ETV Bharat / city

ಎಫ್ಆರ್​ಪಿ ದರ ತಿರಸ್ಕರಿಸಿದ ಕಬ್ಬು ಬೆಳೆಗಾರರು: 3,300 ರೂ. ದರ ನಿಗದಿಗೆ ಆಗ್ರಹ - Sugarcane Purchase Pricing Board Meeting

ಕೇಂದ್ರ ಸರ್ಕಾರ ನಿಗದಿ ಮಾಡಿರುವ ಕಬ್ಬಿನ ದರ (FRP)ವನ್ನು ತಿರಸ್ಕರಿಸಿದ್ದು, ಪ್ರತಿ ಟನ್​ಗೆ 3,300 ರೂ. ದರ ನೀಡುವಂತೆ ಆಗ್ರಹಿಸಿದ್ದೇವೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರ್ ಶಾಂತಕುಮಾರ್ ತಿಳಿಸಿದರು.

Bangalore
ಕಬ್ಬು ಖರೀದಿ ದರ‌ ನಿಗದಿ ಮಂಡಳಿ ಸಭೆ
author img

By

Published : Oct 15, 2020, 9:41 PM IST

ಬೆಂಗಳೂರು: ಕೇಂದ್ರ ಸರ್ಕಾರ ನಿಗದಿ ಮಾಡಿರುವ ಕಬ್ಬಿನ ದರ (FRP)ವನ್ನು ತಿರಸ್ಕರಿಸಿದ್ದು, ಪ್ರತಿ ಟನ್​ಗೆ 3,300 ರೂ. ದರ ನೀಡುವಂತೆ ಆಗ್ರಹಿಸಿದ್ದೇವೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರ್ ಶಾಂತಕುಮಾರ್ ತಿಳಿಸಿದರು.

ವಿಕಾಸಸೌಧದಲ್ಲಿ ಸಕ್ಕರೆ ಸಚಿವ ಶಿವರಾಂ ಹೆಬ್ಬಾರ್ ನೇತೃತ್ವದಲ್ಲಿ ಕಬ್ಬು ಖರೀದಿ ದರ‌ ನಿಗದಿ ಮಂಡಳಿ ಸಭೆಯಲ್ಲಿ ಪಾಲ್ಗೊಂಡ ಬಳಿಕ ಮಾತನಾಡಿದ ಅವರು, ಕೇಂದ್ರ ಸರ್ಕಾರ ನಿಗದಿ ಪಡಿಸಿರುವ 2,850 ರೂ. ಎಫ್ಆರ್​ಪಿ ದರವನ್ನು ತಿರಸ್ಕರಿಸಲಾಗಿದೆ. ರಾಜ್ಯ ಸರ್ಕಾರ ಹೆಚ್ಚುವರಿ ಬೆಲೆ ನಿಗದಿ ಮಾಡಬೇಕು ಎಂದು ಒತ್ತಾಯಿಸಲಾಗಿದೆ. ಈ ಬಗ್ಗೆ ಸಿಎಂ ಜೊತೆ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಸಚಿವರು ಶಿವರಾಮ್ ಹೆಬ್ಬಾರ್ ಭರವಸೆ ನೀಡಿದ್ದಾರೆ ಎಂದು ವಿವರಿಸಿದರು.

ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರ್ ಶಾಂತಕುಮಾರ್

ಕಬ್ಬು ಬೆಳೆಗೆ ರಾಜ್ಯ ಸರ್ಕಾರ ಬೆಲೆ ನಿಗದಿ ಮಾಡುತ್ತೇವೆ ಎಂದು ಒಪ್ಪಿದ್ದಾರೆ. ನಾವೂ ಕಾದು ನೋಡುತ್ತೇವೆ. ಕೇಂದ್ರ ನಿಗದಿ ಪಡಿಸಿರುವ ಎಫ್ಆರ್​ಪಿ ದರಕ್ಕೆ ನಮ್ಮ ಒಪ್ಪಿಗೆ ಇಲ್ಲ. ರೈತರ ಎಲ್ಲಾ ಉತ್ಪನ್ನಗಳ‌ ಬೆಲೆ ಜಾಸ್ತಿಯಾಗಿದೆ. ಹೀಗಾಗಿ ಕೇಂದ್ರ ಸರ್ಕಾರದ ಎಫ್ಆರ್​ಪಿ ಬೆಲೆಯನ್ನು ನಾವು ಒಪ್ಪಲ್ಲ. ಎಫ್ಆರ್​ಪಿ ದರದ ಮೂಲಕ ರೈತರಿಗೆ ಚಳ್ಳೆಹಣ್ಣು ತಿನ್ನಿಸುವ ಕೆಲಸ ನಿಲ್ಲಿಸಬೇಕು. ಈ‌ ಸಂಬಂಧ ಕೇಂದ್ರ ಸರ್ಕಾರಕ್ಕೆ FRP ದರ ಪುನರ್ ಪರಿಶೀಲನೆ‌ ಮಾಡುವಂತೆ ಒತ್ತಡ ಹೇರುವಂತೆ ಸರ್ಕಾರಕ್ಕೆ ಸಲಹೆ ನೀಡಿದ್ದೇವೆ. ಪ್ರತಿ ಟನ್ ಗೆ 3,330 ಬೆಲೆ ನಿಗದಿ ಮಾಡುವಂತೆ ಬೇಡಿಕೆ ಇಟ್ಟಿದ್ದೇವೆ. ಒಂದು ವಾರ ಸರ್ಕಾರದ ನಿರ್ಧಾರಕ್ಕೆ ಕಾದು ನೋಡುತ್ತೇವೆ ಎಂದರು.

ಕಬ್ಬಿನ ಹಣ ಪಾವತಿ ಮಾಡುವುದು ವಿಳಂಬವಾಗುತ್ತಿದೆ. ರೈತರಿಗೆ ಸಕ್ಕರೆ ಇಳುವರಿಯನ್ನು ಎಲ್ಲಾ ಸಕ್ಕರೆ ಕಾರ್ಖಾನೆಗಳು ಕಡಿಮೆ‌ ತೋರಿಸುತ್ತಿವೆ. ಇದರಿಂದ ರೈತರಿಗೆ ಬೆಲೆಯಲ್ಲಿ ಮೋಸ ಆಗುತ್ತಿದೆ. ಉಪ ಉತ್ಪನ್ನಗಳ ಲಾಭ ಹಂಚಿಕೆಯಲ್ಲೂ ಅನ್ಯಾಯವಾಗುತ್ತಿದೆ. ಸಕ್ಕರೆ ಇಳುವರಿ ಕಡಿಮೆ ತೋರಿಸುವ ಕಾರ್ಖಾನೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಎಚ್ಚರಿಕೆ ನೀಡಿದ್ದೇವೆ. ರಾಜ್ಯ ಮಟ್ಟದ ತಾಂತ್ರಿಕ ಸಲಹಾ ಸಮಿತಿ ರಚಿಸಿ ಎಲ್ಲೆಲ್ಲಿ ಇಳುವರಿ ಕಡಿಮೆ ತೋರಿಸ್ತಾರೆ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂಬ ಬಗ್ಗೆ ತೀರ್ಮಾನ ಆಗಿದೆ ಎಂದು ತಿಳಿಸಿದರು.

ರಾಜ್ಯ ಸರ್ಕಾರ 190 ಕೋಟಿ ರೂ. ಮಾತ್ರ ಕಬ್ಬಿನ ಬಿಲ್ ಬಾಕಿ ಇದೆ ಎಂದು ಹೇಳುತ್ತಿದೆ. ಆದರೆ ವಾಸ್ತವದಲ್ಲಿ ಸುಮಾರು 700 ಕೋಟಿ ರೂ. ಕಬ್ಬಿನ ಬಿಲ್ ಬಾಕಿ ಇದೆ ಎಂದು ಸಭೆಯಲ್ಲಿ ಸಚಿವರಿಗೆ ತಿಳಿಸಿದ್ದೇವೆ ಎಂದು ಸ್ಪಷ್ಟಪಡಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.