ETV Bharat / city

ಡಿ.ಜೆ. ಹಳ್ಳಿ ಗಲಭೆ ಪ್ರಕರಣ: ವಿಚಾರಣೆಯಲ್ಲಿ ತಪ್ಪೊಪ್ಪಿಕೊಂಡ ಆರೋಪಿ ವಾಜೀದ್ - ಆರೋಪಿ ವಾಜೀದ್​ ವಿಚಾರಣೆ

ಡಿ ಜೆ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸಿಪಿ ರವಿಪ್ರಸಾದ್ ಹಾಗೂ ಡಿವೈಎಸ್ಪಿ ರಂಗಪ್ಪ ಅವರು ಆರೋಪಿ ವಾಜೀದ್​​​ನನ್ನು ಡಿ.ಜೆ. ಹಳ್ಳಿ ಪೊಲೀಸರ ಮುಂದೆಯೇ ತನಿಖೆ‌ ಮುಂದುವರೆಸಿದ್ದು, ಈತನ ನಿಕಟ ಸಂಪರ್ಕ ಹೊಂದಿದ್ದ ಮಾಜಿ ಮೇಯರ್​ ಸಂಪತ್ ರಾಜ್ ಹಾಗೂ ಕಾರ್ಪೊರೇಟರ್​ ಜಾಕೀರ್ ಹುಸೇನ್​​​​​​​​​ ವಿಚಾರಣೆ ಮುಂದುವರೆದಿದೆ.

The DJ Halli riot case
ಆರೋಪಿ ವಾಜೀದ್
author img

By

Published : Aug 18, 2020, 5:45 PM IST

Updated : Aug 18, 2020, 6:23 PM IST

ಬೆಂಗಳೂರು: ಕರ್ನಾಟಕ ಟಿಪ್ಪು ಟೈಗರ್ ಅಲ್ಪತ್ ಸಂಘಟನೆ ಅಧ್ಯಕ್ಷ ವಾಜೀದ್ ಪಾಷಾನನ್ನು ಸಿಸಿಬಿ ಪೊಲೀಸರು ಡಿ.ಜೆ.ಹಳ್ಳಿ‌ ಠಾಣೆಯಲ್ಲಿ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಘಟನೆಯ ಹಿಂದೆ ಯಾರಿದ್ದಾರೆ? ಗಲಭೆ ನಡೆಸಲು ಕಾರಣವೇನು ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಿದ್ದಾರೆ. ಅಲ್ಲದೆ, ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರುಪಡಿಸಿ ಮತ್ತೆ ತಮ್ಮ ವಶಕ್ಕೆ ಪಡೆಯಲು ಪೊಲೀಸರು ನಿರ್ಧರಿಸಿದ್ದಾರೆ.

ತಪ್ಪೊಪ್ಪಿಕೊಂಡ ವಾಜೀದ್: ಹಿರಿಯ ಪೊಲೀಸ್ ಅಧಿಕಾರಿಗಳು ಸತತ ಎರಡು ಗಂಟೆಗಳ ಕಾಲ ವಾಜೀದ್​​ಗೆ ಫುಲ್ ಡ್ರಿಲ್‌ ಮಾಡಿದ ಕಾರಣ ಗಲಭೆಯಲ್ಲಿದ್ದು, ಗಲಾಟೆ ಮಾಡಲು ಪ್ರಚೋದನೆ ಕರೆ ನೀಡಿದ್ದಕ್ಕಾಗಿ ತಪ್ಪೊಪ್ಪಿಕೊಂಡಿದ್ದಾನೆ ಎನ್ನಲಾಗ್ತಿದೆ. ಈ ವೇಳೆ 10ಕ್ಕೂ ಹೆಚ್ಚು ಪ್ರಮುಖ ವ್ಯಕ್ತಿಗಳ ಹೆಸರುಗಳನ್ನು ಬಾಯ್ಬಿಟ್ಟಿದ್ದಾನೆ. ವಾಜೀದ್ ಹೇಳಿದ್ದ ಆರೋಪಿಗಳನ್ನು ಬಂಧಿಸಲು ವಿಶೇಷ ಪೊಲೀಸರ ತಂಡ ಕಾರ್ಯಾಚರಣೆಗೆ ಇಳಿದಿದೆ.

ಪುಂಡರ ಜಮಾವಣೆಗೆ ಯಾರು ಯಾರನ್ನು ಸಂಪರ್ಕಿಸಿದ್ದೆ. ಜನರನ್ನು ಯಾವ ರೀತಿ ಸೇರಿಸಿದ್ದೆ ಎಂಬೆಲ್ಲಾ ಪ್ರಶ್ನೆಗಳನ್ನು ಕೇಳಲಾಗಿದೆ. ‌ಪುಲಿಕೇಶಿ ನಗರದ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಧ್ಯಕ್ಷನಾಗಿರುವ ವಾಜೀದ್​​ಗೆ‌, ಕಾರ್ಪೊರೇಟರ್ ಸಂಪತ್​​ರಾಜ್, ಜಾಕೀರ್ ಹುಸೇನ್​​​​​ ನಿಕಟ ಸಂಪರ್ಕ ಹೊಂದಿದ್ದ. ಮೂವರನ್ನು ಏಕಕಾಲಕ್ಕೆ ಪ್ರತ್ಯೇಕವಾಗಿ ವಿಚಾರಣೆ ನಡೆಸುತ್ತಿರುವ ಸಿಸಿಬಿ ಪೊಲೀಸರು, ಅವರನ್ನು ಪ್ರಾಥಮಿಕ ಹಂತದ ವಿಚಾರಣೆ ಬಳಿಕ ಒಟ್ಟಿಗೆ ಕೂರಿಸಿ ಪ್ರಶ್ನೆ ಮಾಡಲಿದ್ದಾರೆ.

ಎಸಿಪಿ ರವಿಪ್ರಸಾದ್ ಹಾಗೂ ಡಿವೈಎಸ್ಪಿ ರಂಗಪ್ಪ ಅವರು ವಾಜೀದ್​​​ನನ್ನು ಡಿ.ಜೆ.ಹಳ್ಳಿ ಪೊಲೀಸರ ಮುಂದೆಯೇ ತನಿಖೆ‌ ಮುಂದುವರೆಸಿದ್ದಾರೆ. ನಾಲ್ಕು ಗಂಟೆಯಿಂದ ಸಿಸಿಬಿ ಕಚೇರಿಯಲ್ಲಿ ಸಂಪತ್ ರಾಜ್ ಹಾಗೂ ಜಾಕೀರ್ ಹುಸೇಸ್​​​​​ಗೆ​​​​ ಡ್ರಿಲ್ಲಿಂಗ್​ ಮುಂದುವರೆದಿದೆ.

Last Updated : Aug 18, 2020, 6:23 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.