ETV Bharat / city

ಈ ಬಾರಿ ಹಿಂಗಾರು , ಬೇಸಿಗೆ ಬೆಳೆಯಲ್ಲಿ ತೀವ್ರ ಕುಸಿತ: ಉತ್ಪಾದನೆಯಲ್ಲಾದ ಇಳಿಕೆ ಎಷ್ಟು?

author img

By

Published : May 6, 2019, 7:20 PM IST

ಈ ಬಾರಿ ರಾಜ್ಯವನ್ನು ಬರಗಾಲ ಬೆನ್ನತ್ತಿದೆ. ಹೀಗಾಗಿ ಹಿಂಗಾರು ಹಾಗೂ ಬೇಸಿಗೆ ಹಂಗಾಮು ಬೆಳೆಗಳಲ್ಲಿ ತೀವ್ರ ಕುಸಿತ ಕಂಡಿದೆ.

ಉತ್ಪಾದನೆಯಲ್ಲಿ ಕುಸಿತ

ಬೆಂಗಳೂರು: ರಾಜ್ಯದಲ್ಲಿ ತೀವ್ರ ಬರಗಾಲ‌ ಎದುರಾದ ಹಿನ್ನೆಲೆ ಹಿಂಗಾರು ಹಾಗೂ ಬೇಸಿಗೆ ಹಂಗಾಮು ಬೆಳೆಗಳಲ್ಲಿ ತೀವ್ರ ಕುಸಿತ ಕಂಡಿದೆ.

ಗದಗ, ಬಾಗಲಕೋಟೆ, ಕೊಪ್ಪಳ, ಬಳ್ಳಾರಿ, ರಾಯಚೂರು, ಕಲಬುರ್ಗಿ, ಯಾದಗಿರಿ, ಬೀದರ್, ಬೆಳಗಾವಿ ಹಾಗೂ ವಿಜಯಪುರದಲ್ಲಿ ಬಿತ್ತನೆಯಾದ ಹಿಂಗಾರಿನ ಜೋಳ ಹಾಗೂ ಕಡಲೆ ಬೆಳೆಗಳು ತೇವಾಂಶ ಕೊರತೆಯಿಂದ ನಾಶವಾಗಿದೆ. ಬರದ ಹಿನ್ನೆಲೆ ಬೆಳೆಯಲ್ಲಿ ಕುಸಿತ ಕಂಡ ಕಾರಣ ಆಹಾರ ಧಾನ್ಯ ಉತ್ಪಾದನೆಯಲ್ಲೂ ಸುಮಾರು 20% ಇಳಿಕೆ ಕಂಡಿದೆ ಎಂದು ಕೃಷಿ ಇಲಾಖೆ ನಿರ್ದೇಶಕ ಶ್ರೀನಿವಾಸ್​ ತಿಳಿಸಿದ್ದಾರೆ.

ಹಿಂಗಾರಿನ ಪ್ರಮುಖ‌ ಬೆಳೆಯಾದ ಬೇಳೆ ಕಾಳು ಉತ್ಪಾದನೆ ನೆಲ ಕಚ್ಚಿದೆ. ಹಿಂಗಾರು ಮಳೆ‌ ಕೈಕೊಟ್ಟ ಕಾರಣ 2017-18ಕ್ಕೆ ಹೋಲಿಸಿದರೆ 2018-19ರ ಬೇಸಿಗೆ ಹಂಗಾಮು ಬೆಳೆಗಳಲ್ಲಿ ತೀವ್ರ ಕುಸಿತ ಕಾಣುವಂತಾಗಿದೆ. 2018- 19 ರಲ್ಲಿ ಹಿಂಗಾರು ಹಂಗಾಮಿನಲ್ಲಿ ಕೃಷಿ ಬೆಳೆಗಳ ಪ್ರಸ್ತಾವಿತ ಬಿತ್ತನೆ ಗುರಿ 31.80 ಲಕ್ಷ ಹೆಕ್ಟೇರ್ ಇತ್ತು.ಅದರಲ್ಲಿ 27.89 ಲಕ್ಷ ಹೆಕ್ಟೇರ್ ವಿಸ್ತೀರ್ಣದಲ್ಲಿ ಬಿತ್ತನೆ ಸಾಧ್ಯವಾಗಿದೆ.ಅಂದರೆ ಶೇ.88 ರಷ್ಟು ಮಾತ್ರ ಬಿತ್ತನೆ ಆಗಿದೆ. 2017-18ನೇ ಸಾಲಿನಲ್ಲಿ ಇದೇ ಅವಧಿಗೆ 30.47 ಲಕ್ಷ ಹೆಕ್ಟೇರ್ ವಿಸ್ತೀರ್ಣದಲ್ಲಿ ಬಿತ್ತನೆಯಾಗಿತ್ತು.

ಕೃಷಿ ಇಲಾಖೆ ನಿರ್ದೇಶಕ ಶ್ರೀನಿವಾಸ್​

2018-19 ಸಾಲಿನ‌ ಬೇಸಿಗೆ ಹಂಗಾಮು (ಡಿಸೆಂಬರ್-ಮಾರ್ಚ್)ನಲ್ಲಿ ಕೃಷಿ ಬೆಳೆಗಳ ಪ್ರಸ್ತಾವಿತ ಬಿತ್ತನೆ ಗುರಿ 5.41 ಲಕ್ಷ ಹೆಕ್ಟೇರ್ ಇಡಲಾಗಿತ್ತು. ಆದರೆ, ವಾಸ್ತವದಲ್ಲಿ ಕೇವಲ‌ 2.81 ಲಕ್ಷ ಹೆಕ್ಟೇರ್ ವಿಸ್ತೀರ್ಣದಲ್ಲಿ ಬಿತ್ತನೆಯಾಗಿದೆ. ಈ ಬಾರಿ ಒಟ್ಟು 26.55 ಲಕ್ಷ ಟನ್ ಆಹಾರ ಧಾನ್ಯಗಳನ್ನು ಉತ್ಪಾದಿಸುವ ಗುರಿ ಹೊಂದಲಾಗಿತ್ತು.ಆದರೆ, ತೀವ್ರ ಬರದ ಹಿನ್ನೆಲೆ ಉತ್ಪಾದನೆಯಲ್ಲಿ ಕುಸಿತ ಕಾಣಲಿದೆ ಎಂದು ಅಂದಾಜಿಸಲಾಗಿದೆ.

Intro:Rabhu and summer cropBody:KN_BNG_01_06_RABHICROP_SUMMERCROP_SHORTFALL_SCRIPT_VENKAT_7201951

ಈ ಬಾರಿ ಹಿಂಗಾರು ಮತ್ತು ಬೇಸಿಗೆ ಬೆಳೆಯಲ್ಲಿ ತೀವ್ರ ಕುಸಿತ: ಉತ್ಪಾದನೆಯಲ್ಲಿನ ಕುಸಿತ ಎಷ್ಟು ಗೊತ್ತಾ?

ಬೆಂಗಳೂರು: ರಾಜ್ಯದಲ್ಲಿ ತೀವ್ರ ಬರಗಾಲ‌ ಎದುರಾದ ಹಿನ್ನೆಲೆಯಲ್ಲಿ‌ ಹಿಂಗಾರು ಹಂಗಾಮು ಹಾಗೂ ಬೇಸಿಗೆ ಹಂಗಾಮು ಬೆಳೆಗಳಲ್ಲಿ ತೀವ್ರ ಕುಸಿತ ಕಂಡಿದೆ. ಇದರಿಂದ ಹಿಂಗಾರು ಹಂಗಾಮಿನ ಪ್ರಮುಖ‌ ಬೇಳೆ ಕಾಳು ಬೆಳೆಗಳ ಉತ್ಪಾದನೆಯಲ್ಲಿ ಕುಸಿತ ದಾಖಲಾಗಿದೆ.

ರಾಜ್ಯವನ್ನು ಬರಗಾಲ ಬಿಟ್ಟು ಬಿಡದೆ ಕಾಡುತ್ತಿದೆ. ಸತತ ಬರಗಾಲದ ಹಿನ್ನೆಲೆ ರಾಜ್ಯದ ಕೃಷಿ ಮೇಲೆ‌ ಎಲ್ಲಿಲ್ಲದ‌ ಪ್ರಭಾವ ಬೀರಿದೆ.‌ ಅದರಲ್ಲೂ ಈ ಬಾರಿ ಹಿಂಗಾರು ಮಳೆ‌ ಕೈಕೊಟ್ಟ ಕಾರಣ 2017-18ಕ್ಕೆ ಹೋಲಿಸಿದರೆ 2018-19ರ ಹಿಂಗಾರು‌‌‌ ಹಂಗಾಮು ಹಾಗೂ ಬೇಸಿಗೆ ಹಂಗಾಮು ಬೆಳೆಗಳಲ್ಲಿ ತೀವ್ರ ಕುಸಿತ ಕಾಣುವಂತಾಗಿದೆ.

ಹಿಂಗಾರು ಹಂಗಾಮು‌‌ ಬೆಳೆಗಳನ್ನು ಅಕ್ಟೋಬರ್ ನಿಂದ ಡಿಸೆಂಬರ್ ತನಕ ಬೆಳೆಯಲಾಗುತ್ತದೆ. ಇನ್ನು ಬೇಸಿಗೆ ಹಂಗಾಮು ಬೆಳೆಗಳನ್ನು ಜನವರಿಯಿಂದ ಮಾರ್ಚ್ ವರೆಗೆ ಬೆಳೆಯಲಾಗುತ್ತದೆ. 2018-2019 ಸಾಲಿನ ಹಿಂಗಾರು ಬೆಳೆ‌ ಹಾಗೂ ಬೇಸಿಗೆ ಬೆಳೆಯಲ್ಲಿ ತೀವ್ರ ಕುಸಿತ ಕಂಡಿದೆ.

ಹಿಂಗಾರು ಬೆಳೆಯಲ್ಲಿ ಕುಸಿತ:

ಹಿಂಗಾರು ಹಂಗಾಮಿನಲ್ಲಿ ಕೃಷಿ ಬೆಳೆಗಳ ಪ್ರಸ್ತಾವಿತ ಬಿತ್ತನೆ ಗುರಿ 31.80 ಲಕ್ಷ ಹೆಕ್ಟೇರ್ ಇತ್ತು. ಆದರೆ, ಅದಕ್ಕೆ ಪ್ರತಿಯಾಗಿ 27.89 ಲಕ್ಷ ಹೆಕ್ಟೇರ್ ವಿಸ್ತೀರ್ಣದಲ್ಲಿ ಬಿತ್ತನೆ ಸಾಧ್ಯವಾಗಿದೆ. ಅಂದರೆ ಶೇ.88 ರಷ್ಟು ಮಾತ್ರ ಬಿತ್ತನೆ ಆಗಿದೆ. 2017-18ನೇ ಸಾಲಿನಲ್ಲಿ ಇದೇ ಅವಧಿಗೆ 30.47 ಲಕ್ಷ ಹೆಕ್ಟೇರ್ ವಿಸ್ತೀರ್ಣದಲ್ಲಿ ಬಿತ್ತನೆಯಾಗಿದೆ.

ಗದಗ, ಬಾಗಲಕೋಟೆ, ಕೊಪ್ಪಳ, ಬಳ್ಳಾರಿ, ರಾಯಚೂರು, ಕಲಬುರ್ಗಿ, ಯಾದಗಿರಿ, ಬೀದರ್, ಬೆಳಗಾವಿ ಹಾಗೂ ವಿಜಯಪುರ ದಲ್ಲಿ ಬಿತ್ತನೆಯಾದ ಹಿಂಗಾರಿ ಜೋಳ ಹಾಗೂ ಕಡಲೆ ಬೆಳೆಗಳು ತೇವಾಂಶ ಕೊರತೆಯಿಂದ ನಾಶವಾಗಿದೆ. ಒಟ್ಟು 26.55 ಲಕ್ಷ ಟನ್ ಆಹಾರ ಧಾನ್ಯಗಳನ್ನು ಉತ್ಪಾದಿಸುವ ಗುರಿ ಹೊಂದಲಾಗಿತ್ತು. ಬರದ ಹಿನ್ನೆಲೆ ಬೆಳೆಯಲ್ಲಿ ಕುಸಿತ ಕಂಡ ಕಾರಣ ಆಹಾರ ಧಾನ್ಯ ಉತ್ಪಾದನೆಯಲ್ಲೂ ಸುಮಾರು 20% ಇಳಿಕೆ ಕಂಡಿದೆ.

ಬೇಸಿಗೆ ಹಂಗಾಮು ಬೆಳೆಯಲ್ಲೂ ಕುಸಿತ:

2018-19 ಸಾಲಿನ‌ ಬೇಸಿಗೆ ಹಂಗಾಮು (ಡಿಸೆಂಬರ್-ಮಾರ್ಚ್)ನಲ್ಲಿ ಕೃಷಿ ಬೆಳೆಗಳ ಪ್ರಸ್ತಾವಿತ ಬಿತ್ತನೆ ಗುರಿ 5.41 ಲಕ್ಷ ಹೆಕ್ಟೇರ್ ಇಡಲಾಗಿತ್ತು. ಆದರೆ, ವಾಸ್ತವದಲ್ಲಿ ಕೇವಲ‌ 2.81 ಲಕ್ಷ ಹೆಕ್ಟೇರ್ ವಿಸ್ತೀರ್ಣದಲ್ಲಿ ಬಿತ್ತನೆಯಾಗಿದೆ. ಅಂದರೆ ಶೇ.52ರಲ್ಲಿ ಬಿತ್ತನೆಯಾಗಿದೆ.

ಹಿಂದಿನ ವರ್ಷದಲ್ಲಿ ಇದೇ ಅವಧಿಗೆ 4.65 ಲಕ್ಷ ಹೆಕ್ಟೇರ್ ವಿಸ್ತೀರ್ಣದಲ್ಲಿ ಬಿತ್ತನೆಯಾಗಿದೆ. ‌ಸಾಮಾನ್ಯವಾಗಿ ಮಾರ್ಚ್ ಅಂತ್ಯಕ್ಕೆ 4.34 ಲಕ್ಷ ಟನ್ ಹೆಕ್ಟೇರ್ ವಿಸ್ತೀರ್ಣದಲ್ಲಿ ಬಿತ್ತನೆ ಪೂರ್ಣಗೊಳ್ಳುತ್ತದೆ. ಬೇಸಿಗೆ ಹಂಗಾಮಿನಲ್ಲಿ ಒಟ್ಟು 8.74 ಲಕ್ಷ ಟನ್ ಆಹಾರ ಧಾನ್ಯಗಳ ಉತ್ಪಾದನೆ ಗುರಿ ಹೊಂದಲಾಗಿತ್ತು. ಆದರೆ, ಈ ಬಾರಿ ತೀವ್ರ ಬರದ ಹಿನ್ನೆಲೆ ಉತ್ಪಾದನೆಯಲ್ಲಿ ಕುಸಿತ ಕಾಣಲಿದೆ.

ಬೈಟ್- ಶ್ರೀನಿವಾಸ್, ನಿರ್ದೇಶಕರು, ಕೃಷಿ ಇಲಾಖೆConclusion:Venkat
ETV Bharat Logo

Copyright © 2024 Ushodaya Enterprises Pvt. Ltd., All Rights Reserved.