ETV Bharat / city

ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಗೆ ಬಿಜೆಪಿ ಹೈಕಮಾಂಡ್ ನಿಂದ ತಂಡ ರಚನೆ : ಸಿದ್ದರಾಮಯ್ಯ ಲೇವಡಿ

ಮುಂದಿನ ವಿಧಾನಸಭೆ ಚುನಾವಣೆಗೆ ಸೂಕ್ತ ಅಭ್ಯರ್ಥಿಗಳ ಆಯ್ಕೆಗೆ ಬಿಜೆಪಿ ಹೈಕಮಾಂಡ್ ಮೂರು ತಂಡಗಳನ್ನು ರಚಿಸಿರುವುದಕ್ಕೆ ವಿಪಕ್ಷನಾಯಕ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಇವರು, ಬಿಜೆಪಿಗೆ ನುಡಿದಂತೆ ನಡೆದು ಅಭ್ಯಾಸವಿರಬೇಕಲ್ಲವೇ ಎಂದು ಹೇಳಿದ್ದಾರೆ.

Siddaramaiah tweet against BJP
ವಿಧಾನಸಭೆ ಚುನಾವಣೆಗೆ ಅಭ್ಯರ್ಥಿ ಆಯ್ಕೆಗೆ ಬಿಜೆಪಿ ಹೈಕಮಾಂಡ್ ನಿಂದ ತಂಡ ರಚನೆಗೆ ಸಿದ್ದರಾಮಯ್ಯ ಲೇವಡಿ
author img

By

Published : Apr 10, 2022, 6:50 AM IST

ಬೆಂಗಳೂರು: ರಾಜ್ಯದಲ್ಲಿ 2023ರಲ್ಲಿ ನಡೆಯುವ ವಿಧಾನಸಭೆ ಚುನಾವಣೆ ಅಭ್ಯರ್ಥಿ ಆಯ್ಕೆಗೆ ಬಿಜೆಪಿ ಹೈಕಮಾಂಡ್ ಮೂರು ತಂಡಗಳನ್ನು ರಚಿಸಿರುವುದಕ್ಕೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ. ಈ ಬಗ್ಗೆ ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ಅವರು, ರಾಜ್ಯದಲ್ಲಿ ಮುಂದಿನ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಬಿಜೆಪಿ ಹೈಕಮಾಂಡ್ ನಿಗದಿಪಡಿಸಿರುವ ಮಾನದಂಡಗಳನ್ನು ಗಮನಿಸಿದರೆ ಬಿಜೆಪಿಗೆ ಅಭ್ಯರ್ಥಿಗಳ ತತ್ವಾರ ಉಂಟಾಗುವ ಗಂಭೀರ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಇದೆ. ಬಿಜೆಪಿಗೆ ನುಡಿದಂತೆ ನಡೆದು ಅಭ್ಯಾಸವಿರಬೇಕಲ್ಲ? ಎಂದು ಟೀಕಿಸಿದ್ದಾರೆ.

ಟಿಕೆಟ್ ಪಡೆದುಕೊಳ್ಳಲು ಬಿಜೆಪಿ ಹೈಕಮಾಂಡ್ ನಿಗದಿಪಡಿಲು ಯೋಚಿಸುತ್ತಿರುವ ಮಾನದಂಡಗಳಾದ ಕಾರ್ಯವೈಖರಿ, ಜನರ ಸಮಸ್ಯೆಗೆ ಸ್ಪಂದಿಸುವ ಗುಣ ಮತ್ತು ಜನಪ್ರಿಯತೆಯ ಪರೀಕ್ಷೆಯಲ್ಲಿ ರಾಜ್ಯ ಬಿಜೆಪಿ ಸೇರಿದ ಯಾವೊಬ್ಬ ಹಾಲಿ ಶಾಸಕನಾದರೂ ಪಾಸಾಗಲು ಸಾಧ್ಯವೇ? ಎಂದು ಪ್ರಶ್ನಿಸಿದ್ದಾರೆ. ಕಾರ್ಯನಿರ್ವಹಣೆ, ಸುಧಾರಣೆ, ಬದಲಾವಣೆಗಳ ಮಾನದಂಡದ ಮೂಲಕ ಕೇಂದ್ರ ಬಿಜೆಪಿ ಸಚಿವರ ಟಿಕೆಟ್ ಪಡೆಯುವ ಅರ್ಹತೆಯನ್ನು ತೀರ್ಮಾನಿಸಲಿದೆಯಂತೆ. ಈ ಪರೀಕ್ಷೆಯನ್ನು ಕಟ್ಟುನಿಟ್ಟಾಗಿ ನಡೆಸಿದರೆ ಸಚಿವರ ಜೊತೆಯಲ್ಲಿ ಮುಖ್ಯಮಂತ್ರಿಗಳು ಟಿಕೆಟ್ ಕಳೆದುಕೊಳ್ಳುವ ಅಪಾಯ ಇದೆ ಎಂದಿದ್ದಾರೆ.

40%ಗಿಂತ ಹೆಚ್ಚು ಕಮಿಷನ್ ಪಡೆದವರು, ಹಿಜಾಬ್, ಹಲಾಲ್, ಮೊದಲಾದ ವಿವಾದಗಳಿಂದ ಸಮಾಜದಲ್ಲಿ ಹೆಚ್ಚು ವೈಷಮ್ಯವನ್ನು ಹುಟ್ಟಿಸಿದವರು ಮತ್ತು ಅತೀ ಹೆಚ್ಚು ಸುಳ್ಳು ಹೇಳಿದವರು ಯಾರು ಎಂಬ ಮಾನದಂಡಗಳನ್ನು ನಿಗದಿಪಡಿಸಿದರೆ ಬಿಜೆಪಿಯ ಹಾಲಿ ಶಾಸಕರಿಗೆಲ್ಲರಿಗೂ ಟಿಕೆಟ್ ಖಚಿತ ಎಂದು ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.

ಓದಿ : ಹೆಣ್ಣುಮಕ್ಕಳು ಶೌಚಾಲಯ ಬಳಸದೇ ಬಯಲು ಬಹಿರ್ದೆಸೆಗೆ ಹೋದರೆ ಏನೂ ಮಾಡೋಕೆ ಆಗಲ್ಲ: ಸಚಿವ ಈಶ್ವರಪ್ಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.