ಬೆಂಗಳೂರು: ಇತಿಹಾಸದ ಸತ್ಯವನ್ನು ಮಕ್ಕಳಿಗೆ ತಿರುಚಿ ಹೇಳುವ ಕೆಲಸವನ್ನು ಹಿಂದಿನ ಕಾಂಗ್ರೆಸ್ ಸರ್ಕಾರ ಮಾಡಿತ್ತು. ಆದ್ರೆ ಬಿಜೆಪಿ ಸತ್ಯ ಹೇಳಲು ಹೊರಟಿರುವಾಗ ಅದನ್ನು ತಡೆಯುವ ಪ್ರಯತ್ನ ನಡೆಯುತ್ತಿದೆ ಎಂದು ಸಚಿವ ಆರ್. ಅಶೋಕ್ ಅವರು ಕಾಂಗ್ರೆಸ್ ನಾಯಕರಿಗೆ ಟಾಂಗ್ ಕೊಟ್ಟಿದ್ದಾರೆ.
ಟಿಪ್ಪು ಜಯಂತಿ ಆಚರಣೆ ರದ್ದುಪಡಿಸುವ ವಿಚಾರವಾಗಿ ಮಾತನಾಡಿದ ಅವರು, ಟಿಪ್ಪು ಓರ್ವ ಮತಾಂಧ, ದೇಶದ್ರೋಹಿ, ಪರ್ಷಿಯನ್ ಭಾಷೆಯಲ್ಲಿ ಕತ್ತಿಯ ಮೇಲೆ ಹಿಂದುಗಳನ್ನು ಕೊಲ್ಲಿ ಎಂದು ಬರೆಸಿಕೊಂಡಿದ್ದವನು ಕನ್ನಡ ಪ್ರೇಮಿ ಹೇಗೆ ಆಗುತ್ತಾನೆ? ಎಂದು ಪ್ರಶ್ನಿಸಿದರು.
ಇನ್ನು, ಟಿಪ್ಪು ಬಗೆಗಿನ ಅಭಿಮಾನದಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕುರುಡರಾಗಿದ್ದಾರೆ. ಅವರಿಗೆ ಅಲ್ಪಸಂಖ್ಯಾತರ ವೋಲೈಕೆ ಅಷ್ಟೇ ಮುಖ್ಯ. ಟಿಪ್ಪು ಓರ್ವ ದೇಶ ಪ್ರೇಮಿ, ಸ್ವಾತಂತ್ರ್ಯ ಹೋರಾಟಗಾರ ಎಂದು ಶಾಲಾ ಪುಸ್ತಕದಲ್ಲಿ ಆತನ ಕುರಿತು ತಿರುಚಿದ ಇತಿಹಾಸವನ್ನು ಪಠ್ಯದಲ್ಲಿಡಲು ಅವಕಾಶ ಕೊಡುವುದಿಲ್ಲ. ಇದಕ್ಕಾಗಿ ಪಠ್ಯ ಸಮಿತಿಯನ್ನು ಸುರೇಶ್ ಕುಮಾರ್ ನೇತೃತ್ವದಲ್ಲಿ ರಚಿಸಲಾಗಿದೆ. ಸಮಿತಿ ಸತ್ಯ ಸಂಗತಿ ಹಾಗೂ ಸಾಕ್ಷ್ಯಾಧಾರಗಳ ಅನ್ವಯ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಆರ್ ಅಶೋಕ್ ತಿಳಿಸಿದರು.