ETV Bharat / city

ಆರ್​ಟಿ‌ಒ ಜಪ್ತಿ ಮಾಡಿದ ಲ್ಯಾಂಬೊರ್ಗಿನಿ ಕಾರಿನ ಸುತ್ತ ಅನುಮಾನದ ಹುತ್ತ..!

author img

By

Published : Jul 29, 2020, 2:17 PM IST

5 ವರ್ಷಗಳ ಹಿಂದೆ ಜಪ್ತಿಯಾಗಿದ್ದ ಕಾರು ಈಗ ನಗರದಲ್ಲಿ ಹೇಗೆ ಸಂಚಾರ ಮಾಡ್ತಿದೆ? ಇದರ ಅಸಲಿ ಮಾಲೀಕ ಮೊಹಮ್ಮದ್ ನಿಶಾನ್ ಅಥವಾ ಗಣೇಶ್ ಗೌಡನಾ ಎನ್ನುವುದರ ಬಗ್ಗೆ ಆರ್​ಟಿ‌ಒ ಅಧಿಕಾರಿಗಳು ಕೇಂದ್ರ ವಿಭಾಗದ ಪೊಲೀಸರ ಸಹಾಯ ಪಡೆದುಕೊಂಡು ತನಿಖೆ ಮುಂದುವರಿಸಿದ್ದಾರೆ.

Lamborghini car
ಲ್ಯಾಂಬೊರ್ಗಿನಿ

ಬೆಂಗಳೂರು: ನಗರದಲ್ಲಿ ಸಾರಿಗೆ ಇಲಾಖೆಗೆ ಸರಿಯಾದ ತೆರಿಗೆ ಕಟ್ಟದೆ, ನಕಲಿ ನೊಂದಣಿ ಸಂಖ್ಯೆ ಫಲಕ ಹಾಕಿ ನಗರದಲ್ಲಿ ಸಂಚಾರ ಮಾಡ್ತಿರುವ ಐಷಾರಾಮಿ ಕಾರನ್ನು ಆರ್​ಟಿಒ ಅಧಿಕಾರಿಗಳು ಸೋಮವಾರ ಗ್ಯಾರೇಜ್​ವೊಂದರ ಬಳಿ ಜಪ್ತಿ ‌ಮಾಡಿದ್ದರು. ಆದರೆ ಸದ್ಯ ಜಪ್ತಿ ‌ಮಾಡಿದ ಕಾರಿನ ಅಸಲಿ‌ ಮಾಲೀಕ ಯಾರು ಅನ್ನೋದೇ ಗೊತ್ತಾಗದೆ ಆರ್​ಟಿಒ ಅಧಿಕಾರಿಗಳು ಕೇಂದ್ರ ವಿಭಾಗದ ಪೊಲೀಸರ ಮೊರೆ‌ ಹೋಗಿದ್ದಾರೆ.

ಆರ್​ಟಿ‌ಒ ಅಧಿಕಾರಿಗಳು ಕಾರನ್ನು ಜಪ್ತಿ ಮಾಡಿ ನಕಲಿ ಕಾರಿನ ಸಂಖ್ಯೆ ಆಧಾರದ ಮೇರೆಗೆ ತನಿಖೆಗಿಳಿದಾಗ ಗಣೇಶ್ ಗೌಡ ಎಂಬಾತನಿಗೆ ಸೇರಿದ 5.5 ಕೋಟಿ ರೂ. ಮೌಲ್ಯದ ಕಾರನ್ನು 2008ರಲ್ಲಿ ಖರೀದಿ ‌ಮಾಡಿದ್ದ ವಿಚಾರ ಗೊತ್ತಾಗಿತ್ತು. ಹಾಗೆ ಕಾರು ಖರೀದಿ ‌ಮಾಡಿದ ದಿನದಿಂದ ತೆರಿಗೆ ಪಾವತಿಸದೆ ಸಾರಿಗೆ ಇಲಾಖೆಗೆ ಆತ ವಂಚನೆ ಮಾಡಿದ್ದ. ಇದರ ಅನುಮಾನದ ಮೇರೆಗೆ ಇನ್ಸ್​ಪೆಕ್ಟರ್ ರಾಜಣ್ಣ ಹಾಗೂ ಸುಧಾಕರ್ ಅವರು ಕಾರ್ಯಾಚರಣೆಗೆ ಇಳಿದಿದ್ದಾರೆ. ಈ ವೇಳೆ ಗಣೇಶ್ ಗೌಡ ಮಹಾರಾಷ್ಟ್ರದ ಎಂಹೆಚ್ 02ಬಿಎಂ 9000 ಸಂಖ್ಯೆಯ ಫಲಕವನ್ನು ಇಲ್ಲಿ ನಕಲಿಯಾಗಿ ಅಳವಡಿಸಿರುವುದು ಪತ್ತೆಯಾಗಿದೆ.

ಹೆಚ್ಚಿನ ತನಿಖೆ ನಡೆಸಿದಾಗ ನಕಲಿ ನಂಬರ್ ಕಾರಿನ ಮೇಲೆ ಕಬ್ಬನ್ ಪಾರ್ಕ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ಇದ್ದು, ಪೊಲೀಸರು 5 ವರ್ಷಗಳ ಹಿಂದೆ ಇದೇ ಲ್ಯಾಂಬೊರ್ಗಿನಿ ‌ಕಾರನ್ನು ಜಪ್ತಿ ಮಾಡಿದ್ದರು. ಈ ಲ್ಯಾಂಬೊರ್ಗಿನಿ ಕಾರನ್ನು 2015ರಲ್ಲಿ ಕೇರಳ ಮೂಲದ ಬೀಡಿ‌ ಉದ್ಯಮಿ‌ ಮೊಹಮ್ಮದ್ ನಿಶಾನ್ ಎಂಬಾತ ಓಡಿಸ್ತಿದ್ದ. ಹಾಗೆ ಈತ ಯುಬಿ ಸಿಟಿಯ ಅಪಾರ್ಟ್​ಮೆಂಟ್​ನಲ್ಲಿ ವಾಸವಿದ್ದು, ಈ ಕಾರನ್ನು ತಡರಾತ್ರಿ ಕರ್ಕಶ ಶಬ್ಧದೊಂದಿಗೆ ಜಾಲಿರೈಡ್ ಮಾಡಿ ಇತರರಿಗೆ ತೊಂದರೆ ಕೊಡ್ತಿದ್ದ ಎನ್ನಲಾಗ್ತಿದೆ. ಹೀಗಾಗಿ ಟೆಕ್ಕಿಯೊಬ್ಬರು ನಿಶಾನ್​ ವಿರುದ್ಧ ದೂರು ನೀಡಿದ್ದರು. ಇದರಿಂದ ಕೊಪಗೊಂಡು ಇದೇ ಲ್ಯಾಂಬೊರ್ಗಿನಿ ಕಾರನ್ನು ಟೆಕ್ಕಿ‌ ಮೇಲೆ ಹತ್ತಿಸಿ ಕೊಲೆ ‌‌ಮಾಡಲು ಮುಂದಾಗಿದ್ದ. ನಂತ್ರ ಪೊಲೀಸರು ನಿಶಾನ್ಅನ್ನು​ ಬಂಧಿಸಿದಾಗ ಆತ ದೆಹಲಿಯಲ್ಲಿ ಕೂಡ ಸೆಕ್ಯುರಿಟಿ ಗಾರ್ಡ್ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ವಿಚಾರ ಬಯಲಾಗಿತ್ತು.

ನಂತರ ಆತ ಜಾಮೀನು ಮೂಲಕ ಹೊರಬಂದಿದ್ದು, ಸದ್ಯ ಆತ ಎಲ್ಲಿದ್ದಾನೆ ಅನ್ನೋ ನಿಖರ ಮಾಹಿತಿ ಇಲ್ಲ. ಆದರೆ 5 ವರ್ಷಗಳ ಹಿಂದೆ ಜಪ್ತಿಯಾಗಿದ್ದ ಕಾರು ಈಗ ಹೇಗೆ ನಗರದಲ್ಲಿ ಸಂಚಾರ ಮಾಡ್ತಿದೆ? ಇದರ ಅಸಲಿ ಮಾಲೀಕ ಮೊಹಮ್ಮದ್ ನಿಶಾನ್ ಅಥವಾ ಗಣೇಶ್ ಗೌಡನಾ ಎನ್ನುವುದರ ಬಗ್ಗೆ ಆರ್​ಟಿ‌ಒ ಅಧಿಕಾರಿಗಳು ಕೇಂದ್ರ ವಿಭಾಗದ ಪೊಲೀಸರ ಸಹಾಯ ಪಡೆದುಕೊಂಡು ತನಿಖೆ ಮುಂದುವರಿಸಿದ್ದಾರೆ. ಹಾಗೆ ಕಾರಿನ ಮಾಲೀಕರು‌ ಜಪ್ತಿಯಾದ ವಿಚಾರ ತಿಳಿದು ಯಾರು ಆರ್​ಟಿ‌ಒ ಅಧಿಕಾರಿಗಳ ಬಳಿ ಧಾವಿಸಿಲ್ಲ. ಹಾಗೆ ಕಾರನ್ನು ಗ್ಯಾರೇಜ್ ಬಳಿ ಯಾರು ನಿಲ್ಲಿಸಿದ್ದರು ಅನ್ನೋದ್ರ ಬಗ್ಗೆ ತನಿಖೆ ಮುಂದುವರಿದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.