ETV Bharat / city

ಎಸ್ಎಸ್​ಎಲ್​ಸಿ ಪರೀಕ್ಷಾ ಮೌಲ್ಯಮಾಪನಕ್ಕೆ ಗೈರಾದ ಶಿಕ್ಷಕರ ವಿರುದ್ಧ ಕ್ರಮಕ್ಕೆ ಆದೇಶ - ಎಸ್ಎಸ್​ಎಲ್​ಸಿ ಪರೀಕ್ಷಾ ಮೌಲ್ಯಮಾಪನಕ್ಕೆ ಗೈರಾದ ಶಿಕ್ಷಕರ ವಿರುದ್ಧ ಕ್ರಮಕ್ಕೆ ಆದೇಶ

ಎಸ್​ಎಸ್​ಎಲ್​ಸಿ ಪರೀಕ್ಷೆಯ ಮೌಲ್ಯಮಾಪನಕ್ಕೆ ಗೈರಾದ ಶಿಕ್ಷಕರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲು ಶಿಕ್ಷಣ ಇಲಾಖೆ ಆಯಾ ಜಿಲ್ಲಾ ನಿರ್ದೇಶಕರಿಗೆ ಆದೇಶಿಸಲಾಗಿದೆ.

teachers-are-absent
ಕ್ರಮಕ್ಕೆ ಆದೇಶ
author img

By

Published : Apr 30, 2022, 9:42 PM IST

ಬೆಂಗಳೂರು: ಏಪ್ರಿಲ್ 23 ರಿಂದ ಪ್ರಾರಂಭವಾಗಿರುವ ಎಸ್‌ಎಸ್‌ಎಲ್‌ಸಿ ಮುಖ್ಯ ಪರೀಕ್ಷೆಯ ಮೌಲ್ಯಮಾಪನ ಕಾರ್ಯಕ್ಕೆ ನಿಯೋಜಿಸಲಾದ ಶಿಕ್ಷಕರಲ್ಲಿ ಕೆಲವರು ಗೈರು ಹಾಜರಾಗಿದ್ದು, ಅಂತಹವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಶಿಕ್ಷಣ ಇಲಾಖೆ ಸೂಚನೆ ನೀಡಿದೆ. ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯವು ಶೈಕ್ಷಣಿಕ ಚಟುವಟಿಕೆಗಳ ಒಂದು ಭಾಗವಾಗಿದೆ. ಯಾವುದೇ ಸಮಯದಲ್ಲಿ ಮಂಡಳಿಯು ನಡೆಸುವ ಎಸ್‌ಎಸ್‌ಎಲ್‌ಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯಕ್ಕೆ ಹಾಜರಾಗಲು ಯಾವುದೇ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರನ್ನಾಗಲೀ ಅಥವಾ ಸಹ ಶಿಕ್ಷಕರನ್ನಾಗಲೀ ನಿಯೋಜನೆ ಮಾಡಿದಾಗ, ಅಂತಹ ಕಾರ್ಯಕ್ಕೆ ಹಾಜರಾಗುವುದು ಕರ್ತವ್ಯವಾಗಿದೆ.

ಮೌಲ್ಯಮಾಪಕರನ್ನಾಗಿ ನೇಮಿಸಿದಾಗ ಅವರೇ ಆಗಲಿ ಅಥವಾ ಅವರ ಕುಟುಂಬ ಸದಸ್ಯರ ತೀವ್ರ ಕಾಯಿಲೆ ಹೊರತುಪಡಿಸಿದರೆ, ಇತರರು ಮೌಲ್ಯಮಾಪನ ಕಾರ್ಯಕ್ಕೆ ಕಡ್ಡಾಯವಾಗಿ ಬರಬೇಕು. ಒಂದು ವೇಳೆ ಅನಿವಾರ್ಯ ಕಾರಣಕ್ಕಾಗಿ ಗೈರಾಗುವ ಮೌಲ್ಯಮಾಪಕರು ಜಿಲ್ಲಾ ಉಪನಿರ್ದೇಶಕರು ಅಥವಾ ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಪೂರ್ವಾನುಮತಿ ಪಡೆಯಬೇಕು.

ಆದರೆ, ಕೆಲವು ಶಿಕ್ಷಕರು ಪೂರ್ವಾನುಮತಿಯನ್ನು ಪಡೆಯದೇ ಮೌಲ್ಯಮಾಪನ ಕಾರ್ಯಕ್ಕೆ ಗೈರು ಹಾಜರಾಗಿದ್ದಾರೆ. ಇದರಿಂದ ಮೌಲ್ಯಮಾಪನ ಕಾರ್ಯವು ವಿಳಂಬವಾಗಿ ಸಾಗಿದೆ. ಫಲಿತಾಂಶವನ್ನು ಪ್ರಕಟಿಸಲು ಸಹ ಅನಾನುಕೂಲವಾಗುತ್ತಿದೆ ಎಂದು ಮಂಡಳಿ ಅಸಮಾಧಾನ ವ್ಯಕ್ತಪಡಿಸಿದೆ.‌ ಮೌಲ್ಯಮಾಪನ ಕಾರ್ಯ ಕಡ್ಡಾಯವಾಗಿದ್ದರೂ ಕೆಲವು ಶಿಕ್ಷಕರು ಮೌಲ್ಯಮಾಪನ ಕಾರ್ಯಕ್ಕೆ ಹಾಜರಾಗದೇ ಇರುವುದು ಕರ್ತವ್ಯ ನಿರ್ಲಕ್ಷ್ಯವಾಗಿದೆ. ಹೀಗಾಗಿ, ಗೈರಾದ ಶಿಕ್ಷಕರ ವಿರುದ್ಧ ಕೈಗೊಂಡ ಕ್ರಮದ ಕುರಿತು ಮಂಡಳಿಗೆ ಮಾಹಿತಿ ನೀಡಲು ಆಯಾ ಜಿಲ್ಲಾ ನಿರ್ದೇಶಕರಿಗೆ ಸೂಚಿಸಲಾಗಿದೆ.

ಓದಿ: ರೈತರಿಗೆ ಸಿಹಿಸುದ್ದಿ.. ರಸಗೊಬ್ಬರದ ಸಬ್ಸಿಡಿ ಹೆಚ್ಚಿಸಿದ ಕೇಂದ್ರ ಸರ್ಕಾರ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.