ಬೆಂಗಳೂರು: ಈತನ ಗುರಿ ದೊಡ್ಡ ದೊಡ್ಡ ಅಪಾರ್ಟ್ಮೆಂಟ್ಗಳು. ಮೊದಲು ಅಪಾರ್ಟ್ಮೆಂಟ್ಗಳಲ್ಲಿ ಯಾರ ಮನೆಯಲ್ಲಿ ದುಬಾರಿ ಬೆಲೆಯ ಶೂಗಳಿವೆ ಎಂದು ಪರೀಕ್ಷಿಸುತ್ತಿದ್ದ. ಬಳಿಕ ಹೊಂಚು ಹಾಕಿ ದುಬಾರಿ ಬೆಲೆ ಹಾಗೂ ಉತ್ತಮ ಗುಣಮಟ್ಟ ಕಂಪನಿಗಳ ಶೂಗಳನ್ನು ಕ್ಷಣಾರ್ಧದಲ್ಲಿ ಎಗರಿಸುತ್ತಿದ್ದ.
ನಗರದ ಮಹದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯ ಬಿ.ನಾರಾಯಣಪುರ ಸನ್ ಎನ್ಕ್ಲೇವ್ ಅಪಾರ್ಟ್ಮೆಂಟ್ನಲ್ಲಿ ಈ ಘಟನೆ ನಡೆದಿದೆ.
ಪ್ರತಿ ಮನೆಯ ಮುಂದಿರುವ ಶೂ ಸ್ಟಾಂಡ್ಗಳನ್ನ ನೋಡಿ ನೋಡಿ ಕದ್ದು ಅದರಲ್ಲಿ ಬೇಕಾದ ಶೂಗಳನ್ನಷ್ಟೇ ಆಯ್ದುಕೊಂಡು ಅರ್ಧ ಚೀಲದಷ್ಟು ಹೊತ್ತೊಯ್ದಿದ್ದಾನೆ.
ಕಳ್ಳನ ಕರಾಮತ್ತು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಅಪಾರ್ಟ್ಮೆಂಟ್ನ ನಿವಾಸಿಗಳು ಈ ಬಗ್ಗೆ ಮಹದೇವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.