ETV Bharat / city

ಫೋನ್ ಟ್ಯಾಪಿಂಗ್ ವಿಚಾರದಲ್ಲಿ ಯಾವುದೇ ಆತಂಕ ಇಲ್ಲ: ಹೆಚ್​ಡಿಕೆ

ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ಕುರಿತು ತಮ್ಮ ತಂದೆ ದೇವೇಗೌಡರೊಂದಿಗೆ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಮಾತುಕತೆ ನಡೆಸಲಿದ್ದಾರೆ ಎನ್ನಲಾಗ್ತಿದೆ. ಇನ್ನು ಫೋನ್​ ಟ್ಯಾಪಿಂಗ್​ ಬಗ್ಗೆ ಯಾವುದೇ ಆತಂಕವಿಲ್ಲವೆಂದು ಕುಮಾರಸ್ವಾಮಿ ತಿಳಿಸಿದ್ದಾರೆ.

there is no Anxiety about phone tapping
author img

By

Published : Aug 23, 2019, 9:46 PM IST

ಬೆಂಗಳೂರು: ತಮ್ಮ ಕುಟುಂಬದ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಅವರು ವಾಗ್ದಾಳಿ ನಡೆಸಿರುವ ಕುರಿತು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಜೊತೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಚರ್ಚಿಸಲಿದ್ದಾರೆ ಎಂದು ತಿಳಿದುಬಂದಿದೆ.

ತಾಜ್​​ವೆಸ್ಟೆಂಡ್ ಹೋಟೆಲ್​ನಲ್ಲಿ ತಂಗಿದ್ದ ಕುಮಾರಸ್ವಾಮಿ ಅವರು ಇಂದು ಸಂಜೆ ಪದ್ಮನಾಭನಗರದಲ್ಲಿರುವ ದೇವೇಗೌಡರ ನಿವಾಸಕ್ಕೆ ತೆರಳುತ್ತಿದ್ದ ವೇಳೆ ಸಿದ್ದರಾಮಯ್ಯ ಆರೋಪಿಸಿರುವ ಕುರಿತು ವರದಿಗಾರರು ಕೇಳಿದಾಗ ಏನೂ ಪ್ರತಿಕ್ರಿಯಿಸದೆ, ಎಲ್ಲಾ ಆಮೇಲೆ ಹೇಳೋಣ ಎಂದಷ್ಟೇ ಉತ್ತರಿಸಿದರು.

ಸಿದ್ದರಾಮಯ್ಯ ಅವರ ಆರೋಪಗಳಿಗೆ ಸದ್ಯಕ್ಕೆ ಪ್ರತಿಕ್ರಿಯಿಸದಿರಲು ನಿರ್ಧರಿಸಿರುವ ಕುಮಾರಸ್ವಾಮಿ ಅವರು, ಎಲ್ಲ ಮಾಹಿತಿಯನ್ನೂ ಸಂಗ್ರಹಿಸಿದ ಬಳಿಕ ಹೆಚ್​ಡಿಕೆ ಸುದ್ದಿಗೋಷ್ಟಿ ನಡೆಸಲಿದ್ದಾರೆ ಎನ್ನಲಾಗ್ತಿದೆ.

ಪ್ರತಿಕ್ರಿಯೆ: ಬಿಜೆಪಿ ಬಗ್ಗೆ ನಾನ್ಯಾಕೆ ಮೃದುವಾಗಿ ಮಾತನಾಡಬೇಕು?. ಯಡಿಯೂರಪ್ಪ ಯಾವುದೇ ತನಿಖೆ ಬೇಕಾದರು ನಡೆಸಲಿ. ಫೋನ್ ಟ್ಯಾಪಿಂಗ್ ವಿಚಾರದಲ್ಲಿ ಯಾವುದೇ ಆತಂಕ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಕುಮಾರಸ್ವಾಮಿ ಪ್ರತಿಕ್ರಿಯಿಸಿದರು.

ರಾಜಕೀಯವಾಗಿ ನನ್ನ ನೈತಿಕತೆ ಉಳಿಸಿಕೊಂಡಿದ್ದೇನೆ. ಯಾವುದೇ ತಪ್ಪು ಮಾಡಿಲ್ಲ. ಹಾಗಾಗಿ ಯಾರಿಗೂ ಹೆದರುವವನಲ್ಲ. ಅಪ್ಪ, ಮಗ ವರ್ಗಾವಣೆ ದಂಧೆ ನಡೆಸುತ್ತಿದ್ದಾರೆ ಎಂದು ಯಡಿಯೂರಪ್ಪ ಅವರ ವಿರುದ್ಧ ಗಂಭೀರವಾಗಿ ಆರೋಪಿಸಿರುವ ಮಾಜಿ ಸಿಎಂ, ವರ್ಗಾವಣೆಯಲ್ಲಿ ಎಷ್ಟು ಪೇಮೆಂಟ್ ಆಯ್ತು?. ನಾನು ಕಾಣದೆ ಇರೋದಾ ಎಂದು ಕಿಡಿಕಾರಿದ್ದಾರೆ.

ಕೃಷ್ಣ ಜನ್ಮಾಷ್ಟಮಿ ಹಿನ್ನೆಲೆಯಲ್ಲಿ ಪದ್ಮನಾಭ ನಗರದಲ್ಲಿರುವ ಸಹೋದರಿ ಅನುಸೂಯ ಅವರ ಮನೆಗೆ ತೆರಳಿ ಕುಟುಂಬ ಸದಸ್ಯರೊಂದಿಗೆ ಸ್ವಲ್ಪ ಹೊತ್ತು ಕಾಲ ಕಳೆದರು. ನಂತರ ಅಲ್ಲಿಂದ ಪತ್ನಿ ಅನಿತಾ ಕುಮಾರಸ್ವಾಮಿ ಅವರೊಂದಿಗೆ ಜೆಪಿ ನಗರದಲ್ಲಿನ ತಮ್ಮ ನಿವಾಸಕ್ಕೆ ಹೆಚ್​ಡಿಕೆ ತೆರಳಿದ್ರು.

Intro:ಬೆಂಗಳೂರು : ತಮ್ಮ ಕುಟುಂಬದ ಮೇಲೆ ಮಾಜಿ ಸಿಎಂ ಸಿದ್ದರಾಮಯ್ಯನವರು ವಾಗ್ದಾಳಿ ನಡೆಸಿರುವ ಕುರಿತು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಜೊತೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಚರ್ಚಿಸಲಿದ್ದಾರೆ. Body:ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ತಂಗಿದ್ದ ಕುಮಾರಸ್ವಾಮಿ ಅವರು ಇಂದು ಸಂಜೆ ಪದ್ಮನಾಭನಗರದಲ್ಲಿರುವ ದೇವೇಗೌಡರ ನಿವಾಸಕ್ಕೆ ತೆರಳುತ್ತಿದ್ದ ವೇಳೆ ಮಾಧ್ಯಮದವರು ಪ್ರತಿಕ್ರಿಯೆ ಕೇಳಿದಾಗ, ಎಲ್ಲಾ ಆಮೇಲೆ ಹೇಳೊಣ, ಮಾತಾಡೋಣವೆಂದು ಏನೂ ಹೇಳಿದೆ ಹೊರಟರು.
ಸಿದ್ದರಾಮಯ್ಯನವರ ಆರೋಪಗಳಿಗೆ ಸದ್ಯಕ್ಕೆ ಪ್ರತಿಕ್ರಿಯಿಸದಿರಲು ನಿರ್ಧರಿಸಿರುವ ಕುಮಾರಸ್ವಾಮಿ ಅವರು, ಎಲ್ಲವನ್ನೂ ದೇವೇಗೌಡರಿಗೆ ಬಿಟ್ಟಿದ್ದಾರೆ. ಎಲ್ಲ ಮಾಹಿತಿಯನ್ನೂ ಸಂಗ್ರಹಿಸಿ ಒಂದು ವಾರದ ಬಳಿಕ ಹೆಚ್ ಡಿಕೆ ಸುದ್ದಿಗೋಷ್ಠಿ ನಡೆಸಲಿದ್ದಾರೆ ಎನ್ನಲಾಗಿದೆ.
ಕೃಷ್ಣಜನ್ಮಾಷ್ಠಮಿ ಹಿನ್ನೆಲೆಯಲ್ಲಿ ಪದ್ಮನಾಭನಗರದಲ್ಲಿರುವ ಸಹೋದರಿ ಅನುಸೂಯ ಅವರ ಮನೆಗೆ ತೆರಳಿದ ಕುಮಾರಸ್ವಾಮಿ ಅವರು ಕುಟುಂಬ ಸದಸ್ಯರ ಜೊತೆ ಸ್ವಲ್ಪ ಹೊತ್ತು ಕಾಲ ಕಳೆದರು.
ಪ್ರತಿಕ್ರಿಯೆ : ಫೋನ್ ಟ್ಯಾಪಿಂಗ್ ಪ್ರಕರಣವನ್ನು ಸಿಬಿಐಗೆ ನೀಡಿದ ವಿಚಾರ ಸಂಬಂಧ ಬಿಜೆಪಿ ಬಗ್ಗೆ ಕುಮಾರಸ್ವಾಮಿ ಮೃದು ಧೋರಣೆ ತೋರುತ್ತಿದ್ದಾರೆಂಬ ಪ್ರಶ್ನೆಗೆ ಈ ವೇಳೆ ಉತ್ತರಿಸಿದ ಕುಮಾರಸ್ವಾಮಿ ಅವರು, ಬಿಜೆಪಿ ಬಗ್ಗೆ ನಾನು ಯಾಕೆ ಮೃದುವಾಗಿ ಮಾತನಾಡಬೇಕು?. ಯಾವುದೇ ತನಿಖೆ ಬೇಕಾದರು ಯಡಿಯೂರಪ್ಪ ನಡೆಸಲಿ. ನಾನು ಸಂಪೂರ್ಣವಾಗಿ ಮುಕ್ತನಾಗಿದ್ದೇನೆ. ಫೋನ್ ಟ್ಯಾಪಿಂಗ್ ವಿಚಾರದಲ್ಲಿ ಯಾವುದೇ ಆತಂಕ ಇಲ್ಲ ಎಂದಿದ್ದಾರೆ.
ರಾಜಕೀಯವಾಗಿ ನನ್ನ ನೈತಿಕತೆ ಉಳಿಸಿಕೊಂಡಿದ್ದೇನೆ. ಯಾವುದೇ ತಪ್ಪು ಮಾಡಿಲ್ಲ. ಹಾಗಾಗಿ ಯಾರಿಗೂ ಹೆದರುವವನಲ್ಲ ಎಂದು ಹೇಳಿದ್ದಾರೆ.
ಅಪ್ಪ, ಮಗ ವರ್ಗಾವಣೆ ದಂಧೆ ನಡೆಸುತ್ತಿದ್ದಾರೆ ಎಂದು ಯಡಿಯೂರಪ್ಪನವರ ವಿರುದ್ಧ ಗಂಭೀರ ಆರೋಪ ಮಾಡಿರುವ ಕುಮಾರಸ್ವಾಮಿ ಅವರು, ವರ್ಗಾವಣೆಯಲ್ಲಿ ಎಷ್ಟು ಪೇಮೆಂಟ್ ಆಯ್ತು?. ನಾನು ಕಾಣದೆ ಇರೋದಾ ಎಂದು ಕಿಡಿಕಾರಿದ್ದಾರೆ.
ನಂತರ ಪದ್ಮನಾಭನಗರದಿಂದ ಜೆಪಿ ನಗರದ ತಮ್ಮ ನಿವಾಸಕ್ಕೆ ಕುಮಾರಸ್ವಾಮಿ ಹಾಗೂ ಪತ್ನಿ ಅನಿತಾ ಕುಮಾರಸ್ವಾಮಿ ಅವರು ತೆರಳಿದ್ದಾರೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.