ಬೆಂಗಳೂರು : ಸಾರ್ವಜನಿಕರ ಅನುಕೂಲಕ್ಕಾಗಿ ಕ್ರಿಸ್ಮಸ್ ಮತ್ತು ಶಬರಿಮಲೆ ಪೂಜೆ ಹೋಗುವ ಪ್ರಯಾಣಿಕರಿಗೆ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣದಿಂದ ವಿಶೇಷ ರೈಲು ವ್ಯವಸ್ಥೆ ಮಾಡಲಾಗಿದೆ.
ರೈಲ್ವೇ ನಿಲ್ದಾಣ ಬೆಂಗಳೂರಿನಿಂದ ಎರ್ನಾಕುಲಂ - ಕೃಷ್ಣರಾಜಪುರಂ ಸ್ಪೆಷಲ್ ಎಕ್ಸ್‌ಪ್ರೆಸ್ ವಿಶೇಷ ಶುಲ್ಕದಲ್ಲಿ ನಿಯೋಜಿಸಲಾಗಿದೆ. ರೈಲು ಸಂಖ್ಯೆ 06547 ಬೆಂಗಳೂರು - ಎರ್ನಾಕುಲಂ ಸ್ಪೆಷಲ್ ಎಕ್ಸ್‌ಪ್ರೆಸ್ 28 ರಂದು ಸಂಜೆ 6:45 ಕ್ಕೆ ಬೆಂಗಳೂರಿನಿಂದ ಹೊರಟು ಮರುದಿನ ಬೆಳಗ್ಗೆ 06:00 ಗಂಟೆಗೆ ಎರ್ನಾಕುಲಂ ತಲುಪುತ್ತದೆ. ನಂತರ ಎರ್ನಾಕುಲಂ - ಕೃಷ್ಣರಾಜಪುರಂ ಸ್ಪೆಷಲ್ ಎಕ್ಸ್‌ಪ್ರೆಸ್ 29 ರಂದು ಸಂಜೆ 7 ಗಂಟೆಗೆ ಎರ್ನಾಕುಲಂನಿಂದ ಹೊರಟು ಮರುದಿನ ಬೆಳಗ್ಗೆ 6:50 ಗಂಟೆಗೆ ಕೃಷ್ಣರಾಜಪುರಂ ತಲುಪಲಿದೆ.
ಈ ರೈಲು ವೈಟ್‌ಫೀಲ್ಡ್, ಬಂಗಾರ್‌ಪೇಟೆ, ಕುಪ್ಪಂ, ಸೇಲಂ, ಈರೋಡ್, ತಿರುಪ್ಪೂರು, ಕೊಯಮತ್ತೂರು, ಪಾಲಕ್ಕಾಡ್, ತ್ರಿಶೂರ್ ಮತ್ತು ಅಲುವಾ ಮಾರ್ಗದಲ್ಲಿ ಸಂಚರಿಸುತ್ತದೆ. ಇನ್ನು ಇದರ ಜೊತೆಗೆ ಬೆಂಗಳೂರಿನಿಂದ ಹೊರಡುವ ರೈಲು ಸಂಖ್ಯೆ- 06547 ಬೆಂಗಳೂರು ಕಂಟೋನ್ಮೆಂಟ್ ಮತ್ತು ಕೃಷ್ಣರಾಜಪುರಂನಲ್ಲಿ ನಿಲ್ಲುತ್ತದೆ.
ಈ ರೈಲಿನಲ್ಲಿಎಸಿ ಬೋಗಿ, ಎರಡನೇ ದರ್ಜೆಯ ಸ್ಲೀಪರ್ , ದ್ವಿತೀಯ ದರ್ಜೆ ಮತ್ತು ಲಗೇಜ್ ಇಡಲು ವ್ಯವಸ್ಥೆ ಮಾಡಲಾಗಿದೆ ಎಂದು ನೈರುತ್ಯ ರೈಲ್ವೇ ವಿಭಾಗ ಪ್ರಕಟಣೆ ಹೊರಡಿಸಿದೆ.