ETV Bharat / city

ಗೂಂಡಾಗಳ ರಕ್ಷಣಾ ತಂಗುದಾಣದಂತಾಗಿರುವ ವಿಧಾನ ಪರಿಷತ್ ರದ್ದು ಮಾಡಿ: ಕುರುಬೂರು ಶಾಂತಕುಮಾರ್ - ಕುರುಬೂರು ಶಾಂತಕುಮಾರ್ ಪತ್ರಿಕಾ ಹೇಳಿಕೆ

ವಿಧಾನ ಪರಿಷತ್​ನಲ್ಲಿ ನಡೆದ ಘಟನೆಯಿಂದಾಗಿ ರಾಜ್ಯದ ಜನರು ತಲೆತಗ್ಗಿಸುವಂತಾಗಿದ್ದು, ಕೂಡಲೇ ಪರಿಷತ್ ರದ್ದುಗೊಳಿಸಬೇಕು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಆಗ್ರಹಿಸಿದ್ದಾರೆ.

State Farmers Organizations President Kurubur Shanthakumar
ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್
author img

By

Published : Dec 17, 2020, 12:10 PM IST

ಬೆಂಗಳೂರು: ಹಿರಿಯರ ಮನೆ, ಚಿಂತಕರ ಚಾವಡಿಯಾಗಿದ್ದ ವಿಧಾನ ಪರಿಷತ್ ಇದೀಗ ಗೂಂಡಾಗಳ ರಕ್ಷಣಾ ತಂಗುದಾಣದಂತಾಗಿದೆ. ಹೀಗಾಗಿ ಕೂಡಲೇ ಪರಿಷತ್ ರದ್ದುಪಡಿಸುವಂತೆ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ವಿಧಾನ ಪರಿಷತ್ ಹಿರಿಯರ ಮನೆಯಾಗಿ ಉಳಿದಿಲ್ಲ, ಗೂಂಡಾಗಳ ರಕ್ಷಣಾ ತಾಣವಾಗಿದೆ. ಪರಿಷತ್​ನಲ್ಲಿ ನಡೆದ ಘಟನೆಯಿಂದಾಗಿ ರಾಜ್ಯದ ಜನರು ತಲೆತಗ್ಗಿಸುವಂತಾಗಿದೆ. ಹಣಬಲದಿಂದ ಸ್ಥಾನ ಖರೀದಿಸಿ ಕಾನೂನು ರಕ್ಷಣೆ ಪಡೆಯುವಂತಾಗಿದೆ. ಇಂತಹ ವಿಧಾನ ಪರಿಷತ್ ನಮ್ಮ ರಾಜ್ಯಕ್ಕೆ ಬೇಕಾಗಿಲ್ಲ ಎಂದು ಕಿಡಿಕಾರಿದ್ದಾರೆ.

ಓದಿ: ಪೋಷಕರ ವಿರೋಧದ ನಡುವೆ ಪ್ರೀತಿಸಿ ಮದುವೆಯಾಗಿದ್ದರು ಡಿಎಸ್‌ಪಿ ಲಕ್ಷ್ಮೀ

ಕೂಡಲೇ ಪರಿಷತ್ ರದ್ದುಗೊಳಿಸಿ, ಇದರಿಂದ ರಾಜ್ಯಕ್ಕೆ ಕನಿಷ್ಠ 250 ಕೋಟಿ ರೂಪಾಯಿ ಉಳಿತಾಯವಾಗುತ್ತದೆ. ಜೊತೆಗೆ ರಾಜ್ಯದ ಮಾನ ಉಳಿಯುತ್ತದೆ. ಪಕ್ಕದ ತಮಿಳುನಾಡು, ತೆಲಂಗಾಣ ರಾಜ್ಯಗಳಲ್ಲಿ ಈಗಾಗಲೇ ರದ್ದುಗೂಳಿಸಿದ್ದಾರೆ. ಅದೇ ರೀತಿ ನಮ್ಮ ರಾಜ್ಯದಲ್ಲಿಯೂ ರದ್ದುಗೊಳಿಸಲಿ ಎಂದು ಪತ್ರಿಕಾ ಹೇಳಿಕೆ ಮೂಲಕ ಆಗ್ರಹಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.