ಬೆಂಗಳೂರು: ತಡರಾತ್ರಿ ಹೆಬ್ಬಾಳ ಸರ್ಕಲ್ ಬಳಿ ಅಪರಿಚಿತನ ಪುಂಡಾಟಕ್ಕೆ ಕುಟುಂಬವೊಂದು ನಲುಗಿರುವ ಘಟನೆ ತವಡಾಗಿ ಬೆಳಕಿಗೆ ಬಂದಿದೆ.
ಡಿ.10ರಂದು ರಾತ್ರಿ ಹೊಸಕೋಟೆಯ ಸಂಬಂಧಿಕರ ಮನೆಗೆ ಹೋಗಿ ಗೃಹಿಣಿ ದೀಪಾ ಶ್ರೀಕುಮಾರ್ ವಾಪಸ್ ಆಗುತ್ತಿದ್ದಾಗ ಹೆಬ್ಬಾಳ ಸರ್ಕಲ್ ಬಳಿ ಕಾರು ಪಂಚರ್ ಆಗಿತ್ತು. ಕಾರಿನಲ್ಲಿದ್ದ ಯುವತಿ ಸೇರಿ ಇಬ್ಬರು ಮಕ್ಕಳ ಸಹಾಯದಿಂದ ಟೈರ್ ಬದಲಾಯಿಸುತ್ತಿದ್ದರು. ಈ ವೇಳೆ ಕಾರಿನಲ್ಲಿ ಬಂದ ದುಷ್ಕರ್ಮಿಯೋರ್ವ ಯುವತಿಯನ್ನು ಕಂಡು ಆಸಭ್ಯವಾಗಿ ವರ್ತಿಸಿದ್ದಾನೆ.
ಇದಕ್ಕೆ ಕೇರ್ ಮಾಡದೆ ಆತನಿಗೆ ಬೈದು ಅಲ್ಲಿಂದ ಕುಟುಂಬಸ್ಥರು ಹೊರಟಿದ್ದಾರೆ. ಇದಾದ ಬಳಿಕ ಕಿಡಿಗೇಡಿ ಕಾರನ್ನು ಫಾಲೋ ಮಾಡಿದ್ದಾನೆ. ಗೊರಗುಂಟೆಪಾಳ್ಯದವರೆಗೂ ಹಿಂಬಾಲಿಸಿಕೊಂಡು ಬಂದು ಅಸಭ್ಯವಾಗಿ ವರ್ತಿಸಿದ್ದಾನೆ.
ಈ ಕುರಿತು ದೀಪಾ ಶ್ರೀಕುಮಾರ್ ಪೊಲೀಸರಿಗೆ ಫೋನ್ ಮೂಲಕ ಮಾಹಿತಿ ನೀಡಿದ್ದಾರೆ. ಗೊರಗುಂಟೆಪಾಳ್ಯ ಬಳಿ ಹೊಯ್ಸಳ ಪೊಲೀಸರನ್ನು ನೋಡಿದ ಕಿಡಿಗೇಡಿ ಎಸ್ಕೇಪ್ ಆಗಿದ್ದಾನೆ. ಮುಂಜಾನೆವರೆಗೂ ಆರ್ಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ವಿಶ್ರಾಂತಿ ಪಡೆದ ದೀಪಾ ಕುಟುಂಬಸ್ಥರು ಘಟನೆ ಸಂಬಂಧ ಅಮೃತಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.