ಬೆಂಗಳೂರು : ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇಂದು ಆಗಮಿಸಿದ 10 ಜನರಿಗೆ ಕೋವಿಡ್ ಸೋಂಕು ಧೃಡಪಟ್ಟಿದ್ದು, ಅವರ ವರದಿಯನ್ನು ಜೀನೋಮ್ ಸೀಕ್ವೆನ್ಸ್ಗೆ ರವಾನಿಸಲಾಗಿದ್ದು, ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಅಮೆರಿಕದಿಂದ ಬಂದ ನಾಲ್ವರು ಪ್ರಯಾಣಿಕರಲ್ಲಿ, ಸೇಂಟ್ ಫ್ರಾನ್ಸಿಸ್ಕೋ, ಟರ್ಕಿ, ಪೋರ್ಚುಗಲ್, ಐರ್ಲೆಂಡ್, ಲಂಡನ್ನಿಂದ ಆಗಮಿಸಿದ ತಲಾ ಒಬ್ಬ ಪ್ರಯಾಣಿಕರಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ.
ಸೋಂಕಿತರನ್ನು ಬೆಂಗಳೂರಿನ ಬೌರಿಂಗ್ ಆಸ್ಪತ್ರೆಗೆ ಕಳುಹಿಸಲಾಗಿದೆ. ಭಾರತ ಸರ್ಕಾರದ ಇತ್ತೀಚಿನ ಮಾರ್ಗಸೂಚಿಯಂತೆ ವಿದೇಶದಿಂದ ಬರುವ ಪ್ರಯಾಣಿಕರು ಕಡ್ಡಾಯವಾಗಿ 7 ದಿನಗಳ ಹೋಮ್ ಕ್ವಾರಂಟೈನ್ ಒಳಗಾಗಬೇಕಿದೆ.
ಇದನ್ನೂ ಓದಿ: Delhi Covid: ಕೇವಲ 12 ದಿನದಲ್ಲಿ ದೆಹಲಿಯ 1,700 ಪೊಲೀಸರಿಗೆ ಸೋಂಕು!