ETV Bharat / city

ಮೊಬೈಲ್ ಕಳ್ಳತನ ಮಾಡುತ್ತಿದ್ದ ಮೂವರು ಬಾಲ್ಯಸ್ನೇಹಿತರು ಅರೆಸ್ಟ್​ - ಮೊಬೈಲ್ ಕಳ್ಳತನ

ಸಾರ್ವಜನಿಕರಿಂದ ಮೊಬೈಲ್ ಸುಲಿಗೆ ಮಾಡಿ ಮೋಜಿನ ಜೀವನ ಮಾಡುತ್ತಿದ್ದ ಮೂವರು ಬಾಲ್ಯಸ್ನೇಹಿತರನ್ನು ಯಲಹಂಕ ಪೊಲೀಸರು ಬಂಧಿಸಿದ್ದಾರೆ.

ಮೂವರು ಬಾಲ್ಯ ಸ್ನೇಹಿತರ ಬಂಧನ
ಮೂವರು ಬಾಲ್ಯ ಸ್ನೇಹಿತರ ಬಂಧನ
author img

By

Published : May 16, 2022, 9:44 AM IST

ಬೆಂಗಳೂರು: ಬಾಲ್ಯದಲ್ಲಿ ಸಣ್ಣಪುಟ್ಟ ಕಳ್ಳತನ ಆರಂಭಿಸಿ ಇದೀಗ ಮೊಬೈಲ್ ಕಳ್ಳತನದಲ್ಲಿ ಸಕ್ರಿಯವಾಗಿದ್ದ ಮೂವರು ಖದೀಮರನ್ನು ಯಲಹಂಕ ನ್ಯೂಟೌನ್ ಪೊಲೀಸರು ಬಂಧಿಸಿದ್ದಾರೆ. ದರ್ಶನ್( 21), ದಿನೇಶ್(23), ಹಾಗೂ ಜಾರ್ಜ್( 20) ಬಂಧಿತರು.

ದರ್ಶನ್ ಬಾಲ್ಯದಲ್ಲೇ ಪೋಷಕರನ್ನು ಕಳೆದುಕೊಂಡಿದ್ದ. ಬಳಿಕ ದಿನೇಶ್ ಹಾಗೂ ಜಾರ್ಜ್ ಜೊತೆ ಗೂಡಿ ಸಣ್ಣಪುಟ್ಟ ಕಳ್ಳತನ ಆರಂಭಿಸಿದ್ದ. ನಂತರ ಬೈಕ್ ಕದಿಯೋಕೆ ಶುರು ಮಾಡಿದ್ದರು. ಮೂವರೂ ಸ್ನೇಹಿತರು 2019 ರಲ್ಲಿ ಬೈಕ್ ಕಳ್ಳತನ ಪ್ರಕರಣವೊಂದರಲ್ಲಿ ಜೈಲು ಸೇರಿ ಹೊರಬಂದಿದ್ದರು. ಆದರೂ ಹಳೇ ಚಾಳಿ ಬಿಡದೆ ಮೊಬೈಲ್ ಕಳ್ಳತನಕ್ಕೆ ಇಳಿದಿದ್ದರು.

ಇತ್ತೀಚೆಗೆ ಯಲಹಂಕ ನ್ಯೂಟೌನ್​ನ ನಾಗೇನಹಳ್ಳಿ ರೈಲ್ವೆ ಸೇತುವೆ ಬಳಿ ಯುವತಿಯೊಬ್ಬಳ ಮೊಬೈಲ್‌ ಕಸಿದುಕೊಂಡು ಪರಾರಿಯಾಗಿದ್ದರು. ಈ ಕುರಿತು ಯಲಹಂಕ ಉಪ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು, ಸದ್ಯಕ್ಕೆ ಮೂವರನ್ನು ಬಂಧಿಸಿ, 1.5 ಲಕ್ಷ ಮೌಲ್ಯದ 9 ಮೊಬೈಲ್ ಫೋನ್‌ಗಳನ್ನು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: 'ತಾಯಂದಿರ ದಿನದಂತೆ ಪತ್ನಿಯರ ದಿನವನ್ನೂ ಆಚರಿಸಬೇಕು': ಕೇಂದ್ರ ಸಚಿವ ಅಠಾವಳೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.