ETV Bharat / city

ಶ್ರೀ ಕೃಷ್ಣ ಕಥಾಮಂಜರಿ ಗದ್ಯ ಕಾವ್ಯ ಬಿಡುಗಡೆ ಮಾಡಿದ ಸಿಎಂ - ಶ್ರೀ ಕೃಷ್ಣ ಕಥಾಮಂಜರಿ ಗದ್ಯ ಕಾವ್ಯ ಬಿಡುಗಡೆ ಮಾಡಿದ ಸಿಎಂ

ಶ್ರೀ ಕೃಷ್ಣ ಕಥಾಮಂಜರಿ ಗದ್ಯ ಕಾವ್ಯವನ್ನು ಸಿಎಂ ಬಿ.ಎಸ್​. ಯಡಿಯೂರಪ್ಪ ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ಬಿಡುಗಡೆ ಮಾಡಿದರು.

ಶ್ರೀ ಕೃಷ್ಣ ಕಥಾಮಂಜರಿ ಗದ್ಯ ಕಾವ್ಯ ಬಿಡುಗಡೆ
ಶ್ರೀ ಕೃಷ್ಣ ಕಥಾಮಂಜರಿ ಗದ್ಯ ಕಾವ್ಯ ಬಿಡುಗಡೆ
author img

By

Published : Dec 16, 2020, 7:23 PM IST

ಬೆಂಗಳೂರು : ಸಿಎಂ ಬಿ.ಎಸ್​. ಯಡಿಯೂರಪ್ಪ ಶ್ರೀ ಕೃಷ್ಣ ಕಥಾಮಂಜರಿ ಗದ್ಯ ಕಾವ್ಯವನ್ನು ತಮ್ಮ ನಿವಾಸ ಕೃಷ್ಣಾದಲ್ಲಿ ಬಿಡುಗಡೆ ಮಾಡಿದರು.

ಈ ವೇಳೆ ಮಾತನಾಡಿದ ಸಿಎಂ ಬಿಎಸ್​ವೈ, ಕುಂಟಿಗಾನ ಮಠದ ಬಾಲ ಕೃಷ್ಣ ಟ್ರಸ್ಟ್, ಕನ್ನಡ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದೆ. ಕುಂಟಿಗಾನ‌ ಮಠದ ಬಾಲ‌ಕೃಷ್ಣ ಭಟ್ಟರು ಸಂಸ್ಕೃತದಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದಾರೆ. ಕನ್ನಡ ಸಾಹಿತ್ಯ, ಯಕ್ಷಗಾನ ಪ್ರಕಾರಗಳಿಗೆ ವಿಶೇಷ ಕೊಡುಗೆ ನೀಡಿದ್ದಾರೆ. ಈ ಗದ್ಯ ಕಾವ್ಯವನ್ನು ಅನೇಕ‌ ಶಾಲೆಗಳಿಗೆ ಅಧ್ಯಯನ‌ ರೂಪದಲ್ಲಿ ಹಂಚಲಿರುವ ವಿಷಯ ತಿಳಿದು ಸಂತೋಷವಾಯಿತು. ಈ ಗದ್ಯ ಕಾವ್ಯ ಸಮಕಾಲಿನ ಹಾಗೂ ಮುಂದಿನ ಪೀಳಿಗೆಗೆ ತಲುಪುವಂತಾಗಲಿ. ಮುಂದೆಯೂ ಸಹ ಈ ಟ್ರಸ್ಟ್​ನ ಸೇವಾ ಚಟುವಟಿಕೆಗಳು ಹೀಗೆ ನಿರಂತರವಾಗಿ ಸಾಗುವಂತಾಗಲಿ ಎಂದು ಶುಭ ಹಾರೈಸಿದರು.

ಇನ್ನು ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ‌ ದೊಡ್ಡರಂಗೇಗೌಡ, ಕರ್ನಾಟಕ‌ ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಿಗಾರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.