ETV Bharat / city

GST ಪರಿಹಾರ ಮೊತ್ತದತ್ತ ರಾಜ್ಯ ಸರ್ಕಾರದ ಚಿತ್ತ: ನಿರೀಕ್ಷಿತ ಪರಿಹಾರ ಮೊತ್ತ ಪಾವತಿ ಅನುಮಾನ - ಕರ್ನಾಟಕ ಜಿಎಸ್​ಟಿ

ಕೇಂದ್ರ ಸರ್ಕಾರ ನಿರೀಕ್ಷಿತ ಜಿಎಸ್​ಟಿ ಪರಿಹಾರ ‌ಮೊತ್ತ ಪಾವತಿಸಿಸುವುದು ಅನುಮಾನ ಎಂದು ತೆರಿಗೆ ತಜ್ಞ ಬಿ.ಟಿ.ಮನೋಹರ್ ತಿಳಿಸಿದ್ದಾರೆ. ಆಗಸ್ಟ್‌ 7ರಂದು ನಡೆಯುವ ಜಿಎಸ್​ಟಿ ಕೌನ್ಸಿಲ್ ಸಭೆಯಲ್ಲಿ ಪರಿಹಾರ ಮೊತ್ತಕ್ಕೆ ರಾಜ್ಯ ಸರ್ಕಾರ ಒತ್ತಡ ಹೇರಲಿದೆ. ಆದಷ್ಟು ಬೇಗ ಬಾಕಿ ಜಿಎಸ್​ಟಿ ಪರಿಹಾರ ಮೊತ್ತವನ್ನು ಬಿಡುಗಡೆ ಮಾಡುವಂತೆ ಮನವಿ‌ ಮಾಡಲಿದೆ. ಲಾಕ್‌ಡೌನ್ ವೇಳೆ ರಾಜ್ಯದ ತೆರಿಗೆ ಸಂಗ್ರಹದಲ್ಲಿನ ಕೊರತೆ, ಸದ್ಯದ ಚೇತರಿಕೆ, ಹಾಗೂ ಹೆಚ್ಚಿನ ಜಿಎಸ್​ಟಿ ಪರಿಹಾರ ಮೊತ್ತದ ಅಗತ್ಯತೆ ಬಗ್ಗೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಮನವರಿಕೆ ಮಾಡಿಕೊಡಲು ನಿರ್ಧರಿಸಿದೆ.

State Govt Expected to GST Relief Amount
ನಿರ್ಮಲಾ ಸೀತಾರಾಮನ್​
author img

By

Published : Aug 2, 2020, 3:20 PM IST

ಬೆಂಗಳೂರು: ಲಾಕ್‌ಡೌನ್ ಹಿನ್ನೆಲೆಯಲ್ಲಿ ಕಳೆದ ನಾಲ್ಕು ತಿಂಗಳಿಂದ ರಾಜ್ಯದ ತೆರಿಗೆ ಸಂಗ್ರಹ ಸಂಪೂರ್ಣ ಹದಗೆಟ್ಟಿದೆ. ರಾಜ್ಯದ ಜಿಎಸ್​ಟಿ ಸಂಗ್ರಹವೂ ಸೊರಗಿರುವ ಕಾರಣ ಸರ್ಕಾರ ಇದೀಗ ಕೇಂದ್ರದ ಜಿಎಸ್​ಟಿ ಪರಿಹಾರ ಮೊತ್ತದತ್ತ ಹೆಚ್ಚಿನ ನಿರೀಕ್ಷೆಯ ಕಣ್ಣಿಟ್ಟಿದೆ.

2020-21 ಆರ್ಥಿಕ ವರ್ಷಾರಂಭದ ನಾಲ್ಕು ತಿಂಗಳ ಲಾಕ್‌ಡೌನ್ ರಾಜ್ಯದ ಆರ್ಥಿಕತೆಗೆ ದೊಡ್ಡ ಹೊಡೆತ ನೀಡಿದೆ. ತೆರಿಗೆ ಸಂಗ್ರಹಕ್ಕೆ ಭಾರಿ ಏಟು ಬಿದ್ದಿದ್ದು, ಬೊಕ್ಕಸ ಅಕ್ಷರಶಃ ಬರಿದಾಗಿದೆ. ಇತ್ತ ರಾಜ್ಯ ತನ್ನ ಪ್ರಮುಖ ಆದಾಯ ಮೂಲ ಜಿಎಸ್​ಟಿ ಸಂಗ್ರಹದಲ್ಲಿ ಹಿಂದೆ ಬಿದ್ದಿದೆ. ಏಪ್ರಿಲ್​ನಿಂದ ಜೂನ್​ವರೆಗಿನ‌ ತ್ರೈಮಾಸಿಕ ಅವಧಿಯಲ್ಲಿ ರಾಜ್ಯ ಸುಮಾರು 11,424 ಕೋಟಿ ರೂ. ಎಸ್‌ಜಿಎಸ್​ಟಿಯನ್ನು ಸಂಗ್ರಹಿಸಲು ಸಾಧ್ಯವಾಗಿದೆ. ಅದೇ ಕಳೆದ ವರ್ಷ ಈ ಅವಧಿಯಲ್ಲಿ ಸುಮಾರು 21,000 ಕೋಟಿ ರೂ. ರಾಜ್ಯ ಜಿಎಸ್​ಟಿ ಸಂಗ್ರಹಿಸಿತ್ತು. ಜೂನ್ ತಿಂಗಳಲ್ಲಿ ರಾಜ್ಯ ಒಟ್ಟು 7,000 ಕೋಟಿ ರೂ. ಜಿಎಸ್​ಟಿ ಸಂಗ್ರಹಿಸಿದ್ದರೆ, ಜುಲೈ ತಿಂಗಳಲ್ಲಿ ಸುಮಾರು 6,710 ಕೋಟಿ ರೂ. ಜಿಎಸ್​ಟಿ ಸಂಗ್ರಹಿಸಲಾಗಿದೆ ಎಂದು ರಾಜ್ಯ ಸರ್ಕಾರದ ಜಿಎಸ್​ಟಿ ಸಲಹಾ ಸಮಿತಿ ಸದಸ್ಯ ಬಿ.ಟಿ.ಮನೋಹರ್ ತಿಳಿಸಿದ್ದಾರೆ.

ಈವರೆಗೆ ಪಾವತಿಸಿದ ಜಿಎಸ್​ಟಿ ಪರಿಹಾರ ಏನು?:

ಕೇಂದ್ರ ಸರ್ಕಾರ ರಾಜ್ಯಕ್ಕೆ 2019-20ನೇ ಸಾಲಿನಲ್ಲಿ ಒಟ್ಟು 18,628 ಕೋಟಿ ರೂ‌. ಪರಿಹಾರ ಹಣ ಪಾವತಿಸಿದೆ. ರಾಜ್ಯ ಸರ್ಕಾರದ ತೀವ್ರ ಒತ್ತಡದ ಮೇರೆಗೆ ಕೇಂದ್ರ ಸರ್ಕಾರ ವಿಳಂಬವಾಗಿ ಪರಿಹಾರ ಮೊತ್ತವನ್ನು ಪಾವತಿಸಿತ್ತು‌. ಅದರಂತೆ 2019 ಆಗಸ್ಟ್-ಸೆಪ್ಟೆಂಬರ್ ತಿಂಗಳ ಜಿಎಸ್​ಟಿ ಪರಿಹಾರ ಮೊತ್ತವಾದ 3,600 ಕೋಟಿ ರೂ.ವನ್ನು ಡಿಸೆಂಬರ್ ನಲ್ಲಿ ಪಾವತಿಸಿತ್ತು. ಇನ್ನು 2019 ಅಕ್ಟೋಬರ್-ನವಂಬರ್ ಅವಧಿಯ ಪರಿಹಾರ ಮೊತ್ತ 1536.82 ಕೋಟಿ ರೂ.ವನ್ನು ಕೇಂದ್ರ ಸರ್ಕಾರ ಈ ವರ್ಷ ಏಪ್ರಿಲ್​ನಲ್ಲಿ ಪಾವತಿಸಿತ್ತು. ಅದೇ ರೀತಿ ಡಿಸೆಂಬರ್ 2019 ಮತ್ತು ಫೆಬ್ರವರಿ 2020ರ ಅವಧಿಯ ಜಿಎಸ್​ಟಿ ಪರಿಹಾರ ಮೊತ್ತ 4,314.13 ಕೋಟಿ ರೂ.ಅನ್ನು ಜೂನ್ ತಿಂಗಳಲ್ಲಿ ಪಾವತಿಸಿತ್ತು.

ಬಾಕಿ ಜಿಎಸ್​ಟಿ ಪರಿಹಾರ ಮೊತ್ತ ಏನಿದೆ?:

ಬರಿದಾಗಿರುವ ಬೊಕ್ಕಸದ ಹಿನ್ನೆಲೆ ರಾಜ್ಯ ಸರ್ಕಾರ ಬಹುವಾಗಿ ಜಿಎಸ್​ಟಿ ಪರಿಹಾರ ‌ಮೊತ್ತದ ಮೇಲೆ ಹೆಚ್ಚಿನ ನಿರೀಕ್ಷೆ ಇಟ್ಟಿದೆ. ಈ ಆರ್ಥಿಕ ವರ್ಷ 2020-21 ಸಾಲಿನ ಜಿಎಸ್​ಟಿ ಪರಿಹಾರ ಮೊತ್ತದತ್ತ ರಾಜ್ಯ ಸರ್ಕಾರ ಕಣ್ಣಿಟ್ಟಿದೆ. ಏಪ್ರಿಲ್ ಮತ್ತು ಮೇ ತಿಂಗಳ ಜಿಎಸ್​ಟಿ ಪರಿಹಾರ ಮೊತ್ತ ಇನ್ನೂ ಬಾಕಿ ಉಳಿದುಕೊಂಡಿದ್ದು, ನಾಡಿದ್ದು ನಡೆಯುವ ಜಿಎಸ್​ಟಿ ಕೌನ್ಸಿಲ್ ಸಭೆಯಲ್ಲಿ ಹಣ ಬಿಡುಗಡೆಗೆ ರಾಜ್ಯ ಸರ್ಕಾರ ತೀವ್ರ ಒತ್ತಡ ಹೇರಲಿದೆ.

ಅದರಂತೆ ಏಪ್ರಿಲ್ ತಿಂಗಳಲ್ಲಿ ಸುಮಾರು 4,960 ಕೋಟಿ ರೂ., ಮೇ ತಿಂಗಳ 3,787 ಕೋಟಿ ರೂ. ಪರಿಹಾರ ಮೊತ್ತ ರಾಜ್ಯಕ್ಕೆ ಬರಬೇಕಾಗಿದೆ ಎಂದು ಆರ್ಥಿಕ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಅಷ್ಟು ಪರಿಹಾರ ಮೊತ್ತ ಬರುವುದು ಅನುಮಾನ ಎನ್ನಲಾಗಿದೆ.

ನಿರೀಕ್ಷಿತ ಪರಿಹಾರ ಮೊತ್ತ ಪಾವತಿ ಅನುಮಾನ:

ಕೇಂದ್ರ ಸರ್ಕಾರ ನಿರೀಕ್ಷಿತ ಜಿಎಸ್​ಟಿ ಪರಿಹಾರ ‌ಮೊತ್ತ ಪಾವತಿಸಿಸುವುದು ಅನುಮಾನ ಎಂದು ತೆರಿಗೆ ತಜ್ಞ ಬಿ.ಟಿ.ಮನೋಹರ್ ತಿಳಿಸಿದ್ದಾರೆ. ಆಗಸ್ಟ್‌ 7ರಂದು ನಡೆಯುವ ಜಿಎಸ್​ಟಿ ಕೌನ್ಸಿಲ್ ಸಭೆಯಲ್ಲಿ ಪರಿಹಾರ ಮೊತ್ತಕ್ಕೆ ರಾಜ್ಯ ಸರ್ಕಾರ ಒತ್ತಡ ಹೇರಲಿದೆ. ಆದಷ್ಟು ಬೇಗ ಬಾಕಿ ಜಿಎಸ್​ಟಿ ಪರಿಹಾರ ಮೊತ್ತವನ್ನು ಬಿಡುಗಡೆ ಮಾಡುವಂತೆ ಮನವಿ‌ ಮಾಡಲಿದೆ. ಲಾಕ್‌ಡೌನ್ ವೇಳೆ ರಾಜ್ಯದ ತೆರಿಗೆ ಸಂಗ್ರಹದಲ್ಲಿನ ಕೊರತೆ, ಸದ್ಯದ ಚೇತರಿಕೆ, ಹಾಗೂ ಹೆಚ್ಚಿನ ಜಿಎಸ್​ಟಿ ಪರಿಹಾರ ಮೊತ್ತದ ಅಗತ್ಯತೆ ಬಗ್ಗೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಮನವರಿಕೆ ಮಾಡಿಕೊಡಲು ನಿರ್ಧರಿಸಿದೆ.

ಆದರೆ ರಾಜ್ಯಕ್ಕೆ ಏಪ್ರಿಲ್ ಮತ್ತು ಮೇ ತಿಂಗಳ ಪರಿಹಾರ ಮೊತ್ತ ಗರಿಷ್ಠ ಒಟ್ಟು 3,500- 4,000 ಕೋಟಿ ರೂ. ಬರುವ ಸಾಧ್ಯತೆ ಇದೆ ಎನ್ನಲಾಗಿದೆ. ಕೇಂದ್ರ ಸರ್ಕಾರ ಈಗಾಗಲೇ ತೆರಿಗೆ ಸಂಗ್ರಹದ ಕೊರತೆ ಹಿನ್ನೆಲೆ ಹೆಚ್ಚಿನ ಪರಿಹಾರ ಪಾವತಿ ಕಷ್ಟ ಸಾಧ್ಯ ಎಂಬ ಮುನ್ಸೂಚನೆ ನೀಡಿದೆ. ಹೀಗಾಗಿ ಸಾಲದ ಮೊರೆ ಹೋಗುವಂತೆ ರಾಜ್ಯ ಸರ್ಕಾರಗಳಿಗೆ ತಾಕೀತು ಮಾಡಿದೆ.‌ ಆದರೆ ರಾಜ್ಯ ಸರ್ಕಾರ ಸಾಲ ಎತ್ತುವಳಿ ಮಾಡಲು ಹಿಂದೇಟು ಹಾಕುತ್ತಿದ್ದು, ಹೆಚ್ಚಿನ ಜಿಎಸ್​ಟಿ ಪರಿಹಾರ ಮೊತ್ತವನ್ನು ನೀಡುವಂತೆ ಒತ್ತಡ ಹೇರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆದರೆ ಕೇಂದ್ರ ಸರ್ಕಾರ ಒಟ್ಟು ತೆರಿಗೆ ಸಂಗ್ರಹದಲ್ಲೇ ಕುಸಿತ ಕಂಡಿರುವುದರಿಂದ, ಆರ್ಥಿಕ ಸಂಕಷ್ಟಕ್ಕೊಳಗಾಗಿದ್ದು, ರಾಜ್ಯಗಳಿಗೆ ನಿರೀಕ್ಷಿತ ಜಿಎಸ್​ಟಿ ಪರಿಹಾರ ಮೊತ್ತ ನೀಡುವುದು ಅನುಮಾನ ಎಂದು ಜಿಎಸ್​ಟಿ ಸಲಹಾ ಸಮಿತಿ ಸದಸ್ಯ ಬಿ.ಟಿ.ಮನೋಹರ್ ಆತಂಕ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.