ETV Bharat / city

ಸರ್ಕಾರಿ ವಸತಿ ಗೃಹಕ್ಕಾಗಿ ಭಿಕ್ಷೆ ಬೇಡುವುದಿಲ್ಲ: ಸಭಾಪತಿ ಬಸವರಾಜ ಹೊರಟ್ಟಿ - ಸರ್ಕಾರಿ ವಸತಿ ಗೃಹದ ಬಗ್ಗೆ ಸಭಾಪತಿ ಬಸವರಾಜ ಹೊರಟ್ಟಿ ಹೇಳಿಕೆ ಸುದ್ದಿ

ಸಭಾಪತಿ, ಸಭಾಧ್ಯಕ್ಷರು ಎಲ್ಲಿಗೂ ಹೋಗುವ ಹಾಗಿಲ್ಲ. ಯಾವುದೇ ರಾಜಕೀಯ ಚಟುವಟಿಕೆಗಳಲ್ಲಿ ಭಾಗಿಯಾಗುವಂತಿಲ್ಲ. ಹಾಗಾಗಿ, ಇಂಥದ್ದೇ ಮನೆ ನೀಡುವಂತೆ ಪತ್ರ ಬರೆದಿದ್ದೇನೆ. ಆ ಮನೆ ಕೊಟ್ಟರೆ ಮಾತ್ರ ಹೋಗುತ್ತೇನೆ ಎಂದು ಖಡಕ್ ಆಗಿ ಹೇಳಿದರು. ಯಾರೂ ಕೂಡ ಸಭಾಪತಿ, ಸಭಾಧ್ಯಕ್ಷ ಆಗಲು ಒಪ್ಪಲ್ಲ. ಆದರೆ, ನಾನು ಖುಷಿಯಿಂದ ಆಗಿದ್ದೇನೆ..

Speaker Basavaraj Horatti statement about Residence
ಬಸವರಾಜ ಹೊರಟ್ಟಿ
author img

By

Published : Sep 4, 2021, 7:45 PM IST

Updated : Sep 4, 2021, 10:51 PM IST

ಬೆಂಗಳೂರು : ಸರ್ಕಾರಿ ವಸತಿ ಗೃಹಕ್ಕಾಗಿ ಭಿಕ್ಷೆ ಬೇಡುವುದಿಲ್ಲ. ಅದು ಸರ್ಕಾರಕ್ಕೆ ಬಿಟ್ಟಿದ್ದು ಎಂದು ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು. ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಗೆ ಸಂಬಂಧಿಸಿದಂತೆ ವಿಧಾನಸೌಧದಲ್ಲಿ ಸಭೆ ನಡೆಸಿದ ಬಳಿಕ ಮಾತನಾಡಿದ ಸಭಾಪತಿ ಬಸವರಾಜ ಹೊರಟ್ಟಿ, ಸರ್ಕಾರಿ ವಸತಿ ಗೃಹ ಹಂಚಿಕೆ ಮಾಡಬೇಕೆಂದು ಮುಖ್ಯಮಂತ್ರಿಗಳಿಗೆ ನಿನ್ನೆ 8ನೇ ಪತ್ರ ಬರೆದಿದ್ದೇನೆ. ಹಿಂದಿನ ಸಭಾಪತಿಗೆ ಹಂಚಿಕೆ ಮಾಡಿದ್ದ ವಸತಿ ಗೃಹವನ್ನು ಕೊಡಬೇಕು. ಇಲ್ಲದಿದ್ದರೆ ಬೇಡ, ಸರ್ಕಾರಿ‌ ವಸತಿ ಗೃಹಕ್ಕಾಗಿ ಭಿಕ್ಷೆ ಬೇಡುವುದಿಲ್ಲ ಎಂದು ಪುನರುಚ್ಚರಿಸಿದರು.

ಸಭಾಪತಿ ಬಸವರಾಜ ಹೊರಟ್ಟಿ

ಸಂಸದೀಯ ವ್ಯವಸ್ಥೆಯಲ್ಲಿ ಸಾಂವಿಧಾನಿಕ ಹುದ್ದೆಗಳ ಪೈಕಿ ವಿಧಾನ ಪರಿಷತ್ ಸಭಾಪತಿ ಹಾಗೂ ವಿಧಾನಸಭೆ ಸಭಾಧ್ಯಕ್ಷರು ಸೇರಿದ್ದು, ಸಭಾಪತಿ ಮತ್ತು ಸಭಾಧ್ಯಕ್ಷರಿಗೆ ನಿರ್ದಿಷ್ಟ ವಸತಿ ಗೃಹ ಗೊತ್ತುಪಡಿಸಬೇಕು ಎಂದು ಹಿಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಜಂಟಿಯಾಗಿ ಪತ್ರ ಬರೆದಿದ್ದೇವೆ ಎಂದರು. ಹಿಂದಿನ ಸಭಾಪತಿಗಳಿಗೆ ಹಂಚಿಕೆ ಮಾಡಿದ್ದ ವಸತಿ ಗೃಹ ಖಾಯಂ ಆಗಿ ಗೊತ್ತುಪಡಿಸಲು ತಿಳಿಸಲಾಗಿದೆ. 8ನೇ ಬಾರಿಗೆ ಬರೆದಿರುವ ಕೊನೆಯ ಪತ್ರವಿದು ಎಂದು ಹೊರಟ್ಟಿ ಹೇಳಿದರು.

ಸಭಾಪತಿ, ಸಭಾಧ್ಯಕ್ಷರು ಎಲ್ಲಿಗೂ ಹೋಗುವ ಹಾಗಿಲ್ಲ. ಯಾವುದೇ ರಾಜಕೀಯ ಚಟುವಟಿಕೆಗಳಲ್ಲಿ ಭಾಗಿಯಾಗುವಂತಿಲ್ಲ. ಹಾಗಾಗಿ, ಇಂಥದ್ದೇ ಮನೆ ನೀಡುವಂತೆ ಪತ್ರ ಬರೆದಿದ್ದೇನೆ. ಆ ಮನೆ ಕೊಟ್ಟರೆ ಮಾತ್ರ ಹೋಗುತ್ತೇನೆ ಎಂದು ಖಡಕ್ ಆಗಿ ಹೇಳಿದರು. ಯಾರೂ ಕೂಡ ಸಭಾಪತಿ, ಸಭಾಧ್ಯಕ್ಷ ಆಗಲು ಒಪ್ಪಲ್ಲ. ಆದರೆ, ನಾನು ಖುಷಿಯಿಂದ ಆಗಿದ್ದೇನೆ ಎಂದರು.

Last Updated : Sep 4, 2021, 10:51 PM IST

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.