ETV Bharat / city

ವರ್ಷದ ಮೊದಲ ಹಬ್ಬಕ್ಕೆ ಗ್ರಾಹಕರಿಲ್ಲದೆ ಕಂಗಾಲಾದ ಕಬ್ಬು ಬೆಳೆಗಾರರು ಮತ್ತು ವ್ಯಾಪಾರಸ್ಥರು

ಕೊರೊನಾ‌ ಕಾರಣದಿಂದಾಗಿ‌ ಲಾಕ್‌ಡೌನ್ ಸಮಯದಲ್ಲಿ ರೈತರಿಗೆ ಕಬ್ಬು ಬೆಳೆಯಲು ಸರಿಯಾದ ಸವಲತ್ತುಗಳು ಸಿಗದೇ ಈ ಬಾರಿ‌ ಕಬ್ಬು ಬೆಳೆ ಕೂಡ ಕಡಿಮೆಯಾಗಿದೆ.‌ ಇನ್ನು‌ ಕಬ್ಬು ಬೆಳೆ‌ ಕಡಿಮೆ ಮತ್ತು ಬೆಲೆ‌ ಹೆಚ್ಚಾದ ಕಾರಣ ಗ್ರಾಹಕರೂ ಕೂಡ‌ ಕಬ್ಬು ಕೊಳ್ಳಲು ಮಾರುಕಟ್ಟೆಗೆ ಬರುತ್ತಿಲ್ಲ.

sugar-cane-growers-and-traders-loss-in-sankranti-festival
ಕಂಗಾಲಾದ ಕಬ್ಬು ಬೆಳೆಗಾರರು ಮತ್ತು ವ್ಯಾಪಾರಸ್ಥರು
author img

By

Published : Jan 10, 2021, 10:16 PM IST

ಬೆಂಗಳೂರು: ವರ್ಷದ ಮೊದಲನೇ ಹಬ್ಬವಾದ ಸಂಕ್ರಾಂತಿ‌ಗೆ ಇನ್ನೇನು‌ ಕೆಲವೇ ದಿನಗಳು ಬಾಕಿ‌ ಇದ್ದು, ಸಂಕ್ರಾತಿಯ ವಿಶೇಷ ಸಿಹಿ ಕಬ್ಬು ಕೊಳ್ಳಲು ಮಾರುಕಟ್ಟೆಯಲ್ಲಿ ಗ್ರಾಹಕರಿಲ್ಲದೇ ವ್ಯಾಪಾರಸ್ಥರು ಕಂಗಾಲಾಗಿದ್ದಾರೆ.

ಕಂಗಾಲಾದ ಕಬ್ಬು ಬೆಳೆಗಾರರು ಮತ್ತು ವ್ಯಾಪಾರಸ್ಥರು

ಓದಿ: ರಾಜ್ಯದಲ್ಲಿಂದು 792 ಮಂದಿಗೆ ಕೊರೊನಾ: 2 ಸೋಂಕಿತರು ಬಲಿ‌

ಪ್ರತೀ ವರ್ಷ ಜನವರಿ ತಿಂಗಳ ಆರಂಭದಲ್ಲೇ ಹಬ್ಬಕ್ಕೆ 2 ವಾರಗಳ‌‌ ಮುಂಚೆಯೇ ಮಂಡ್ಯದಿಂದ ರೈತರು ಬೆಳೆದ ಸುಮಾರು 15-16 ಲೋಡ್‌ ಕಬ್ಬು ಬೆಂಗಳೂರಿಗೆ ಸರಬರಾಜು ಮಾಡಲಾಗುತ್ತಿತ್ತು. ಆದರೆ ಈ ಬಾರಿ ಹಬ್ಬಕ್ಕೆ ಮೂರು ದಿನ ಬಾಕಿ ಇದ್ದರೂ ನಗರಕ್ಕೆ ಬಂದಿರೋದು ಕೇವಲ‌ ಒಂದೇ ಲೋಡ್ ಕಬ್ಬು ಮಾತ್ರ.

ಕೊರೊನಾ‌ ಕಾರಣದಿಂದಾಗಿ‌ ಲಾಕ್‌ಡೌನ್ ಸಮಯದಲ್ಲಿ ರೈತರಿಗೆ ಕಬ್ಬು ಬೆಳೆಯಲು ಸರಿಯಾದ ಸವಲತ್ತುಗಳು ಸಿಗದೇ ಈ ಬಾರಿ‌ ಕಬ್ಬು ಬೆಳೆ ಕೂಡ ಕಡಿಮೆಯಾಗಿದೆ.‌ ಇನ್ನು‌ ಕಬ್ಬು ಬೆಳೆ‌ ಕಡಿಮೆ ಮತ್ತು ಬೆಲೆ‌ ಹೆಚ್ಚಾದ ಕಾರಣ ಗ್ರಾಹಕರೂ ಕೂಡ‌ ಕಬ್ಬು ಕೊಳ್ಳಲು ಮಾರುಕಟ್ಟೆಗೆ ಬರುತ್ತಿಲ್ಲ. ಇದರಿಂದ ರೈತರಿಗೆ ಹಾಗೂ ವ್ಯಾಪಾರಸ್ಥರಿಗೆ ತುಂಬಾ ನಷ್ಟವಾಗುತ್ತಿದೆ.‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.