ETV Bharat / city

ಕೊರೊನಾ ಕಂಟ್ರೋಲ್​​​ಗೆ ಲಾಕ್​​​​​ಡೌನ್ ಮುಂದುವರೆಯುತ್ತಾ? - covid 2nd wave

ಸ್ವಲ್ಪ ಎಚ್ಚರ ತಪ್ಪಿದರೆ ಏನ್ ಆಗಬಹುದು ಎಂಬುದನ್ನ ಈಗ ನೋಡಿದ್ದೇವೆ. ಕೊರೊನಾ ಸೋಂಕು ಸಾಂಕ್ರಾಮಿಕವಾಗಿದ್ದು, ಹೆಚ್ಚು ಸಾವು ನೋವು ಸಂಭವಿಸುವ ಕಾರಣ ಅದರ ಸಾಧಕ-ಬಾಧಕದ ಬಗ್ಗೆ ಅರಿಯುವ ಅಗತ್ಯವಿದೆ..

Bangalore
ಕರ್ನಾಟಕ ಲಾಕ್​​​​​​​​​ಡೌನ್
author img

By

Published : May 31, 2021, 11:56 AM IST

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ಈಗಾಗಲೇ ಲಾಕ್​​​​​ಡೌನ್ ಜಾರಿ ಮಾಡಲಾಗಿದೆ. ಕಳೆದ 10 ದಿನಗಳಿಂದ ಸೋಂಕು ಕೊಂಚ ಇಳಿಕೆ ಕಂಡಿದೆ.

ಆದರೆ, ನಿರ್ಲಕ್ಷ್ಯ ಮಾಡುವಂತಿಲ್ಲ. ಹೀಗಾಗಿ, ಲಾಕ್​​​​​ಡೌನ್ ವಿಸ್ತರಣೆ ಮಾಡುವುದು ಅನಿವಾರ್ಯನಾ ಇಲ್ವಾ ಎಂಬುದರ ಕುರಿತು ಚರ್ಚೆ ನಡೆಸಲಾಗುತ್ತಿದೆ.‌ ಈ ಮಧ್ಯೆ ತಾಂತ್ರಿಕ ಸಲಹಾ ಸಮಿತಿ ಲಾಕ್​​​​​ಡೌನ್ ವರದಿ ಸಿದ್ಧಪಡಿಸಿದ್ದು, ತಡರಾತ್ರಿ ತನಕ ಸಭೆ ನಡೆಸಿದ್ದಾರೆ.‌‌

ಲಾಕ್​​​​​ಡೌನ್ ಮುಂದುವರಿಕೆ ಬಗ್ಗೆ ಸಚಿವ ಸುಧಾಕರ್ ಪ್ರತಿಕ್ರಿಯೆ..

ಈ ಬಗ್ಗೆ ಮಾಹಿತಿ ನೀಡಿರುವ ಆರೋಗ್ಯ ಸಚಿವ ಸುಧಾಕರ್, ಕೆಲವೇ ಹೊತ್ತಿನಲ್ಲಿ ಲಾಕ್​​​​​ಡೌನ್ ವರದಿ ಸಿಎಂ ಯಡಿಯೂರಪ್ಪನವರ ಕೈ ಸೇರಲಿದೆ. ತಡರಾತ್ರಿ ಎಲ್ಲ ಸಭೆಗಳನ್ನ ಮಾಡಲಾಗಿದ್ದು, ವರದಿ ಸಿದ್ದವಾಗಿದೆ.

ತಾಂತ್ರಿಕ ಸಲಹಾ ಸಮಿತಿ ಸದಸ್ಯರು ವರದಿಯನ್ನ ಅರ್ಧಗಂಟೆಯಲ್ಲಿ ನೀಡುತ್ತಾರೆ. ಇದನ್ನ ಸಿಎಂಗೆ ಸಲ್ಲಿಸಿ, ಎಲ್ಲರೂ ಸೇರಿ ಚರ್ಚೆ ಮಾಡುತ್ತೇವೆ ಎಂದಿದ್ದಾರೆ.

ಲಾಕ್​ಡೌನ್ ಮತ್ತು ಅನ್​ಲಾಕ್ ಕುರಿತು ಹಲವು ಸಚಿವರ ಹೇಳಿಕೆಗಳ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಸುಧಾಕರ್, ವೈಜ್ಞಾನಿಕ ನೆಲಗಟ್ಟಿನ ಮೇಲೆ ತೀರ್ಮಾನ ತೆಗೆದುಕೊಳ್ಳಬೇಕಾಗುತ್ತೆ‌.

ಸ್ವಲ್ಪ ಎಚ್ಚರ ತಪ್ಪಿದರೆ ಏನ್ ಆಗಬಹುದು ಎಂಬುದನ್ನ ಈಗ ನೋಡಿದ್ದೇವೆ. ಕೊರೊನಾ ಸೋಂಕು ಸಾಂಕ್ರಾಮಿಕವಾಗಿದ್ದು, ಹೆಚ್ಚು ಸಾವು ನೋವು ಸಂಭವಿಸುವ ಕಾರಣ ಅದರ ಸಾಧಕ-ಬಾಧಕದ ಬಗ್ಗೆ ಅರಿಯುವ ಅಗತ್ಯವಿದೆ ಎಂದುಹೇಳಿದರು.

ಕುರ್ಚಿ ಖಾಲಿ ಇಲ್ಲದ ಮೇಲೆ ಮಾತಾಡೋದು ಯಾಕೆ?

ಕೊರೊನಾದ ಸಂದರ್ಭದಲ್ಲಿ ರಾಜಕೀಯ ಮಾತಾಡೋದೆ ಅಸಂಬಂಧ. ಸಿಎಂ ಯಡಿಯೂರಪ್ಪರವರು ಕುರ್ಚಿ ಮೇಲೆ ಇದ್ದಾರೆ. ಕುರ್ಚಿ ಖಾಲಿ ಇಲ್ಲದ ಮೇಲೆ ಮಾತಾಡೋದು ಯಾಕೆ?. ಅವರು ಇರುವಾಗ ಮತ್ತೇಕೆ ಬದಲಾವಣೆ ಬಗ್ಗೆ ಮಾತಾನಾಡೋದು ಎಂದರು.

ಓದಿ: Bengaluru Covid Update: ಹೊಸದಾಗಿ 4 ಸಾವಿರ ಪ್ರಕರಣ ಪತ್ತೆ; ಪಾಸಿಟಿವಿಟಿ ದರ ಶೇ 14

ETV Bharat Logo

Copyright © 2024 Ushodaya Enterprises Pvt. Ltd., All Rights Reserved.