ಬೆಂಗಳೂರು: ಹೊಸ ವರ್ಷದಿಂದ ಸಚಿವಾಲಯದ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ಆನ್‌ಲೈನ್ ರಜೆ ನಿರ್ವಹಣಾ ವ್ಯವಸ್ಥೆ ಜಾರಿಗೆ ತರಲಾಗಿದೆ.
ಸಚಿವಾಲಯದ ಸಿಬ್ಬಂದಿ ಹಾಗೂ ಅಧಿಕಾರಿಗಳು ರಜೆ ಪಡೆಯುವ ಹಾಗೂ ಅಂಗೀಕಾರ ವಿಧಾನವನ್ನು ಆನ್‌ಲೈನ್ ಮಾಡಲಾಗಿದೆ. ಸಚಿವಾಲಯದ ಎಲ್ಲಾ ಗ್ರೂಪ್ ಎ, ಬಿ, ಸಿ ವೃಂದದ ಅಧಿಕಾರಿ ಮತ್ತು ನೌಕರರಿಗೆ ಇ-ಲೀವ್ ತಂತ್ರಾಂಶವನ್ನು ಹೊಸ ವರ್ಷದಿಂದ ಕಡ್ಡಾಯವಾಗಿ ಜಾರಿಗೆ ತರಲಾಗಿದೆ. ಅದರ ಪ್ರಕಾರ ಸಚಿವಾಲಯದ ನೌಕರರು ಈಗಾಗಲೇ ನೀಡಲಾಗಿರುವ ಯೂಸರ್ ಐಡಿ ಮತ್ತು ಪಾಸ್ವರ್ಡ್ ಬಳಸಿ ಲಾಗ್ ಇನ್ ಆಗಿ ರಜೆ ನಿರ್ವಹಣಾ ವ್ಯವಸ್ಥೆಯಲ್ಲೇ ರಜೆ ಮನವಿ ಸಲ್ಲಿಸಬೇಕು. ರಜೆ ವ್ಯವಸ್ಥೆಯಲ್ಲಿ ಹೆಚ್ಚು ಪಾರದರ್ಶಕತೆ ತರುವ ನಿಟ್ಟಿನಲ್ಲಿ ಸರ್ಕಾರ ಈ ಇ-ಲೀವ್ ತಂತ್ರಾಂಶವನ್ನು ಜಾರಿಗೆ ತರಲಾಗಿದೆ.