ETV Bharat / city

ಮನೆ ಕಳೆದುಕೊಂಡವರಿಗೆ ಪರಿಹಾರ ಧನ ಹೆಚ್ಚಳಕ್ಕೆ ಚಿಂತನೆ: ಜಗದೀಶ್ ಶೆಟ್ಟರ್ - ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್

ಮನೆ ಕಳೆದುಕೊಂಡವರಿಗೆ ಪರಿಹಾರ ಧನ ತಕ್ಷಣವೇ ನೀಡುವ ಕೆಲಸವಾಗುತ್ತಿದೆ. ಈಗ ಘೋಷಣೆ ಮಾಡಿರುವ ಪರಿಹಾರ ಧನ ಸಾಲುವುದಿಲ್ಲ. ಮತ್ತಷ್ಟು ಹೆಚ್ಚಳ ಮಾಡಿ ಎಂದು ನಾನು ಮನವಿ ಮಾಡಿದ್ದೇನೆ. ಮನೆ ಕಳೆದುಕೊಂಡವರಿಗೆ ಪರಿಹಾರ ಧನ ಹೆಚ್ಚಳದ ಬಗ್ಗೆ ಆಲೋಚನೆ ನಡೆಯುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.

ಜಗದೀಶ್ ಶೆಟ್ಟರ್
author img

By

Published : Aug 14, 2019, 12:45 PM IST

ಬೆಂಗಳೂರು: ನೆರೆ-ಪ್ರವಾಹದಿಂದಾಗಿ ಮನೆ ಕಳೆದುಕೊಂಡವರಿಗೆ ಪರಿಹಾರ ಧನ ಹೆಚ್ಚಳದ ಬಗ್ಗೆ ಚಿಂತನೆ ನಡೆಯುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

ಡಾಲರ್ಸ್ ಕಾಲೋನಿಯಲ್ಲಿರುವ ಸಿಎಂ‌ ನಿವಾಸದ ಬಳಿ ಮಾತಾನಾಡಿದ ಅವರು, ಕೇಂದ್ರ ಗೃಹ ಸಚಿವರೇ ಬಂದು ರಾಜ್ಯದಲ್ಲಿ ಸರ್ವೆ ಮಾಡಿದ್ದಾರೆ. ಸಿಎಂ ಕೂಡಾ ಅಮಿತ್ ಶಾ ಅವರಿಗೆ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದಾರೆ. ಕೇಂದ್ರದಿಂದ ಹಣ ಬೇಗ ಬಿಡುಗಡೆ ಆಗುವ ವಿಶ್ವಾಸ ಇದೆ ಎಂದರು.

ನಾನು ಮೂರ್ನಾಲ್ಕು ಜಿಲ್ಲೆಗಳಿಗೆ ಭೇಟಿ ನೀಡಿದ್ದೆ. ಎಲ್ಲಾ ಅಧಿಕಾರಿಗಳು ಹಗಲು-ರಾತ್ರಿ ಕೆಲಸ ಮಾಡುತ್ತಿದ್ದಾರೆ. ಮನೆ ಕಳೆದುಕೊಂಡವರಿಗೆ ಪರಿಹಾರ ಧನ ತಕ್ಷಣವೇ ನೀಡುವ ಕೆಲಸವಾಗುತ್ತಿದೆ. ಹಿಂದೆ ತಹಶಿಲ್ದಾರ್ ಕಚೇರಿಗೆ ಅಲೆಯಬೇಕಿತ್ತು. ಆದರೆ ಈಗ ಅಂತಹ ಪರಿಸ್ಥಿತಿ ಇಲ್ಲ. ಮನೆ ಬಿದ್ದವರಿಗೆ ಈಗ ಘೋಷಣೆ ಮಾಡಿರೋ ಪರಿಹಾರ ಧನ ಸಾಲಲ್ಲ. ಮತ್ತಷ್ಟು ಹೆಚ್ಚಳ ಮಾಡಿ ಎಂದು ನಾನು ಕೂಡಾ ಮನವಿ ಮಾಡಿದ್ದೇನೆ ಎಂದು ಶೆಟ್ಟರ್​ ತಿಳಿಸಿದರು.

ಜಗದೀಶ್ ಶೆಟ್ಟರ್ ಮಾತು

ಇನ್ನು ಕೇಂದ್ರ ಸರ್ಕಾರದಿಂದಲೂ ಸಹ ಹೆಚ್ಚಿನ ಪರಿಹಾರ ಸಿಗುವ ಭರವಸೆ ಇದೆ. ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಮಾಡುವ ವಿಚಾರ ಇರಲಿ. ‌ರಾಜ್ಯದ ನಿರಾಶ್ರಿತರಿಗೆ ಮೊದಲು ಸಹಾಯ ಮಾಡಬೇಕು. ನೆರೆಪೀಡಿತ ಪ್ರದೇಶಗಳಿಗೆ ಪ್ರಧಾನಿ ಮೋದಿ ಭೇಟಿ ನೀಡಿದರೆ ಒಳ್ಳೆಯದು. ಆದರೆ ನೆರೆಯ ಹೊಣೆ ಗೃಹ ಇಲಾಖೆಗೆ ಬರಲಿದೆ. ಗೃಹ ಸಚಿವರು ಈಗಾಗಲೇ ಭೇಟಿ ನೀಡಿದ್ದಾರೆ ಎಂದು ಮಾಜಿ ಸಿಎಂ ಜಗದೀಶ್​ ಶೆಟ್ಟರ್​ ತಿಳಿಸಿದರು.

Intro:ಮನೆ ಕಳೆದುಕೊಂಡವರಿಗೆ ಪರಿಹಾರ ಧನ ಹೆಚ್ಚಳದ ಬಗ್ಗೆ ಆಲೋಚನೆ; ಜಗದೀಶ್ ಶೆಟ್ಟರ್..

ಬೆಂಗಳೂರು: ನೆರೆ- ಪ್ರವಾಹದಿಂದಾಗಿ ಮನೆ ಕಳೆದುಕೊಂಡವರಿಗೆ ಪರಿಹಾರ ಧನ ಹೆಚ್ಚಳದ ಬಗ್ಗೆ ಆಲೋಚನೆ ನಡೆಯುತ್ತಿದೆ ಅಂತ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ತಿಳಿಸಿದರು..
ಡಾಲರ್ಸ್ ಕಾಲೋನಿಯಲ್ಲಿರುವ ಸಿಎಂ‌ ನಿವಾಸಕ್ಕೆ ಬಂದು ಮಾತಾನಾಡಿದ ಅವರು ಕೇಂದ್ರ ಗೃಹ ಸಚಿವರೇ ಬಂದು ರಾಜ್ಯದಲ್ಲಿ ಸರ್ವೆ ಮಾಡಿದ್ದಾರೆ..

ಸಿಎಂ ಕೂಡಾ ಅಮಿತ್ ಶಾ ಅವರಿಗೆ ಅನುದಾನ ಬಿಡುಗಡೆ ಮಾಡಲು ಮನವಿ ಮಾಡಿದ್ದಾರೆ.. ಕೇಂದ್ರದಿಂದ ಹಣ ಬಿಡುಗಡೆ ಆಗೋ ವಿಶ್ವಾಸ ಇದೆ.. ನಾನೂ ಮೂರ್ನಾಲ್ಕು ಜಿಲ್ಲೆಗಳಿಗೆ ಹೋಗಿದ್ದೆ. ಎಲ್ಲಾ ಅಧಿಕಾರಿಗಳು ಹಗಲು ರಾತ್ರಿ ಕೆಲಸ ಮಾಡ್ತಿದಾರೆ.. ಮನೆ ಕಳೆದುಕೊಂಡವರಿಗೆ ಪರಿಹಾರ ಧನ ತಕ್ಷಣವೇ ನೀಡುವ ಕೆಲಸ ಆಗ್ತಿದೆ.. ಹಿಂದೆ ತಹಶೀಲ್ದಾರ್ ಕಚೇರಿಗೆ ಅಲೆಯಬೇಕಿತ್ತು.ಆದರೆ ಈಗ ಹಾಗಿಲ್ಲ
ಮನೆ ಬಿದ್ದವರಿಗೆ ಈಗ ಘೋಷಣೆ ಮಾಡಿರೋ ಪರಿಹಾರ ಧನ ಸಾಲಲ್ಲ.. ಮತ್ತಷ್ಟು ಹೆಚ್ಚಳ ಮಾಡಿ ಎಂದು ನಾನೂ ಮನವಿ ಮಾಡಿದ್ದೇನೆ.. ಮನೆ ಕಳೆದುಕೊಂಡವರಿಗೆ ಪರಿಹಾರ ಧನ ಹೆಚ್ಚಳದ ಬಗ್ಗೆ ಆಲೋಚನೆ ನಡೆಯುತ್ತಿದೆ ಅಂತ ತಿಳಿಸಿದರು..

ಕೇಂದ್ರದಿಂದ ಹೆಚ್ಚಿನ ಪರಿಹಾರ ಸಿಗುವ ಭರವಸೆ ಇದೆ.. ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಮತ್ತೊಂದು ಏನೆ ಇರಲಿ..‌ನಮಗೆ ಮೊದಲು ನಿರಾಶ್ರಿತರಿಗೆ ಸಹಾಯ ಮಾಡಬೇಕು .. ನೆರೆಪೀಡಿತ ಪ್ರದೇಶಗಳಿಗೆ ಪ್ರಧಾನಿ ಮೋದಿ ಭೇಟಿ ನೀಡಿದರೆ ಒಳ್ಳೆಯದು.. ಆದರೆ ನೆರೆಯ ಹೊಣೆ ಗೃಹ ಇಲಾಖೆಗೆ ಬರಲಿದೆ. ಗೃಹ ಸಚಿವರು ಈಗಾಗಲೇ ಭೇಟಿ ನೀಡಿದ್ದಾರೆ ಅಂತ ತಿಳಿಸಿದರು..

KN_BNG_02_JAGADISH_SHETTER_BYTE_7201801Body:..Conclusion:..
ETV Bharat Logo

Copyright © 2024 Ushodaya Enterprises Pvt. Ltd., All Rights Reserved.