನ ಆ ರಸ್ತೆ ಬಂದ್ ಮಾಡಿದ್ದೇವೆ. ಕೊಡುಗಿನಲ್ಲೂ 24/7 ಸಮಯ ನಮ್ಮ ಶಾಸಕರು ಜನರ ಜೊತೆ ಇದ್ದಾರೆ ಎಂದು ತಿಳಿಸಿದರು.

ನಾಗೇಶ್ ಅವರು ಪಠ್ಯಪುಸ್ತಕದಲ್ಲಿ ಬ್ಯುಸಿ ಇದ್ದರು. ಈಗ ಎಲ್ಲರೂ ಹೋಗ್ತಾರೆ. ನಮ್ಮ ಬೊಮ್ಮಾಯಿ ಸರ್ಕಾರ ಎಲ್ಲ ಮುಂಜಾಗ್ರತಾ ಕ್ರಮಗಳನ್ನ ತೆಗೆದುಕೊಂಡು ತಕ್ಷಣ ಪರಿಹಾರ ಕೂಡ ಕೊಡುತ್ತಿದೆ. ಇಷ್ಟು ದಿನ ಜಿಲ್ಲಾಧಿಕಾರಿಗಳ ಬಳಿ ಹಣ ಇರಿಸಲಾಗುತ್ತಿತ್ತು. ಆದರೆ, ನಮ್ಮ ಸರ್ಕಾರ ತಕ್ಷಣ ಪರಿಹಾರ ಕೊಡಲು ತಹಶೀಲ್ದಾರರ ಬಳಿ ಕೂಡ ಹಣ ಇಟ್ಟಿದೆ. ಮನೆ ಹಾನಿ ಪರಿಹಾರಕ್ಕಾಗಿ ತಕ್ಷಣ 10 ಸಾವಿರ ಕೊಡ್ತಿದೆ ಎಂದು ಮಾಹಿತಿ ನೀಡಿದರು.

ಸಿದ್ದರಾಮಯ್ಯ, ಹೆಚ್​​.ಡಿ.ಕುಮಾರಸ್ವಾಮಿ ಸೇರಿದಂತೆ ಎಡಪಂಥೀಯ ಸಾಹಿತಿಗಳಿಗೆ ಕೊಲೆ ಬೆದರಿಕೆ ಪತ್ರದ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಆರಗ ಜ್ಞಾನೇಂದ್ರ, ಈ ಬಗ್ಗೆ ದೂರು ಕೊಟ್ಟು ಸೂಕ್ತ ದಾಖಲಾತಿ‌ ನೀಡಲಿ. ರಕ್ಷಣೆ ಬೇಕು ಅಂದರೆ ನಾವು ಕೊಡಲು ಸಿದ್ಧ. ದಾಖಲೆ ಕೊಟ್ರೆ ತನಿಖೆ ಮಾಡುತ್ತೇವೆ ಎಂದರು.

(ಇದನ್ನೂ ಓದಿ: ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣ: ಮುಂದುವರಿದ ಸಿಐಡಿ ತನಿಖೆ)

ETV Bharat Logo

Copyright © 2024 Ushodaya Enterprises Pvt. Ltd., All Rights Reserved.