ETV Bharat / city

Unlock Bengaluru: ಬಿಬಿಎಂಪಿ ಹೊಸ ನಿಯಮಗಳಿಗೆ ಚಿಲ್ಲರೆ ವ್ಯಾಪಾರಸ್ಥರು ಕಂಗಾಲು - bbmp latest news

ಕೋವಿಡ್ ಅನ್‌ಲಾಕ್ ಪ್ರಕ್ರಿಯೆ ಹಂತ ಹಂತವಾಗಿ ನಡೆಯುತ್ತಿದ್ದು, ಬಿಬಿಎಂಪಿ ಎಲ್ಲಾ ವಲಯಗಳಿಗೂ ಅದಕ್ಕೆ ಹೊಂದುವಂತಹ ಒಂದೊಂದು‌ ರೀತಿಯ ಸೂಕ್ತ ನಿಯಮಗಳನ್ನು ಮಾಡಿದೆ. ಚಿಲ್ಲರೆ ವ್ಯಾಪಾರಿಗಳಿಗೆ ಬಿಬಿಎಂಪಿ 10 ಹೊಸ ನಿಯಮಗಳನ್ನು ಪ್ರಕಟಿಸಿದೆ. ಈ ವಿಚಾರವಾಗಿ ಚಿಲ್ಲರೆ ವ್ಯಾಪಾರಿಗಳು 'ಈಟಿವಿ ಭಾರತ'ದೊಂದಿಗೆ ಮಾತನಾಡಿದ್ದು, ಈ ನಿಯಮ ವ್ಯಾಪಾರ ಕುಸಿತಕ್ಕೆ ಕಾರಣ ಆಗುತ್ತೆ ಎಂದಿದ್ದಾರೆ.

small-retailers-reaction-to-bbmp-new-unlock-rules
ಕಂಗಾಲಾದ ಚಿಲ್ಲರೆ ವ್ಯಾಪಾರಸ್ಥರು
author img

By

Published : Jun 15, 2021, 6:38 PM IST

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹೊಸ ನಿಯಮಗಳಿಗೆ ರಸ್ತೆ ಬದಿ ವ್ಯಾಪಾರಸ್ಥರು ಗರಂ ಆಗಿದ್ದಾರೆ. ಕೇವಲ ಅಗತ್ಯ ವಸ್ತುಗಳ ವ್ಯಾಪಾರಕ್ಕೆ ಮಾತ್ರ ಅವಕಾಶ ನೀಡಿ ಆದೇಶ ಮಾಡಿರುವುದು ಏಕೆ ಎಂದು ಬಿಬಿಎಂಪಿಗೆ ಪ್ರಶ್ನಿಸಿದ್ದಾರೆ.

ನಗರದಲ್ಲಿ ಕೋವಿಡ್ ಅನ್‌ಲಾಕ್ ಪ್ರಕ್ರಿಯೆ ಹಂತ ಹಂತವಾಗಿ ನಡೆಯುತ್ತಿದ್ದು, ಬಿಬಿಎಂಪಿ ಎಲ್ಲಾ ವಲಯಗಳಿಗೂ ಅದಕ್ಕೆ ಹೊಂದುವಂತಹ ಒಂದೊಂದು‌ ರೀತಿಯ ಸೂಕ್ತ ನಿಯಮಗಳನ್ನು ಮಾಡಿದೆ. ಚಿಲ್ಲರೆ ವ್ಯಾಪಾರಿಗಳಿಗೆ ಬಿಬಿಎಂಪಿ 10 ಹೊಸ ರೂಲ್ಸ್ ಪ್ರಕಟಿಸಿದೆ. ಈ ನಿಟ್ಟಿನಲ್ಲಿ ಹಲವು ರಸ್ತೆ ಬದಿ ವ್ಯಾಪಾರಿಗಳು 'ಈಟಿವಿ ಭಾರತ'ದೊಂದಿಗೆ ಮಾತನಾಡಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಕಂಗಾಲಾದ ಚಿಲ್ಲರೆ ವ್ಯಾಪಾರಸ್ಥರು

ಓದಿ: ಶಾಪಿಂಗ್ ಫೆಸ್ಟಿವಲ್ ಅಂತಾ ಗ್ರಾಹಕರನ್ನು ಸೆಳೆಯುವಂತಿಲ್ಲ: ವ್ಯಾಪಾರಿಗಳಿಗೆ ಬಿಬಿಎಂಪಿ ಸೂಚನೆ

ಅನ್​ಲಾಕ್ ಆಗಿದೆ ಎಂದು ವ್ಯಾಪಾರಿಗಳು ಶಾಪಿಂಗ್ ಫೆಸ್ಟಿವಲ್ ಆಯೋಜಿಸುವಂತಿಲ್ಲ ಎಂದು ಪಾಲಿಕೆ ಎಚ್ಚರಿಕೆ ನೀಡಿದೆ. ಜನಸಂದಣಿ ಹೆಚ್ಚಿಸುವ ಬಂಪರ್ ಸೇಲ್, ಆಫರ್ ಮೇಳಗಳನ್ನು ನಡೆಸದಂತೆ ಬಿಬಿಎಂಪಿ ಆದೇಶ ಹೊರಡಿಸಿದ್ದಕ್ಕೆ, ಮಲ್ಲೇಶ್ವರದ ವ್ಯಾಪಾರಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೊದಲೇ ಜನರು ಬರುತ್ತಿಲ್ಲ, ಕೇವಲ ಹಣ್ಣು-ಹೂವುಗಳ ವ್ಯಾಪಾರಕ್ಕೆ ಅವಕಾಶ ನೀಡಲಾಗಿದೆ. ಮೊದಲು ಸಂಜೆಯವರೆಗೆ ಅಂಗಡಿ-ಮುಂಗಟ್ಟುಗಳನ್ನು ತೆರೆಯಲು ಬಿಡಿ. ಇಲ್ಲ, ಈ ರೀತಿಯ ಆದೇಶ ಇನ್ನಷ್ಟು ವ್ಯಾಪಾರ ಕುಸಿತಕ್ಕೆ ಕಾರಣವಾಗುವುದು ಎಂದು ಅಭಿಪ್ರಾಯಪಟ್ಟರು.

ಕಣ್ಣೀರಿಟ್ಟ ವ್ಯಾಪಾರಿಗಳು:

ಕೊರೊನಾ ಲಾಕ್​​ಡೌನ್ ಸಂಕಷ್ಟದ ಸಮಯದಲ್ಲಿ ಬಿಬಿಎಂಪಿ ನಮ್ಮ ಕಷ್ಟಗಳನ್ನು ತಿಳಿದುಕೊಳ್ಳಬೇಕು. ಮೊದಲೇ ಜನರಿಲ್ಲದೇ ವ್ಯಾಪಾರದಲ್ಲಿ ನಷ್ಟ ಅನುಭವಿಸಿದ್ದೇವೆ. ಈಗ ಈ ರೀತಿ ನಿಯಮಗಳನ್ನು ಜಾರಿ ಮಾಡಿ ಬಡವರ ಹೊಟ್ಟೆ ಮೇಲೆ ತಣ್ಣೀರಿನ ಬಟ್ಟೆ ಹಾಕುತ್ತಿದ್ದಾರೆ. ಯಾರೂ ಕೂಡ ಯಾವ ಸಹಾಯವನ್ನು ಸಹ ಮಾಡುತ್ತಿಲ್ಲ, ಇದರಿಂದ ತುಂಬಾ ನೊಂದಿದ್ದೇವೆ. ಸರ್ಕಾರ ಕೊಡುವ ಪರಿಹಾರದ ಹಣ ಸಹ ನಮಗೆ ತಲುಪಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸೂಚನೆ ನೀಡಿದ ಪಾಲಿಕೆ:

ಹೆಚ್ಚು ಗ್ರಾಹಕರು ಸೇರುವ ಮಳಿಗೆಗಳು ಟೋಕನ್ ಪದ್ಧತಿ ಅಳವಡಿಸಿಕೊಳ್ಳಬೇಕೆಂದು ಬಿಬಿಎಂಪಿ ಸೂಚನೆ ನೀಡಿದೆ. ಮಳಿಗೆಗಳಲ್ಲಿ ಕಡ್ಡಾಯವಾಗಿ ಆಲ್ಕೊಹಾಲ್ ಆಧಾರಿತ ಸ್ಯಾನಿಟೈಸರ್ ಗ್ರಾಹಕರಿಗೆ ಸಿಗುವಂತಿರಬೇಕು ಎಂದು ಪಾಲಿಕೆ ಹೇಳಿದೆ.

ಪದೇ ಪದೇ ಮುಟ್ಟುವ ವಸ್ತುಗಳು, ಬಿಡಿ ಭಾಗಗಳನ್ನು ಸ್ಯಾನಿಟೈಸ್ ಮಾಡುತ್ತಿರಬೇಕು. ಗ್ರಾಹಕರು ವಸ್ತುಗಳನ್ನು ಪದೇ ಪದೇ ಮುಟ್ಟಲು ಅವಕಾಶ ಇಲ್ಲದಂತೆ ಸಿಬ್ಬಂದಿಯಿಂದಲೇ ಸಾಮಗ್ರಿ ಕೊಡುವ‌ ವ್ಯವಸ್ಥೆಯಾಗಬೇಕು. ವಾರಾಂತ್ಯಗಳಲ್ಲಿ ಬಿಲ್ಲಿಂಗ್ ಕೌಂಟರ್‌ಗಳನ್ನು ಹೆಚ್ಚಿಸಿ ಜನಸಂದಣಿಯಾಗದಂತೆ ನೋಡಿಕೊಳ್ಳಬೇಕು. ಮಳಿಗೆಯಲ್ಲಿ‌ ಕೆಲಸ ಮಾಡುವವರೆಲ್ಲ ವ್ಯಾಕ್ಸಿನ್ ಹಾಕಿಸಿಕೊಳ್ಳುವಂತೆ ಮಾಲೀಕರೇ ಪ್ರೇರೇಪಿಸಬೇಕು. ಎಲ್ಲಾ ಸಿಬ್ಬಂದಿಗೂ ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳುವ‌ ಕುರಿತು ಎಚ್ಚರಿಸಬೇಕು ಎಂದೂ ಸಹ ಪಾಲಿಕೆ ಹೊರಡಿಸಿರುವ ಅದೇಶದಲ್ಲಿ ಉಲ್ಲೇಖಿಸಲಾಗಿದೆ.

ಯಾವುದೇ ಸಿಬ್ಬಂದಿಗೆ ಕೊರೊನಾ ಲಕ್ಷಣ ಕಂಡಲ್ಲಿ ರಜೆಯೊಂದಿಗೆ ಚಿಕಿತ್ಸೆ ಕೊಡಿಸಬೇಕು. ಕೋವಿಡ್ ಕುರಿತ ಜಾಗೃತಿಯ ಬರಹಗಳನ್ನು ಮಳಿಗೆಗಳಲ್ಲಿ ಪ್ರದರ್ಶಿಸಬೇಕು ಎಂಬ ರೂಲ್ಸ್‌ಗಳನ್ನ ಚಿಲ್ಲರೆ ವ್ಯಾಪಾರಿಗಳು ಪಾಲಿಸುವಂತೆ ಬಿಬಿಎಂಪಿ ಸೂಚಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.