ETV Bharat / city

ದೇಶದ ಸಮಗ್ರ ಅಭಿವೃದ್ಧಿಗೆ ಪೂರಕ ಬಜೆಟ್.. ತೆರಿಗೆ ವಿನಾಯಿತಿ ನಿರೀಕ್ಷಿಸಿದ್ದವರಿಗೆ ನಿರಾಸೆ: ಬಿ.ಟಿ. ಮನೋಹರ್

ಬಜೆಟ್ ಅಂದ ತಕ್ಷಣ ಜನ ಬೆಲೆ ಇಳಿಕೆ ಹಾಗೂ ತೆರಿಗೆ ಕಡಿತವನ್ನು ಹೆಚ್ಚಾಗಿ ನಿರೀಕ್ಷಿಸುತ್ತಾರೆ. ದೇಶ ಅಭಿವೃದ್ಧಿಯಾದಾಗ ಸಹಜವಾಗಿ ನಾವು ಅಭಿವೃದ್ಧಿ ಹೊಂದಬಹುದು ಎಂಬ ಅರಿವು ಜನರಿಗೆ ಮೂಡಬೇಕು ಎಂದು ಬಿ.ಟಿ. ಮನೋಹರ್ ಹೇಳಿದ್ದಾರೆ.

tax expert BT Manohar on union bedget 2022
ಈಟಿವಿ ಭಾರತದೊಂದಿಗೆ ಎಫ್​ಐಸಿಸಿಐ ಜಿಎಸ್​ಟಿ ವಿಭಾಗದ ಅಧ್ಯಕ್ಷ ಹಾಗೂ ತೆರಿಗೆ ತಜ್ಞ ಬಿ.ಟಿ. ಮನೋಹರ್
author img

By

Published : Feb 1, 2022, 5:37 PM IST

ಬೆಂಗಳೂರು: ಪ್ರಸಕ್ತ ಸಾಲಿನ ಕೇಂದ್ರ ಬಜೆಟ್​​ನ​ಲ್ಲಿ ಏಳು ಅಂಶಗಳ ಮೇಲೆ ಎಲ್ಲಾ ಕ್ಷೇತ್ರಗಳಿಗೂ ಅತ್ಯಂತ ಸಮಗ್ರವಾಗಿ ಅನುಕೂಲ ಒದಗಿಸುವ ಕಾರ್ಯ ಮಾಡಲಾಗಿದೆ ಎಂದು ಎಫ್​ಐಸಿಸಿಐ ಜಿಎಸ್​ಟಿ ವಿಭಾಗದ ಅಧ್ಯಕ್ಷ ಹಾಗೂ ತೆರಿಗೆ ತಜ್ಞ ಬಿ.ಟಿ. ಮನೋಹರ್ ಅಭಿಪ್ರಾಯಪಟ್ಟಿದ್ದಾರೆ.

'ಈಟಿವಿ ಭಾರತ'ಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ಕೃಷಿ, ಕೈಗಾರಿಕೆ, ಆರೋಗ್ಯ, ಮೂಲಸೌಕರ್ಯ ವಿಚಾರಗಳಲ್ಲಿ ಅತ್ಯಂತ ವಿಸ್ತೃತವಾಗಿ ಚರ್ಚಿಸುವ ಕಾರ್ಯವನ್ನು ಈ ಬಾರಿಯ ಬಜೆಟ್​ನಲ್ಲಿ ಮಾಡಲಾಗಿದೆ. ಪ್ರಧಾನಿಯವರ ಯೋಚನೆ ಮೇರೆಗೆ ಏಳು ವಿಷಯಗಳನ್ನು ಕೈಗೆತ್ತಿಕೊಳ್ಳಲಾಗಿದೆ. ರಸ್ತೆ, ರೈಲು, ವಿಮಾನ ನಿಲ್ದಾಣ, ಬಂದರು, ಸಮೂಹ ಸಾರಿಗೆ, ಜಲಮೂಲ ಹಾಗೂ ಲಾಜಿಸ್ಟಿಕ್ - ಈ 7 ವಿಭಾಗಗಳ ಮೇಲೆ ಗಮನ ಹರಿಸುವ ಮೂಲಕ ಒಂದು ಉತ್ತಮ ಆರ್ಥಿಕ ವಿಚಾರವನ್ನು ಮಂಡಿಸಲಾಗಿದೆ. ಇದನ್ನು ಸಮರ್ಪಕವಾಗಿ ಅಳವಡಿಸಿಕೊಂಡರೆ ಆರ್ಥಿಕ ಅಭಿವೃದ್ಧಿ ಸಾಧ್ಯ ಎಂದರು.

ಈಟಿವಿ ಭಾರತದೊಂದಿಗೆ ಎಫ್​ಐಸಿಸಿಐ ಜಿಎಸ್​ಟಿ ವಿಭಾಗದ ಅಧ್ಯಕ್ಷ ಹಾಗೂ ತೆರಿಗೆ ತಜ್ಞ ಬಿ.ಟಿ. ಮನೋಹರ್

ಕೈಗಾರಿಕೆಗಳಲ್ಲಿ ಉದ್ಯೋಗವನ್ನು ಹೇರಳವಾಗಿ ಸೃಷ್ಟಿಸುವ ಎಂಎಸ್​ಎಂಇ ಕ್ಷೇತ್ರವನ್ನು ಉತ್ತೇಜಿಸುವ ಕಾರ್ಯ ಆಗಿದೆ. ನೈಸರ್ಗಿಕ ಉತ್ಪನ್ನಗಳಿಗೆ ಒತ್ತು ಕೊಡುವ ಮೂಲಕ ಕೃಷಿಗೆ ಉತ್ತೇಜನ ನೀಡಲಾಗಿದೆ. ರಾಸಾಯನಿಕಗಳ ಬಳಕೆ ಮಾಡಿ ಆಹಾರ ಉತ್ಪಾದನೆ ಪದ್ಧತಿಗೆ ಕಡಿವಾಣ ಹಾಕುವ ಕಾರ್ಯಕ್ಕೆ ಮುಂದಾಗಿರುವುದು ಉತ್ತಮ ನಡೆ ಎಂದು ಹೇಳಿದರು.

ಆತಿಥ್ಯ (ಹಾಸ್ಪಿಟಾಲಿಟಿ) ಕ್ಷೇತ್ರಕ್ಕೆ ನೀಡಿದ ಆದ್ಯತೆ ಗಮನಿಸಿದರೆ ವ್ಯಾಪಾರ ಅಭಿವೃದ್ಧಿ ಹೆಚ್ಚುವ ನಿರೀಕ್ಷೆಯಿದೆ. ಕೋವಿಡ್​ನಿಂದಾಗಿ ಹಾಸ್ಪಿಟಾಲಿಟಿ ಸೆಕ್ಟರ್​ನಲ್ಲಿ ಸಾಕಷ್ಟು ತೊಂದರೆ ಆಗಿದೆ. ಇದರ ಅಭಿವೃದ್ಧಿಗೆ ಅಗತ್ಯವಿರುವ ಅವಕಾಶವನ್ನು ಬಜೆಟ್​ನಲ್ಲಿ ಕಲ್ಪಿಸಲಾಗಿದೆ. ದೇಶದ 138 ಕೋಟಿ ಜನರನ್ನು ಒಟ್ಟಾಗಿ ಕೊಂಡೊಯ್ಯುವ ಅಭಿವೃದ್ಧಿ ಕಾರ್ಯಗಳಿಗೆ ಒತ್ತು ನೀಡಲಾಗಿದೆ. ಶಿಕ್ಷಣ ಕ್ಷೇತ್ರಕ್ಕೆ ಆದ್ಯತೆ ಕೊಡಲಾಗಿದೆ. ಗ್ರಾಮೀಣ ಭಾಗದ ಶೈಕ್ಷಣಿಕ ಪ್ರಗತಿಗೆ ಗಮನಹರಿಸಲಾಗಿದೆ. ಗ್ರಾಮೀಣ ಭಾಗಕ್ಕೂ ಡಿಜಿಟಲ್ ಸಂಪರ್ಕ ಮೂಲಕ ಶಿಕ್ಷಣ ಒದಗಿಸುವ ಕಾರ್ಯಕ್ಕೆ ಸರ್ಕಾರ ಮುಂದಾಗಿದೆ ಎಂದು ಮನೋಹರ್ ಸಂತಸ ವ್ಯಕ್ತಪಡಿಸಿದರು.

ತೆರಿಗೆ ವಿನಾಯಿತಿ ನಿರೀಕ್ಷಿಸಿದ್ದವರಿಗೆ ನಿರಾಸೆ.. ಬಜೆಟ್ ಅಂದ ತಕ್ಷಣ ಜನ ಬೆಲೆ ಇಳಿಕೆ ಹಾಗೂ ತೆರಿಗೆ ಕಡಿತವನ್ನು ಹೆಚ್ಚಾಗಿ ನಿರೀಕ್ಷಿಸುತ್ತಾರೆ. ದೇಶ ಅಭಿವೃದ್ಧಿಯಾದಾಗ ಸಹಜವಾಗಿ ನಾವು ಅಭಿವೃದ್ಧಿ ಹೊಂದಬಹುದು ಎಂಬ ಅರಿವು ಜನರಿಗೆ ಮೂಡಬೇಕು. ತೆರಿಗೆ ವಿನಾಯ್ತಿ ಸಿಗಬಹುದು ಎಂದು ನಿರೀಕ್ಷಿಸಿದ್ದವರಿಗೆ ನಿರಾಸೆಯಾಗಿದೆ. ಜಿಎಸ್​ಟಿ ಕೌನ್ಸಿಲ್ ಪ್ರತ್ಯೇಕವಾಗಿ ಇರುವ ಹಿನ್ನೆಲೆ ಈ ಬಜೆಟ್​​ನಲ್ಲಿ ಜಿಎಸ್​ಟಿ ವಿಚಾರದ ಪ್ರಸ್ತಾಪ ಆಗಿಲ್ಲ. ತೆರಿಗೆಗೆ ಸಂಬಂಧಿಸಿದ ವಿಚಾರಗಳನ್ನೆಲ್ಲ ನಾವು ಜಿಎಸ್​​ಟಿ ಮಂಡಳಿಯಲ್ಲಿ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ. ಈ ವರ್ಷ ಜನವರಿ ಒಂದೇ ತಿಂಗಳಲ್ಲಿ 1 ಲಕ್ಷ 40 ಸಾವಿರ ಕೋಟಿ ರೂಪಾಯಿ ಜಿಎಸ್​​ಟಿ ಸಂಗ್ರಹವಾಗಿದೆ. ತೆರಿಗೆ ಸಂಗ್ರಹಕ್ಕೆ ಒತ್ತು ಕೊಡಲಾಗಿದ್ದು, ಏಳು ಅಂಶಗಳ ಮೂಲಕ ಹೆಚ್ಚಿನ ಆದಾಯ ಸಂಗ್ರಹಕ್ಕೆ ಗಮನಹರಿಸಲಾಗಿದೆ ಎಂದರು.

ಇದನ್ನೂ ಓದಿ: ಕೇಂದ್ರ ಬಜೆಟ್-2022 : ಜನಸಾಮಾನ್ಯರಿಗೆ ಸಿಕ್ಕಿದ್ದೇನು?

ಆದಾಯ ಕಡಿಮೆ ಆಗಿರುವ ಹಿನ್ನೆಲೆ ಕೇಂದ್ರ ಸರ್ಕಾರದಿಂದ ಬೆಲೆ ಇಳಿಕೆ ನಿರೀಕ್ಷೆ ಸಹಜ. ಸಾಲದ ಮೇಲಿನ ಬಡ್ಡಿ ದರ ಕಡಿತವನ್ನು ಸಹ ಹಲವರು ನಿರೀಕ್ಷಿಸಿದ್ದರು. ಮನೆಯಿಂದಲೇ ಕೆಲಸ ಮಾಡುವವರು ಹೆಚ್ಚಿದ್ದಾರೆ. ಇಎಮ್‌ಐ ಪಾವತಿ ಸಂದರ್ಭ ವಿನಾಯಿತಿಯ ನಿರೀಕ್ಷೆ ಹೊಂದಲಾಗಿತ್ತು. ಆದರೆ ಆರ್ಥಿಕ ಪ್ರಗತಿಗೆ ಪೂರಕವಾಗಿ ಕೇಂದ್ರ ಸರ್ಕಾರ ಈ ಬಜೆಟ್ ಮಂಡಿಸಿದೆ ಎಂಬ ಭಾವನೆ ಮೂಡುತ್ತಿದೆ. ತೆರಿಗೆ ಪಾವತಿದಾರರ ವೈಯಕ್ತಿಕವಾಗಿ ಒಂದಿಷ್ಟು ಅನುಕೂಲ ಒದಗಿಸಿದ್ದರೆ ಉಳಿತಾಯಕ್ಕೆ ಅನುಕೂಲವಾಗುತ್ತಿತ್ತು ಎನ್ನುವುದನ್ನು ಹೊರತುಪಡಿಸಿದರೆ, ಉಳಿದಂತೆ ಈ ಬಜೆಟ್ ಎಲ್ಲರಿಗೂ ಅನುಕೂಲಕರವಾಗಿದೆ ಎಂಬುದು ಬಿ.ಟಿ. ಮನೋಹರ್ ಅವರ ಅಭಿಪ್ರಾಯವಾಗಿದೆ.

ನದಿ ಜೋಡಣೆ: ನದಿ ಜೋಡಣೆ ವಿಚಾರವನ್ನ ಬಜೆಟ್​​ನಲ್ಲಿ ಪ್ರಸ್ತಾಪಿಸಲಾಗಿದೆ. ಈ ಕಾರ್ಯ ಆದಲ್ಲಿ ಈ ಭಾಗದ ರೈತರಿಗೆ ಅನುಕೂಲ ಆಗಲಿದೆ. ಬಹಳ ವರ್ಷಗಳಿಂದ ನದಿಜೋಡಣೆ ವಿಚಾರ ಪ್ರಸ್ತಾಪದಲ್ಲಿತ್ತು. ಈ ಬಾರಿ ಆ ಕಾರ್ಯ ಆದರೆ ಬಹಳ ಅನುಕೂಲವಾಗಲಿದೆ. ತೆರಿಗೆಯಲ್ಲಿ ಇನ್ನಷ್ಟು ಸೇರ್ಪಡೆ ಅಥವಾ ಅಳವಡಿಕೆ ಆಗುವ ಅವಕಾಶಗಳು ಇರುವ ಹಿನ್ನೆಲೆ ಜನರಿಗೆ ಮುಂದಿನ ದಿನಗಳಲ್ಲಿ ಹೆಚ್ಚಿನ ಸೇರ್ಪಡೆ ಮಾಡುವ ಅವಕಾಶವೂ ಇದೆ. ರಾಜ್ಯಗಳಿಗೆ ಹಾಗೂ ಅಭಿವೃದ್ಧಿಗೆ ಹಾಕುವ ಬುನಾದಿ ಮುಂದಿನ ದಿನಗಳಲ್ಲಿ ಸಾಕಷ್ಟು ಯಶಸ್ಸು ತಂದು ಕೊಡಲಿದೆ. ತೆರಿಗೆ ಪಾವತಿದಾರರಿಗೆ ಮುಂದಿನ ದಿನಗಳಲ್ಲಿ ಒಂದು ಆಶಾದಾಯಕ ಸವಲತ್ತು ಸಿಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ ಎಂದು ಮನೋಹರ್ ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.