ETV Bharat / city

Siddaramaiah: 'ಮೋದಿ ಸರ್ಕಾರಕ್ಕೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇದ್ದರೆ ಕೃಷಿ ಕಾಯ್ದೆಗಳನ್ನು ಹಿಂಪಡೆಯಲಿ' - ರೈತರ ಬೇಡಿಕೆ ಈಡೇರಿಸುವಂತೆ ಸಿದ್ದರಾಮಯ್ಯ ಆಗ್ರಹ

ದೇಶದ ಆರ್ಥಿಕ ಭದ್ರತೆಯನ್ನು ನಾಶ ಮಾಡುವ ಮತ್ತು ರೈತರು, ಕಾರ್ಮಿಕರ ಪಾಲಿಗೆ ಮಾರಣಾಂತಿಕವಾಗುವ ಕಾನೂನುಗಳನ್ನು ಸುಗ್ರೀವಾಜ್ಞೆ ಮೂಲಕ ಮೋದಿಯವರ ಸರ್ಕಾರ ಜಾರಿಗೆ ತಂದು ಒಂದು ವರ್ಷವಾಗುತ್ತಿದೆ. ಆ ಜನವಿರೋಧಿ ಕಾಯ್ದೆಗಳನ್ನು ವಾಪಸ್ ಪಡೆಯಿರಿ ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಸಿದ್ದರಾಮಯ್ಯ
ಸಿದ್ದರಾಮಯ್ಯ
author img

By

Published : May 27, 2021, 12:43 PM IST

ಬೆಂಗಳೂರು: ಕೇಂದ್ರ ಸರ್ಕಾರದ ವಿರುದ್ಧ ರೈತರು ನಡೆಸುತ್ತಿರುವ ಹೋರಾಟಕ್ಕೆ ಆರು ತಿಂಗಳಾಗಿದ್ದು, ಬೇಡಿಕೆಗಳನ್ನು ಪ್ರಜಾತಾಂತ್ರಿಕವಾಗಿ ಬಗೆಹರಿಸಿ, ಜನವಿರೋಧಿ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಿರಿ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ಈ ಕುರಿತು ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ದೇಶದ ಆರ್ಥಿಕ ಭದ್ರತೆಯನ್ನು ನಾಶ ಮಾಡುವ ಮತ್ತು ರೈತರು, ಕಾರ್ಮಿಕರ ಪಾಲಿಗೆ ಮಾರಣಾಂತಿಕವಾಗುವ ಕಾನೂನುಗಳನ್ನು ಸುಗ್ರೀವಾಜ್ಞೆ ಮೂಲಕ ಮೋದಿಯವರ ಸರ್ಕಾರ ಜಾರಿಗೆ ತಂದು ಒಂದು ವರ್ಷವಾಗುತ್ತಿದೆ. ಪ್ರತಿಭಟನೆಯ ಸ್ಥಳದಲ್ಲಿ ಸುಮಾರು 340 ಕ್ಕೂ ಹೆಚ್ಚು ರೈತರು ಹುತಾತ್ಮರಾಗಿದ್ದಾರೆ. ಇವರನ್ನು ಮೋದಿಯವರ ಸರ್ಕಾರವೇ ಕೊಂದಿದೆ ಎಂದು ಜನರು ಭಾವಿಸುತ್ತಿದ್ದಾರೆ. ಜಗತ್ತಿನ ಇತಿಹಾಸದಲ್ಲಿ ಯಾವುದೇ ದೇಶದ ನಾಗರಿಕ ಸರ್ಕಾರವು ಜನರ ಬೃಹತ್ ಚಳವಳಿಯನ್ನು ಈ ಮಟ್ಟದಲ್ಲಿ ನಿರ್ಲಕ್ಷಿಸಿದ ಇತಿಹಾಸವಿಲ್ಲ ಎಂದಿದ್ದಾರೆ.

ನಮ್ಮ ದೇಶದಲ್ಲಿ ಆಡಳಿತ ನಡೆಸುತ್ತಿರುವ ಮೋದಿಯವರ ಸರ್ಕಾರ ಜನರ/ ರೈತರ ಹೋರಾಟವನ್ನು ತೀವ್ರವಾಗಿ ನಿರ್ಲಕ್ಷಿಸಿತ್ತು, ದಮನಿಸಲು ಪ್ರಯತ್ನಿಸಿತು. ಅತ್ಯಂತ ಅಮಾನುಷವಾಗಿ ವರ್ತಿಸಿತು. ದೇಶದ ಶೇ. 80 ರಷ್ಟು ಜನರು ರೈತಾಪಿ ಕುಟುಂಬಗಳೊಂದಿಗೆ ನೇರವಾಗಿ ಸಂಬಂಧವಿರುವವರು. ಅಷ್ಟು ಬೃಹತ್ ಜನ ಸಮುದಾಯದ ಹಕ್ಕೊತ್ತಾಯಗಳಿಗೆ ಮೋದಿಯವರ ಸರ್ಕಾರ ಕುರುಡಾಗಿ, ಕಿವುಡಾಗಿ ನಡೆದುಕೊಳ್ಳುತ್ತಿದೆ ಎಂದರು.

ಕಳೆದ ವರ್ಷ ಬೇಳೆ ಕಾಳುಗಳು, ಎಣ್ಣೆ ಬೀಜಗಳ ಉತ್ಪಾದನೆ ಶೇ.16 ರಷ್ಟು ಹೆಚ್ಚಾಗಿತ್ತು. ದೇಶದ ಎಲ್ಲಾ ರಂಗಗಳು ವಿಫಲವಾಗಿದ್ದಾಗ ಕೃಷಿಯು ರಾಜ್ಯದಲ್ಲಿ ಶೇ 6.4 ರಷ್ಟು, ದೇಶದಲ್ಲಿ 3.5 ರಷ್ಟು ಪ್ರಗತಿಯಾಗಿದೆಯೆಂದು ಸರ್ಕಾರಗಳೇ ತಮ್ಮ ವರದಿಗಳಲ್ಲಿ ಹೇಳಿಕೊಂಡಿವೆ. ಹಾಗಿದ್ದರೆ ತೊಗರಿ, ಹೆಸರು, ಅವರೆ, ಉದ್ದು, ಅಲಸಂದೆ, ಸೋಯಾ, ಕಡಲೆ ಮುಂತಾದ ಕಾಳುಗಳನ್ನು ಹಾಗೂ ಸೂರ್ಯಕಾಂತಿ, ಕಡಲೆ ಕಾಯಿ ಮುಂತಾದ ಎಣ್ಣೆ ಬೀಜಗಳನ್ನು ಉತ್ಪಾದನೆ ಮಾಡುತ್ತಿರುವ ರೈತರಿಗೆ ಒಳ್ಳೆ ಬೆಲೆ ಸಿಗಲಿಲ್ಲ. ಆದರೆ ಮಾರುಕಟ್ಟೆಯಲ್ಲಿ ಬೇಳೆ ಕಾಳುಗಳ ಬೆಲೆ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 75 ರಷ್ಟು ಹೆಚ್ಚಾಗಿದೆ. ಅಡುಗೆ ಎಣ್ಣೆಯ ಬೆಲೆ ಶೇ.120 ಪಟ್ಟು ಹೆಚ್ಚಾಗಿದೆ. ಇವುಗಳಿಗೆ ಸಂಬಂಧಿಸಿದಂತೆ ಹಣದುಬ್ಬರದ ಪ್ರಮಾಣ ಶೇ. 16 ಕ್ಕೂ ಹೆಚ್ಚಾಗಿದೆ. ಕೊರೊನಾ ಕಾರಣದಿಂದ ಜನರ ಕೈಯಲ್ಲಿ ಹಣವಿಲ್ಲದೆ ಅವರ ಕೊಂಡುಕೊಳ್ಳುವ ಶಕ್ತಿಯೂ ಕಡಿಮೆಯಾಗಿದೆ. ಆದರೆ ಬೆಲೆಗಳು ಮಾತ್ರ ತೀವ್ರವಾಗಿ ಏರಿಕೆಯಗುತ್ತಿವೆ. ಹಾಗಿದ್ದರೆ ರೈತರು ಬೆಳೆದದ್ದೆಲ್ಲ ಎಲ್ಲಿ ಹೋಯಿತು? ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಯಾರೋ ಒಬ್ಬರು ಎಲ್ಲಿಗೋ ಹೋಗಿ ಬಂದ್ರು ಅಂದ್ರೆ ಅವರಿಗೆ ಉತ್ತರ ಕೊಟ್ಟು ಕಳಿಸಿದ್ದಾರಲ್ಲ: ಸಿಎಂ ಬಿಎಸ್​ವೈ

ಬೇಳೆ ಕಾಳುಗಳು ಮತ್ತು ಎಣ್ಣೆ ಕಾಳುಗಳ ಪ್ರಮುಖ ವ್ಯಾಪಾರಿ ಅದಾನಿ ಮತ್ತು ಅದಾನಿ ವಿಲ್ಮಾರ್ ಕಂಪೆನಿ. ರಫ್ತು ಮತ್ತು ಆಮದನ್ನು ನಿಯಂತ್ರಿಸುತ್ತಿರುವುದು ಇದೇ ಕಂಪೆನಿ. ಕೇಂದ್ರ ಸರ್ಕಾರ ಬಂದರುಗಳನ್ನು ವಿಮಾನ ನಿಲ್ದಾಣಗಳನ್ನು ಅದಾನಿಗೆ ಬಿಟ್ಟುಕೊಟ್ಟಿದೆ. ಪರಿಸ್ಥಿತಿ ಹೀಗೆ ಇದ್ದರೆ ದೇಶ ಹೇಗೆ ಉದ್ಧಾರವಾಗಲು ಸಾಧ್ಯ? ಪರಿಸ್ಥಿತಿ ಹೀಗಾಗಿರುವುದರಿಂದಲೇ ಅಂಬಾನಿ ಮತ್ತು ಅದಾನಿಗಳ ಸಂಪತ್ತು ಹಿಮಾಲಯದಂತೆ ಬೆಳೆಯುತ್ತಿದೆ. 18 ವರ್ಷಗಳ ಹಿಂದೆ ಕೆಲವೇ ಕೋಟಿಗಳ ಆಸ್ತಿ ಇದ್ದ ಅದಾನಿ ಈಗ ಏಷ್ಯಾದ ಎರಡನೇ ಅತಿದೊಡ್ಡ ಶ್ರೀಮಂತ. ಅಂಬಾನಿ ಮೊದಲನೇ ಶ್ರೀಮಂತ. ಇವರ ಸಂಪತ್ತು ಒಂದೇ ಸಮನೆ ಬೆಳೆಯುತ್ತಿದೆ. ಆದ್ದರಿಂದಲೇ ನಾನು ಈ ಹಿಂದೆ ಬರೆದ ಪತ್ರದಲ್ಲಿ 'ರೈತರು ನಡೆಸುತ್ತಿರುವ ಹೋರಾಟ ತಮಗಾಗಿ ಮಾತ್ರ ನಡೆಸುತ್ತಿರುವುದಲ್ಲ. ರೈತರ ಉತ್ಪನ್ನಗಳನ್ನು ಕೊಂಡುಕೊಳ್ಳುತ್ತಿರುವ ಗ್ರಾಹಕರ ಪರವಾಗಿಯೂ ನಡೆಸುತ್ತಿರುವ ಹೋರಾಟ ಆಗಿದೆ' ಎಂದು ಹೇಳಿದ್ದೆ ಎಂದಿದ್ದಾರೆ. ಇದು ದೇಶ ಉಳಿಸುವ ಹೋರಾಟವು ಆಗಿದೆ.

1.ಮೋದಿಯವರ ಸರ್ಕಾರಕ್ಕೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇದ್ದರೆ, ತಾನು ಸರ್ವಾಧಿಕಾರಿಯಲ್ಲ ಎಂಬ ವಿವೇಕವಂತಿಕೆ ಇದ್ದರೆ ಕೂಡಲೇ ರೈತರೊಂದಿಗೆ ಶಾಂತಿಯುತವಾಗಿ ಚರ್ಚಿಸಿ ಹೋರಾಟವನ್ನು ಹಿಂಪಡೆಯುವಂತೆ ಮಾಡಬೇಕು. ರೈತರ, ಕಾರ್ಮಿಕ ಎಲ್ಲ ಬೇಡಿಕೆಗಳನ್ನು ಈಡೇರಿಸಬೇಕು.

2. ಕೂಡಲೇ ಜನ ವಿರೋಧಿಯಾದ ಅದಾನಿ, ಅಂಬಾನಿ ಮತ್ತು ಕಾರ್ಪೊರೇಟ್ ಪರವಾದ ಕಾನೂನುಗಳನ್ನು ಹಿಂಪಡೆಯಬೇಕು.

3. ಪ್ರತಿಭಟನೆಯ ಸಂದರ್ಭದಲ್ಲಿ ಮರಣ ಹೊಂದಿದ ಎಲ್ಲ ರೈತರನ್ನು ಹುತಾತ್ಮರೆಂದು ಘೋಷಿಸಿ ಅವರ ಕುಟುಂಬಗಳಿಗೆ ಪರಿಹಾರ ನೀಡಬೇಕು.

4. ರೈತರು ಬೆಳೆಯುವ ಉತ್ಪನ್ನಗಳಿಗೆ ನ್ಯಾಯಯುತ ಬೆಲೆಯನ್ನು ನೀಡಬೇಕು ಮತ್ತು ಗ್ರಾಹಕರಿಗೂ ನ್ಯಾಯಯುತವಾದ ಬೆಲೆಗಳಲ್ಲಿ ಅಕ್ಕಿ, ಬೇಳೆ, ಅಡುಗೆ ಎಣ್ಣೆ ಸಿಗುವಂತೆ ಮಾಡಬೇಕು.

5. ಅದಾನಿ ಮುಂತಾದವರು ಅಕ್ರಮವಾಗಿ ಸಂಗ್ರಹಿಸಿರುವ ಎಲ್ಲ ಉತ್ಪನ್ನಗಳನ್ನು ವಶಪಡಿಸಿಕೊಂಡು ಮಾರುಕಟ್ಟೆಗೆ ತಂದು ಹಣದುಬ್ಬರವನ್ನು ನಿಯಂತ್ರಿಸಬೇಕು. ನ್ಯಾಯಯುತ ಬೆಲೆಗಳಿಗೆ ಮಾರುವಂತೆ ಮಾಡಬೇಕು. ಕೂಡಲೇ ವಿದೇಶದಿಂದ ಆಮದು ಮಾಡಿಕೊಳ್ಳುವುದನ್ನು ನಿಷೇಧಿಸಬೇಕು.

6. ರೈತರು ಬೆಳೆದ ಬೆಳೆಗಳಿಗೆ ಬೆಲೆ ಖಾತ್ರಿ ಕಾಯಿದೆಯನ್ನು, ಗ್ರಾಹಕರಿಗೆ ನ್ಯಾಯಯುತ ಬೆಲೆಗಳ ಖಾತ್ರಿಯ ಕಾಯಿದೆಯನ್ನು ಜಾರಿಗೊಳಿಸಬೇಕು. ಇದನ್ನು ನಿಭಾಯಿಸಲು ಸರ್ವಪಕ್ಷಗಳ, ತಜ್ಞರ, ರೈತ ಮುಖಂಡರ, ಗ್ರಾಹಕ ಪ್ರತಿನಿಧಿಗಳ ಶಾಶ್ವತ ಸಮಿತಿಯನ್ನು ರಚಿಸಬೇಕು.

7. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಲಾಕ್​ಡೌನ್ ಅವಧಿಯಲ್ಲಿ ಮತ್ತು ಆ ನಂತರ ಜಾರಿಗೆ ತಂದಿರುವ, ತಿದ್ದುಪಡಿ ಮಾಡಿರುವ ಎಲ್ಲ ಕಾಯ್ದೆಗಳನ್ನು ರದ್ದುಪಡಿಸಬೇಕು.ಈ ಮೇಲಿನ ಏಳು ಬೇಡಿಕೆಯನ್ನು ಸಹ ಈಡೇರಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಕೋವಿಡ್ ವಾರಿಯರ್​ ರಸ್ತೆಯಲ್ಲಿ ಬಿದ್ದು ಒದ್ದಾಡಿದರೂ ತಿರುಗಿ ನೋಡದ ಆರೋಪ: ಹೀಗಿದೆ ತರೀಕೆರೆ ಶಾಸಕರ ಸ್ಪಷ್ಟನೆ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.