ETV Bharat / city

ಘಾಟಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಹುಂಡಿ ಎಣಿಕೆ: 77 ಲಕ್ಷ ರೂ. ಸಂಗ್ರಹ - ಹುಂಡಿ ಹಣ ಎಣಿಕೆ

ಘಾಟಿ ಸುಬ್ರಹ್ಮಣ್ಯ ದೇಗುಲದಲ್ಲಿ ನಿನ್ನೆ ಹುಂಡಿಯಲ್ಲಿದ್ದ ಹಣದ ಎಣಿಕೆ ನಡೆಸಲಾಯಿತು. ಒಟ್ಟು 77,26,172 ರೂಪಾಯಿ ನಗದು ಸಂಗ್ರಹವಾಗಿದೆ. ಇದರೊಂದಿಗೆ 9 ಗ್ರಾಂ ಚಿನ್ನ ಹಾಗೂ 3 ಕೆ.ಜಿ ಬೆಳ್ಳಿಯನ್ನ ಭಕ್ತರು ಹುಂಡಿಯಲ್ಲಿ ಹಾಕುವ ಮೂಲಕ ಹರಕೆ ತೀರಿಸಿದ್ದಾರೆ.

ಘಾಟಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಹುಂಡಿ ಎಣಿಕೆ ಕಾರ್ಯ

author img

By

Published : Jun 22, 2022, 9:30 AM IST

ದೊಡ್ಡಬಳ್ಳಾಪುರ: ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಶ್ರೀ ಘಾಟಿ ಸುಬ್ರಹ್ಮಣ್ಯ ದೇವಾಲಯದಲ್ಲಿ ನಿನ್ನೆ ಹುಂಡಿ ಹಣ ಎಣಿಕೆ ಕಾರ್ಯ ಮಾಡಲಾಗಿದ್ದು, ಒಟ್ಟು 77,26,172 ರೂಪಾಯಿ ನಗದು, 9 ಗ್ರಾಂ ಚಿನ್ನ ಹಾಗೂ 3 ಕೆ.ಜಿ ಬೆಳ್ಳಿ ಸಂಗ್ರಹಗೊಂಡಿದೆ.

ಕಳೆದ ಎರಡು ತಿಂಗಳಿಂದ ಹುಂಡಿ ಎಣಿಕೆ ಮಾಡಿರಲಿಲ್ಲ. ನಿನ್ನೆ ಭಕ್ತರ ಸಮ್ಮುಖದಲ್ಲಿ ಹಣ ಎಣಿಕೆ ಕಾರ್ಯ ನಡೆಸಲಾಯಿತು. ಗ್ರಾಮಾಂತರ ಪೊಲೀಸ್ ಠಾಣೆ ಇನ್ಸ್​ಪೆಕ್ಟರ್ ಸತೀಶ್, ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಡಿ.ನಾಗರಾಜು, ಮುಜರಾಯಿ ಇಲಾಖೆ ಸಹಾಯಕ ಆಯುಕ್ತೆ ಹೇಮಾವತಿ, ದೇವಾಲಯದ ಅಧೀಕ್ಷಕ ರಘು ಹುಚ್ಚಪ್ಪ, ಪ್ರಧಾನ ಅರ್ಚಕರಾದ ಸುಬ್ಬಕೃಷ್ಣ ಶಾಸ್ತ್ರಿ ನೇತೃತ್ವದಲ್ಲಿ ಇಂಡಿಯನ್ ಓವರ್ ಸೀಸ್ ಬ್ಯಾಂಕ್ ಸಿಬ್ಬಂದಿ, ದೇವಾಲಯದ‌‌ ಸಿಬ್ಬಂದಿ ಹಾಗೂ ಪೊಲೀಸ್ ಸಿಬ್ಬಂದಿ ಹಣ ‌ಎಣಿಕೆ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

ಘಾಟಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಹುಂಡಿ ಎಣಿಕೆ ಕಾರ್ಯ

ಇದನ್ನೂ ಓದಿ: 50 ರೂಪಾಯಿಗಾಗಿ ಸ್ನೇಹಿತರ ನಡುವೆ ಜಗಳ.. ಬೆಂಗಳೂರಲ್ಲಿ ಚಾಕು ಇರಿದು ಗೆಳೆಯನ ಕೊಲೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.