ETV Bharat / city

ದಸರಾ ಖರೀದಿ ಜೋರು.. ಎಲ್ಲೆಲ್ಲೂ ಬೂದು ಕುಂಬಳಕಾಯಿ, ಬಾಳೆ ಕಂಬ ಮಾರಾಟ.. - ಕೆ.ಆರ್ ಮಾರುಕಟ್ಟೆ

ದಸರಾ ಆಚರಣೆಗೆ ಸಿಲಿಕಾನ್ ಸಿಟಿ ಮಾರುಕಟ್ಟೆಗಳು ಸಿಂಗಾರಗೊಂಡಿದ್ದು, ಕೆ ಆರ್ ಮಾರುಕಟ್ಟೆಯಲ್ಲಿ ಹಬ್ಬಕ್ಕೆ ಎರಡು ದಿನ ಮುನ್ನವೇ ಜನ ಕಿಕ್ಕಿರಿದು ತುಂಬಿದ್ರೆ, ಮಲ್ಲೇಶ್ವರಂ ಮಾರುಕಟ್ಟೆ ದೀಪಾಲಂಕಾರಗಳಿಂದ ಸಿಂಗಾರಗೊಂಡು ಗ್ರಾಹಕರನ್ನು ಆಹ್ವಾನಿಸುತ್ತಿದೆ.

ಬೂದು ಕುಂಬಳಕಾಯಿ
author img

By

Published : Oct 5, 2019, 11:51 PM IST

ಬೆಂಗಳೂರು: ದಸರಾ ಆಚರಣೆಗೆ ಸಿಲಿಕಾನ್ ಸಿಟಿ ಮಾರುಕಟ್ಟೆಗಳು ಸಿಂಗಾರಗೊಂಡಿದ್ದು, ಕೆ ಆರ್ ಮಾರುಕಟ್ಟೆಯಲ್ಲಿ ಹಬ್ಬಕ್ಕೆ ಎರಡು ದಿನ ಮುನ್ನವೇ ಜನ ಕಿಕ್ಕಿರಿದು ತುಂಬಿದ್ರೆ, ಮಲ್ಲೇಶ್ವರಂ ಮಾರುಕಟ್ಟೆ ದೀಪಾಲಂಕಾರಗಳಿಂದ ಸಿಂಗಾರಗೊಂಡು ಗ್ರಾಹಕರನ್ನು ಆಹ್ವಾನಿಸುತ್ತಿದೆ.

ದಸರಾ ಖರೀದಿ ಬಲು ಜೋರು..

ಸೋಮವಾರದ ಆಯುಧ ಪೂಜೆ, ಮಂಗಳವಾರ ವಿಜಯದಶಮಿ ಆಗಿದ್ದರಿಂದ ಎರಡು ದಿನ ಮುನ್ನವೇ ವ್ಯಾಪಾರ ಬಿರುಸಾಗಿದೆ. ಸರ್ಕಾರಿ ಕಚೇರಿಗಳಲ್ಲಿ ಸಾಲು ಸಾಲು ರಜೆಯ ಕಾರಣ ಎರಡು ದಿನ ಮುನ್ನವೇ ಆಯುಧ ಪೂಜೆ, ಕಚೇರಿ ಪೂಜೆ ನೆರವೇರಿಸಲಾಗಿದೆ. ಸ್ಥಳಕ್ಕೊಂದರಂತೆ ಬೂದುಗುಂಬಳಕಾಯಿ, ಬಾಳೆ ಕಂಬದ ಬೆಲೆಯಲ್ಲೂ ಹೆಚ್ಚು ಕಡಿಮೆ ಇದೆ. ಇನ್ನು, ಕೆ ಆರ್ ಮಾರುಕಟ್ಟೆಯಲ್ಲಿ ಒಂದು ಮಾರು ಸೇವಂತಿಗೆ ಹೂವಿಗೆ 60-80 ರೂ. ಇದ್ದು, ಮಲ್ಲೇಶ್ವರಂ ಮಾರುಕಟ್ಟೆಯಲ್ಲಿ 50 ರಿಂದ 70 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ‌.

ಕೆ ಆರ್ ಮಾರುಕಟ್ಟೆಯಲ್ಲಿ ಬೂದು ಕುಂಬಳ ಕಾಯಿಗೆ 100 ರಿಂದ 250 ರೂ.ಗೆ ಮಾರಾಟ ಮಾಡಲಾಗುತ್ತಿದ್ದು, ಮಲ್ಲೇಶ್ವರಂ ಬೀದಿಗಳಲ್ಲಿ ಕೆಜಿಗೆ 60 ರಂತೆ ಮಾರಾಟ ಮಾಡಲಾಗುತ್ತಿದೆ. ಬಾಳೆಕಂಬ ಜೋಡಿಗೆ 40 ರೂ.ನಂತೆ ಮಾರಾಟ ಮಾಡಲಾಗುತ್ತಿದೆ. ನಾಳೆಯೂ ಸಹ ಹೆಚ್ಚಿನ ಗ್ರಾಹಕರು ಬರುವ ನಿರೀಕ್ಷೆಯಿದ್ದು, ವ್ಯಾಪಾರ ಉತ್ತಮವಾಗಬಹುದು ಎಂಬ ನಿರೀಕ್ಷೆಯಲ್ಲಿ ವ್ಯಾಪಾರಿಗಳಿದ್ದಾರೆ. ಇನ್ನು, ಹೂವಿನ ದರದಲ್ಲಿ ಕೊಂಚ ಏರಿಕೆಯಾಗಿದ್ದು, ಗ್ರಾಹಕರ ಕೈ ಬಿಸಿ ಮಾಡಿದೆ. ಆದರೆ, ಈರುಳ್ಳಿ ದರ ಕಡಿಮೆಯಾಗಿದ್ದು, ಗ್ರಾಹಕರು ನಿಟ್ಟುಸಿರು ಬಿಡುವಂತೆ ಮಾಡಿದೆ.

Intro:ದಸರಾ ಖರೀದಿ ಜೋರು- ಎಲ್ಲೆಲ್ಲೂ ಬೂದುಗುಂಬಳಕಾಯಿ, ಬಾಳೆಕಂಬ ಮಾರಾಟ
ಬೆಂಗಳೂರು- ದಸರಾ ಆಚರಣೆಗೆ ಸಿಲಿಕಾನ್ ಸಿಟಿ ಮಾರುಕಟ್ಟೆಗಳೂ ಸಿಂಗಾರಗೊಂಡಿವೆ.. ಕೆ.ಆರ್ ಮಾರುಕಟ್ಟೆಯಲ್ಲಿ ಹಬ್ಬಕ್ಕೆ ಎರಡು ದಿನ ಮುನ್ನವೇ ಜನ ಕಿಕ್ಕಿರಿದು ತುಂಬಿದ್ರೆ, ಮಲ್ಲೇಶ್ವರಂ ಮಾರುಕಟ್ಟೆ ದೀಪಾಲಂಕಾರಗಳಿಂದ ಸಿಂಗಾರಗೊಂಡು ಗ್ರಾಹಕರನ್ನು ಆಹ್ವಾನಿಸುತ್ತಿದೆ.
ಸೋಮವಾರದ ದಿನ ಆಯುಧ ಪೂಜೆ, ಮಂಗಳವಾರ ವಿಜಯದಶಮಿಯಾದ್ದರಿಂದ ಎರಡು ದಿನ ಮುನ್ನವೇ ವ್ಯಾಪಾರ ಬಿರುಸಾಗಿದೆ. ಸರ್ಕಾರಿ ಕಚೇರಿಗಳಲ್ಲಿ, ಸಾಲು ಸಾಲು ರಜೆಯ ಕಾರಣ ಎರಡು ದಿನ ಮುನ್ನವೇ ಆಯುಧ ಪೂಜೆ, ಕಚೇರಿ ಪೂಜೆ ನೆರವೇರಿಸಲಾಗಿದೆ. ಸ್ಥಳಕ್ಕೊಂದರಂತೆ ಬೂದುಗುಂಬಳಕಾಯಿ, ಬಾಳೆ ಕಂಬದ ಬೆಲೆಯಲ್ಲೂ ಹೆಚ್ಚು ಕಡಿಮೆ ಇದೆ. ಕೆ.ಆರ್ ಮಾರುಕಟ್ಟೆಯಲ್ಲಿ ಒಂದು ಮಾರು ಸೇವಂತಿಗೆ ಹೂವಿಗೆ 60-80 ರೂಪಾಯಿಗೆ ಮಾರಾಟವಾದ್ರೆ, ಮಲ್ಲೇಶ್ವರಂ ಮಾರುಕಟ್ಟೆಯಲ್ಲಿ 50 ರಿಂದ 70 ರೂಪಾಯಿಗೆ ಮಾರಾಟವಾಯಿತು‌. ಇನ್ನು ಸೋಮವಾರ ಆಯುಧ ಪೂಜೆಯ ದಿನ ಹೆಚ್ಚಿನ ಜನರು, ಕಚೇರಿ ಪೂಜೆ, ಅಂಗಡಿ ಪೂಜೆಗಳನ್ನ ನಡೆಸುವ ಹಿನ್ನಲೆ ಬೂದುಗುಂಬಳಕಾಯಿ, ಬಾಳೆಕಂಬ ಹೆಚ್ಚಾಗಿ ಮಾರಾಟಕ್ಕೆ ಇಡಲಾಗಿದೆ‌.
ಕೆ.ಆರ್ ಮಾರುಕಟ್ಟೆಯಲ್ಲಿ ಬೂದುಗುಂಬಳ 100 ರಿಂದ 250 ರ ವೆರೆಗೂ ಗಾತ್ರ ಲೆಕ್ಕದಲ್ಲಿ ಬಿಕರಿಯಾದ್ರೆ, ಮಲ್ಲೇಶ್ವರಂ ಬೀದಿಗಳಲ್ಲಿ ಕೆ.ಜಿಗೆ 60 ರಂತೆ ಮಾರಾಟವಾಯಿತು. ಬಾಳೆಕಂಬ ಜೋಡಿ 40 ರೂನಂತೆ ಮಾರಾಟವಾಯಿತು. ನಾಳೆ ಹೆಚ್ಚಿನ ಗ್ರಾಹಕರು ಬರುವ ನಿರೀಕ್ಷೆಯಿದ್ದು, ವ್ಯಾಪಾರ ಉತ್ತಮವಾಗಬಹುದು ಎಂಬ ನಿರೀಕ್ಷೆಯಲ್ಲಿದ್ದೇವೆ ಎಂದು ಹೂವಿನ ವ್ಯಾಪಾರಿಯೊನ್ಬರು ತಿಳಿಸಿದರು.
ಹೂವಿನ ದರಗಳಲ್ಲಿ ಕೊಂಚ ಏರಿಕೆಯಾಗಿದ್ದು, ಗ್ರಾಹಕರ ಕೈ ಬಿಸಿಮಾಡಿದೆ. ಇನ್ನು ಈರುಳ್ಳಿ ದರದಲ್ಲಿ ಕಡಿಮೆಯಾಗಿದ್ದು, ಗ್ರಾಹಕರು ನಿಟ್ಟುಸಿರು ಬಿಡುವಂತೆ ಮಾಡಿದೆ. ಪ್ರತೀ ಕೆ.ಜಿ ಈರುಳ್ಳಿಯನ್ನು, 30-40 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ.

ಸೌಮ್ಯಶ್ರೀ
Kn_bng_03_market_news_7202707
Body:.Conclusion:..
ETV Bharat Logo

Copyright © 2025 Ushodaya Enterprises Pvt. Ltd., All Rights Reserved.