ಬೆಂಗಳೂರು: ನಟಿ ಹಾಗೂ ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶೃತಿ, ನಗರದ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಕೆಎಸ್ಆರ್ಟಿಸಿ ನಿಗಮ ಅನುಷ್ಠಾನಗೊಳಿಸಿರುವ ಸ್ತ್ರೀ ಶೌಚಾಲಯವನ್ನು ವೀಕ್ಷಿಸಿದರು.
ನಿಗಮದ ಅನುಷ್ಠಾನ, ಶೌಚಾಲಯಗಳ ಬಳಕೆ ಹಾಗೂ ಮಹಿಳೆಯರಿಗೆ ಆಗುತ್ತಿರುವ ಅನಾನುಕೂಲಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಸ್ತ್ರೀ ಶೌಚಾಲಯಗಳ ಅವಶಕ್ಯತೆ ಬಹಳಷ್ಟು ಇದ್ದು, ರಾಜ್ಯದ ಪ್ರಮುಖ ಸ್ಥಳಗಳಲ್ಲಿ ಇದನ್ನು ಅನುಷ್ಠಾನಕ್ಕೆ ತರಬೇಕು ಎಂದರು.
ಮೆಜೆಸ್ಟಿಕ್ ಕೆಎಸ್ಆರ್ಟಿಸಿ ನಿಲ್ದಾಣದ ಒಂದನೇ ಟರ್ಮಿನಲ್ ಪ್ರವೇಶ ದ್ವಾರದ ಬಳಿ ಈ ವಿಶೇಷ ಶೌಚಾಲಯವಿದ್ದು, ಗುಜರಿ ಬಸ್ವೊಂದನ್ನು ಹೈಟೆಕ್ ಶೌಚಾಲಯವನ್ನಾಗಿ ಪರಿವರ್ತಿಸಲಾಗಿದೆ. ಈ ಮೂಲಕ ಅನುಪಯುಕ್ತ ಬಸ್ ಬಳಸಿಕೊಂಡು ಅತ್ಯಾಧುನಿಕ ಶೌಚಾಲಯವನ್ನಾಗಿ ಮಾಡಿದ ದೇಶದ ಮೊದಲ ನಿಗಮವಾಗಿ ಕೆಎಸ್ಆರ್ಟಿಸಿ ಗುರ್ತಿಸಿಕೊಂಡಿದೆ. 12 ಮೀಟರ್ ಉದ್ದದ ಬಸ್ನಲ್ಲಿ ಇಂಡಿಯನ್ ಹಾಗೂ ವೆಸ್ಟ್ರನ್ ಶೌಚಾಲಯಗಳು ಇವೆ.