ಹೊಸಕೋಟೆ: ಎಂಟಿಬಿ ನಾಗರಾಜ್ ವಿರುದ್ಧ ಬಂಡಾಯವೆದ್ದಿರುವ ಪ್ರಬಲ ಟಿಕೆಟ್ ಆಕಾಂಕ್ಷಿ ಶರತ್ ಬಚ್ಚೇಗೌಡರನ್ನು ಸಿಎಂ ಬಿಎಸ್ವೈ ಪಕ್ಷದಿಂದ ಉಚ್ಚಾಟನೆ ಮಾಡಿದ್ದು, ಈಗ ಅವರು ಹೊಸಕೋಟೆ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ.
ಈ ಕುರಿತು ಮಾತನಾಡಿದ ಶರತ್ ಬಚ್ಚೇಗೌಡ, ಇಷ್ಟು ದಿನ ನನಗೆ ಬೆಂಬಲಿಸಿದ ಎಲ್ಲ ಬಿಜೆಪಿ ನಾಯಕರು, ಮುಖಂಡರಿಗೂ ಧನ್ಯವಾದಗಳು. ಕ್ಷೇತ್ರದ ಜನರು, ಕಾರ್ಯಕರ್ತರು, ಮುಖಂಡರಿಗಾಗಿ ನಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದು, ಅಖಾಡಕ್ಕಿಳಿದ ಮೇಲೆ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಕ್ಷೇತ್ರದ ಜನರ ಮನಸಲ್ಲಿ ನನಗೆ ಜಾಗವಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹೊಸಕೋಟೆ ಸ್ವಾಭಿಮಾನ ಎತ್ತಿಹಿಡಿಯವುದು ಮತದಾರರ ಕೈಯಲ್ಲಿದೆ. ಅವರು ನೀಡುವ ತೀರ್ಪಿಗೆ ನಾನು ತಲೆಬಾಗುತ್ತೇನೆ. ಈ ಚುನಾವಣೆ ಸ್ವಾಭಿಮಾನಿ ಹೊಸಕೋಟೆ ಮತದಾರರ ಹೋರಾಟ. ಅಲ್ಲದೇ ನನ್ನ ಒಂದು ತೀರ್ಮಾನದಲ್ಲಿ ತಂದೆ ಬಚ್ಚೇಗೌಡರ ಯಾವುದೇ ಪಾತ್ರ ಇಲ್ಲ ಎಂದು ಇದೇ ವೇಳೆ ಹೇಳಿದರು.