ETV Bharat / city

ಕೋವಿಡ್​ನಿಂದ ಗುಣಮುಖರಾದವರಲ್ಲಿ ಸ್ಟ್ರೋಕ್, ಮೂರ್ಛೆರೋಗ ಪತ್ತೆ..!

ನೀವು ಕೋವಿಡ್‌ನಿಂದ ಚೇತರಿಸಿಕೊಳ್ಳುತ್ತಿದ್ದರೆ ಅಥವಾ ಆಸ್ಪತ್ರೆಯಿಂದ ಮನೆಗೆ ಮರಳಿದ್ದರೆ ನಿಮ್ಮ ಎಂದಿನ ಜೀವನಕ್ಕೆ ಮರಳುವವರೆಗೆ ಪ್ರತಿನಿತ್ಯ ಒಂದಲ್ಲ ಒಂದು ಸಮಸ್ಯೆ ಎದುರಾಗುವುದು ಸಾಮಾನ್ಯ. ಈ ಕುರಿತು ನರವಿಜ್ಞಾನ ಸಲಹೆಗಾರ ಡಾ. ನಿತಿನ್ ಕುಮಾರ್ ಕೆಲ ಮಾಹಿತಿ ನೀಡಿದ್ದಾರೆ.

Covid
ಸ್ಟ್ರೋಕ್
author img

By

Published : Aug 14, 2021, 11:41 AM IST

ಬೆಂಗಳೂರು: ಕೊರೊನಾ ಸೋಂಕಿನಿಂದ ಗುಣಮುಖರಾದ ಬಳಿಕ ಸಾಕಷ್ಟು ಜನರಿಗೆ ಮೆದುಳಿನಲ್ಲಿ ಸಮಸ್ಯೆ ಕಂಡುಬರುತ್ತಿದ್ದು, ಪಾರ್ಶ್ವವಾಯು, ಮೂರ್ಛೆ, ರಕ್ತ ಹೆಪ್ಪುಗಟ್ಟುವಿಕೆ, ಕೈ ಕಾಲು ಸ್ವಾಧೀನ ಕಳೆದುಕೊಳ್ಳುವಂತಹ ಪ್ರಕರಣಗಳು ಕಂಡುಬರುತ್ತಿವೆ ಎಂದು ನರವಿಜ್ಞಾನ ಸಲಹೆಗಾರ ಡಾ. ನಿತಿನ್ ಕುಮಾರ್ ತಿಳಿಸಿದ್ದಾರೆ.

ಕೋವಿಡ್ ಸೋಂಕು ತಗುಲಿದ ವ್ಯಕ್ತಿ ಗುಣಮುಖರಾಗುವ ಒಳಗಾಗಿ ಅವರ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗಿರುತ್ತದೆ. ಅಲ್ಲದೆ, ಕೋವಿಡ್ ವೈರಸ್ ರಕ್ತದ ಕಣವು ಮೆದುಳಿಗೂ ಹರಿಯುವುದರಿಂದ ಮೆದುಳಿನ ಚಲನ ವಲನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಇದರಿಂದ ಮೆದುಳಿನ ಭಾಗದಲ್ಲಿ ರಕ್ತ ಹೆಪ್ಪುಗಟ್ಟಿ ಪಾರ್ಶ್ವವಾಯು, ಮೂರ್ಛೆ ಬರುವ ಸಾಧ್ಯತೆ ಹೆಚ್ಚಿದೆ ಎಂದು ನಗರದ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯ ನರವಿಜ್ಞಾನ ಸಲಹೆಗಾರರಾದ ಡಾ. ನಿತಿನ್ ಕುಮಾರ್ ಹೇಳಿದ್ದಾರೆ.

Covid
ನರವಿಜ್ಞಾನ ಸಲಹೆಗಾರ ಡಾ. ನಿತಿನ್ ಕುಮಾರ್

ಸ್ಟ್ರೋಕ್, ಫಿಟ್ಸ್ ಬರಬಹುದು ಎಚ್ಚರ:

ಕೋವಿಡ್ ವೈರಸ್‌ನಿಂದಾಗಿ ಮೆದುಳಿಗೆ ಹರಿಯುವ ರಕ್ತನಾಳಗಳು ಸ್ವತಃ ಹಾನಿಯಾಗಿ ರಕ್ತಸ್ರಾವ ಉಂಟಾಗಬಹುದು. ಇದರಿಂದ ಸ್ಟ್ರೋಕ್ ಆಗುವ ಸಾಧ್ಯತೆ ಹೆಚ್ಚಾಗಿದೆ. ಶೇ.10ಕ್ಕೂ ಹೆಚ್ಚು ಜನರು ಕೋವಿಡ್ ಬಳಿಕ ಸ್ಟ್ರೋಕ್​ಗೆ ತುತ್ತಾಗುವ ಸಾಧ್ಯತೆ ಹೆಚ್ಚಿದೆ. ಮತ್ತೆ ಕೆಲವರು ಕೈ ಕಾಲು ಸ್ವಾಧೀನ ಕಳೆದುಕೊಳ್ಳಬಹುದು ಎಂದು ಮಾಹಿತಿ ನೀಡಿದ್ದಾರೆ.

ವಯಸ್ಸಿನ ಅಂತರವಿಲ್ಲ:

ಕೋವಿಡ್‌ನಿಂದ ಗುಣಮುಖರಾದ ಎಲ್ಲಾ ವಯಸ್ಸಿನವರಿಗೂ ಈ ಸಮಸ್ಯೆ ಕಾಣಿಸಿಕೊಳ್ಳಬಹುದು. ಗುಣಮುಖರಾದ ಕೇವಲ ಒಂದು ಅಥವಾ ಎರಡು ವಾರಗಳ ಅಂತರದಲ್ಲಿಯೇ ಸ್ಟ್ರೋಕ್, ಫಿಟ್ಸ್ ಅಂತಹ ಸಮಸ್ಯೆ ಕಾಣಿಸಿಕೊಳ್ಳಬಹುದು. ಅದರಲ್ಲೂ ಡಯಾಬಿಟಿಸ್ ಹಾಗೂ ಕೋಮಾರ್ಬಿಡಿಟಿ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಇಂತಹ ಸಮಸ್ಯೆ ಹೆಚ್ಚು ಕಾಡಬಹುದು ಎಂದು ಹೇಳಿದ್ದಾರೆ.

ಪರಿಹಾರವೇನು?:

ಕೋವಿಡ್ ಬಳಿಕ ದೇಹ ಸಂಪೂರ್ಣ ನಿಶಕ್ತಿಯಿಂದ ಕೂಡಿರುತ್ತದೆ. ಹೀಗಾಗಿ ರೋಗ ನಿರೋಧಕ ಶಕ್ತಿ ಹೆಚ್ಚಿಕೊಳ್ಳುವ ಆಹಾರ ಕ್ರಮವನ್ನು ರೂಢಿಸಿಕೊಳ್ಳಬೇಕು. ಜೊತೆಗೆ ಸ್ಟ್ರೋಕ್ ಅಥವಾ ನರಮಂಡಲಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆ ಕಂಡು ಬಂದ್ರೆ ನಿರ್ಲಕ್ಷಿಸದೆ ಕೂಡಲೇ ರೋಗಿಯನ್ನು ಆಸ್ಪತ್ರೆಗೆ ದಾಖಲಿಸುವುದು ಉತ್ತಮ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.