ಬೆಂಗಳೂರು : ಬೆಂಗಳೂರು ವಿಶ್ವವಿದ್ಯಾಲಯವು 2020-21ನೇ ಸಾಲಿನ ಸ್ನಾತಕೋತ್ತರ ಕೋರ್ಸುಗಳ ಆನ್ಲೈನ್ ಪ್ರವೇಶ ಪ್ರಕ್ರಿಯೆಯ 2ನೇ ಸುತ್ತನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.
ಆನ್‌ಲೈನ್ ಪ್ರವೇಶ ಪ್ರಕ್ರಿಯೆಯ 2ನೇ ಸುತ್ತಿನಲ್ಲಿ 4,929 ಸೀಟುಗಳಲ್ಲಿ 2,175 ಸೀಟುಗಳು ಭರ್ತಿಯಾಗಿವೆ. 3ನೇ ಸುತ್ತಿನ ಆನ್‌ಲೈನ್ ಪ್ರವೇಶಾತಿಗೆ ಪಟ್ಟಿಯನ್ನು ಫೆಬ್ರವರಿ 11ರಂದು ಬಿಡುಗಡೆಗೊಳಿಸಲಾಗುತ್ತದೆ.
3ನೇ ಸುತ್ತಿನ ಆನ್‌ಲೈನ್ ಪ್ರವೇಶಾತಿಯ ನಂತರದ ಉಳಿಕೆ ಸೀಟುಗಳನ್ನು ಫೆಬ್ರವರಿ 15ರಿಂದ ಸಂಬಂಧಪಟ್ಟ ಸ್ನಾತಕೋತ್ತರ ವಿಭಾಗಗಳಲ್ಲಿ ಭೌತಿಕವಾಗಿ (offline) ಭರ್ತಿ ಮಾಡಲಾಗುವುದು.
ಪರಿಸರ ವಿಜ್ಞಾನ ಮತ್ತು ಗ್ರಾಮೀಣಾಭಿವೃದ್ದಿ ಕೇಂದ್ರದ ಸ್ನಾತಕೋತ್ತರ ಕೋರ್ಸುಗಳಿಗೆ 3ನೇ ಸುತ್ತಿನ ಪ್ರವೇಶ ಪ್ರಕ್ರಿಯೆಯು ಭೌತಿಕವಾಗಿ (offline) ಫೆಬ್ರವರಿ 15ರಿಂದ ಸಂಬಂಧಪಟ್ಟ ವಿಭಾಗಗಳಲ್ಲಿ ಜರುಗುಲಿದೆ.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 080-22961040/9482164989 ಸಂಪರ್ಕಿಸಬಹುದಾಗಿದೆ ಎಂದು ವಿವಿಯ ಆಡಳಿತವರ್ಗ ತಿಳಿಸಿದೆ.