ETV Bharat / city

ಬೆಂಗಳೂರಲ್ಲಿ ಹಾಡಹಗಲೇ ಪೆಟ್ರೋಲ್​ ಬಂಕ್ ಸಿಬ್ಬಂದಿ ಮೇಲೆ ಲಾಂಗ್ ಬೀಸಿದ ಖದೀಮ - ಪೆಟ್ರೋಲ್​ ಬಂಕ್ ಸಿಬ್ಬಂದಿ ಮೇಲೆ ಲಾಂಗ್ ಬೀಸಿದ ಖದೀಮ

ಮೈಸೂರು ರಸ್ತೆಯಲ್ಲಿರುವ ಇಂಡಿಯನ್ ಪೆಟ್ರೋಲ್ ಬಂಕ್​ ಮುಂಭಾಗ ವಿಳಾಸ ಕೇಳುವ ಸೋಗಿನಲ್ಲಿ ಹೆಲ್ಮೆಟ್ ಧರಿಸಿಕೊಂಡು ಬಂದ ವ್ಯಕ್ತಿಯೊಬ್ಬ ಸಿಬ್ಬಂದಿಯೊಂದಿಗೆ ವಾಗ್ವಾದಕ್ಕಿಳಿದು ಲಾಂಗ್ ತೋರಿಸಿ ಹಣದ ಬ್ಯಾಗ್ ಕಸಿಯುವ ಯತ್ನ ನಡೆಸಿದ್ದಾನೆ.

petrol bunk
petrol bunk
author img

By

Published : Nov 10, 2021, 1:41 PM IST

Updated : Nov 10, 2021, 2:04 PM IST

ಬೆಂಗಳೂರು: ವಿಳಾಸ ಕೇಳುವ ನೆಪದಲ್ಲಿ ಪೆಟ್ರೋಲ್ ಬಂಕ್ ಸಿಬ್ಬಂದಿ ಜೊತೆ ವಾಗ್ವಾದಕ್ಕಿಳಿದ ಖದೀಮನೋರ್ವ ಏಕಾಏಕಿ ಲಾಂಗ್ ತೋರಿಸಿ ಹಣದ ಬ್ಯಾಗ್ ಕಸಿಯುವ ವಿಫಲ ಯತ್ನ ನಡೆಸಿರುವ ಘಟನೆ ಬ್ಯಾಟರಾಯನಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಕಳೆದ ಎರಡು ದಿನಗಳ ಹಿಂದೆ ಮೈಸೂರು ರಸ್ತೆಯಲ್ಲಿರುವ ಇಂಡಿಯನ್ ಪೆಟ್ರೋಲ್ ಬಂಕ್​ ಮುಂದೆ ವಿಳಾಸ ಕೇಳುವ ಸೋಗಿನಲ್ಲಿ ಹೆಲ್ಮೆಟ್ ಧರಿಸಿಕೊಂಡು ಬಂದ ವ್ಯಕ್ತಿಯೊಬ್ಬ, ಸಿಬ್ಬಂದಿಯೊಂದಿಗೆ ಮಾತಿಗಿಳಿದಿದ್ದಾನೆ. ಈ ವೇಳೆ ನೋಡು ನೋಡುತ್ತಿದ್ದಂತೆ ಏಕಾಏಕಿ ಲಾಂಗ್ ತೋರಿಸಿ, ಬಂಕ್ ಸಿಬ್ಬಂದಿ ಕೈಯಲ್ಲಿದ್ದ ಹಣದ ಬ್ಯಾಗ್ ಕಸಿದುಕೊಳ್ಳಲು ಮುಂದಾಗಿದ್ದಾನೆ.

ಪೆಟ್ರೋಲ್​ ಬಂಕ್ ಸಿಬ್ಬಂದಿ ಮೇಲೆ ಲಾಂಗ್ ಬೀಸಿದ ಖದೀಮ

ಲಾಂಗ್ ಬೀಸಿದರೂ ಕೂಡ ಹಣದ ಬ್ಯಾಗ್ ಮಾತ್ರ ಸಿಬ್ಬಂದಿ ಖದೀಮನಿಗೆ ಕೊಟ್ಟಿಲ್ಲ. ನಡುರಸ್ತೆಯಲ್ಲೇ ಬ್ಯಾಗ್ ಹಿಡಿದು ಇಬ್ಬರೂ ಎಳೆದಾಡಿಕೊಂಡಿದ್ದಾರೆ. ಈ ವೇಳೆ ಘಟನಾ ಸ್ಥಳಕ್ಕೆ ಹೆಚ್ಚು ಹೆಚ್ಚು ಜನರು ಆಗಮಿಸುವುದನ್ನು ಕಂಡು ಆತಂಕಗೊಂಡ ಖದೀಮ, ಸ್ಥಳದಿಂದ ಪರಾರಿಯಾಗಿದ್ದಾನೆ.

ಈ ಘಟನೆ ಕುರಿತು ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

Last Updated : Nov 10, 2021, 2:04 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.