ETV Bharat / city

'ಉ-ಕ' ನೆರೆ ಪೀಡಿತ ಪ್ರದೇಶಗಳಿಗೆ ಅಗಸ್ಟ್‌ 27ರಿಂದ ಮಾಜಿ ಸಿಎಂ ಸಿದ್ದು 2ನೇ ಹಂತದ ಪ್ರವಾಸ..

author img

By

Published : Aug 25, 2019, 12:50 PM IST

ಕಣ್ಣಿಗೆ ಸೋಂಕು ತಗುಲಿದ ಕಾರಣ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅದೇ ಕಾರಣಕ್ಕೆ ಆರಂಭದಲ್ಲಿ ಪ್ರವಾಹ ಪೀಡಿತ ಉತ್ತರಕರ್ನಾಟಕ ಭಾಗದ ಪ್ರದೇಶಗಳಿಗೆ ಭೇಟಿ ಕೊಡಲಾಗಿರಲಿಲ್ಲ. ಒಂದು ಬಾರಿ ತಮ್ಮ ತವರು ಕ್ಷೇತ್ರ ಬಾದಾಮಿಗೆ ಈಗಾಗಲೇ ಪರಿಶೀಲನೆ ನಡೆಸಿ ಸಂತ್ರಸ್ತರ ಆತ್ಮಬಲ ಹೆಚ್ಚಿಸಿದ್ದಾರೆ. ಅಗಸ್ಟ್ 27ರಿಂದ ಮತ್ತೆ 2ನೇ ಹಂತದಲ್ಲಿ ನೆರೆ ಪ್ರದೇಶಗಳಿಗೆ ಪ್ರವಾಸ ಕೈಗೊಳ್ತಿದ್ದಾರೆ.

ಸಿದ್ದರಾಮಯ್ಯ

ಬೆಂಗಳೂರು: ಕಣ್ಣಿಗೆ ಸೋಂಕು ತಗುಲಿದ ಕಾರಣ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಆರಂಭದಲ್ಲಿ ಉತ್ತರಕರ್ನಾಟಕದ ಪ್ರವಾಹ ಪೀಡಿತ ಪ್ರದೇಶಗಳಿಗೆ ಪ್ರವಾಸ ಕೈಗೊಳ್ಳೋದಕ್ಕೆ ಸಾಧ್ಯವಾಗಿರಲಿಲ್ಲ. ಮೊನ್ನೆ ಮೊದಲ ಹಂತದಲ್ಲಿ ಬಾಗಲಕೋಟೆ ಜಿಲ್ಲೆ ಮತ್ತು ತಮ್ಮ ತವರು ಕ್ಷೇತ್ರ ಬಾದಾಮಿಯ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ಕೊಟ್ಟಿದ್ದರು. ಸಂತ್ರಸ್ತರ ಆತ್ಮಸ್ಥೈರ್ಯ ಹೆಚ್ಚಿಸುವ ಕೆಲಸ ಮಾಡಿದ್ದರು. ಈಗ ಅಗಸ್ಟ್ 27ರಿಂದ ಉತ್ತರಕರ್ನಾಟಕದಲ್ಲಿ 2ನೇ ಹಂತದ ಪ್ರವಾಸ ಕೈಗೊಳ್ಳಲಿದ್ದಾರೆ.

Siddaramaiah
ಅಗಸ್ಟ್ 27 ರಿಂದ 2ನೇ ಹಂತದ ಪ್ರವಾಸ ಕೈಗೊಳ್ತಾರೆ ಮಾಜಿ ಸಿಎಂ ಸಿದ್ದರಾಮಯ್ಯ..

ಅಗಸ್ಟ್‌19ರಿಂದ 21ರವರೆಗೆ ಬಾದಾಮಿ ವಿಧಾನಸಭೆ ಕ್ಷೇತ್ರದ ಹಲವೆಡೆ ಪ್ರವಾಸ ಕೈಗೊಂಡು ಮಳೆ ಹಾಗೂ ನೆರೆಯಿಂದ ತೊಂದರೆಗೊಳಗಾಗಿದ್ದ ಸಂತ್ರಸ್ತರನ್ನು ಭೇಟಿಯಾಗಿ ಅವರ ಅಹವಾಲು ಸ್ವೀಕರಿಸಿದ್ದರು. ಇದೀಗ ಅದರ ಮುಂದುವರಿದ ಭಾಗವಾಗಿ ಮತ್ತೆ ಮೂರು ದಿನ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲು ಸಜ್ಜಾಗಿದ್ದಾರೆ.

ಈ ಬಾರಿ ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳ ಪ್ರವಾಹ ಪೀಡಿತ ಪ್ರದೇಶಗಳ ಪರಿಶೀಲನೆ ಮಾಡಲಿದ್ದಾರೆ. ಮುಧೋಳ, ಮಳಲಿ, ತೇರದಾಳ, ನಂದಗಾವ, ಡವಳೇಶ್ವರ, ಅಸಕಿ, ಹಿಪ್ಪರಗಿ, ಜಮಖಂಡಿ, ತುಬಚಿ, ಶೂರಪಾಲಿ, ಟಕಳಕಿ, ಅಥಣಿ, ಹಲ್ಯಾಳ, ಸತ್ತಿ, ಕಾಗವಾಡ, ಕಿತ್ತೂರು, ಶಿರಗುಪ್ಪಿ, ಚಿಕ್ಕೋಡಿ-ಸದಲಗಾ, ಕಲ್ಲೋಳ, ಸವಲಗಾ, ನಿಪ್ಪಾಣಿ, ಗೋಕಾಕ್, ಲೊಳಸೂರ, ಅಡಬಟ್ಟಿ, ರಾಮದುರ್ಗ ಮತ್ತಿತರ ಭಾಗಗಳಿಗೆ ಭೇಟಿ ಕೊಡಲಿದ್ದು, ಜನರ ಸಮಸ್ಯೆಗಳನ್ನು ಸ್ವೀಕರಿಸಲಿದ್ದಾರೆ.

ಇಂದು ಮಧ್ಯಾಹ್ನ ವಿಶೇಷ ವಿಮಾನದ ಮೂಲಕ ಹೆಚ್‍ಎಎಲ್‍ನಿಂದ ಮೈಸೂರಿಗೆ ಸಿದ್ದರಾಮಯ್ಯ ಪ್ರಯಾಣ ಬೆಳೆಸಲಿದ್ದಾರೆ. ಮಧ್ಯಾಹ್ನ 1 ಗಂಟೆಗೆ ಹೊರಟು 1.20 ಕ್ಕೆ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣ ತಲುಪುವ ಅವರು, ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಜೆ 6 ಕ್ಕೆ ಹೊರಟು 6.20 ಕ್ಕೆ ಹೆಚ್‍ಎಎಲ್‍ ವಿಮಾನ ನಿಲ್ದಾಣ ತಲುಪಲಿದ್ದಾರೆ.

Intro:newsBody:ಮತ್ತೆ ಪ್ರವಾಸಕ್ಕೆ ಸಿದ್ಧರಾದ ಸಿದ್ದರಾಮಯ್ಯ

ಬೆಂಗಳೂರು: ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಕಣ್ಣಿಗೆ ಏಟಾದ ಕಾರಣ ಪ್ರವಾಸ ಮೊಟಕುಗೊಳಿಸಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಆಗಸ್ಟ್ 27ರಿಂದ ಎರಡನೇ ಹಂತದ ಪ್ರವಾಸ ಕೈಗೊಳ್ಳಲಿದ್ದಾರೆ.
ಕಳೆದ ಆ.19ರಿಂದ 21 ರವರೆಗೆ ತಮ್ಮ ಬದಾಮಿ ವಿಧಾನಸಭೆ ಕ್ಷೇತ್ರದ ಹಲವೆಡೆ ಪ್ರವಾಸ ಕೈಗೊಂಡು ಮಳೆ ಹಾಗೂ ನೆರೆಯಿಂದ ಸಂತ್ರಸ್ತರಾದವರನ್ನು ಭೇಟಿಯಾಗಿ ಅಹವಾಲು ಸ್ವೀಕರಿಸಿದ್ದರು. ಇದೀಗ ಅದರ ಮುಂದುವರಿದ ಭಾಗವಾಗಿ ಮೂರು ದಿನ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ಸಿದ್ದರಾಮಯ್ಯ ಸಜ್ಜಾಗಿದ್ದಾರೆ.
ಈ ಸಾರಿ ಅವರು ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳ ಪ್ರವಾಹ ಪೀಡಿತ ಪ್ರದೇಶಗಳ ಪರಿಶೀಲನೆ ಮಾಡಲಿದ್ದಾರೆ. ಮುಧೋಳ, ಮಳಲಿ, ತೇರದಾಳ, ನಂದಗಾವ, ಡವಳೇಶ್ವರ, ಅಸಕಿ, ಹಿಪ್ಪರಗಿ, ಜಮಖಂಡಿ, ತುಬಜಿ, ಶೂರಪಾಲಿ, ಟಕಳಕಿ, ಅಥಣಿ, ಹಲ್ಯಾಳ, ಸತ್ತಿ, ಕಾಗವಾಡ, ಕಿತ್ತೂರು, ಶಿರಗುಪ್ಪಿ, ಚಿಕ್ಕೋಡಿ-ಸದಲಗಾ, ಕಲ್ಲೋಳ, ಸವಲಗಾ, ನಿಪ್ಪಾಣಿ, ಗೋಕಾಕ್, ಲೊಳಸೂರ, ಅಡಬಟ್ಟಿ, ರಾಮದುರ್ಗ ಮತ್ತಿತರ ಭಾಗಗಳಿಗೆ ಭೇಟಿ ಕೊಡಲಿದ್ದು, ಜನರ ಅಹವಾಲು ಸ್ವೀಕರಿಸಲಿದ್ದಾರೆ.
ಪರಿಸ್ಥಿತಿ ಪರಿಶೀಲನೆ
ಬೆಳಗಾವಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ಸಂದರ್ಭ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಪರಿಶೀಲನೆ ನಡೆಸಿ ನಂತರ ಇದರ ವಿಸ್ತ್ರತ ವರದಿ ಸಿದ್ಧಪಡಿಸಿ ಸರ್ಕಾರದ ಗಮನ ಸೆಳೆಯಲಿದ್ದಾರೆ.
ಇಂದು ಮೈಸೂರು ಪ್ರವಾಸ
ಇಂದು ಮಧ್ಯಾಹ್ನ ವಿಶೇಷ ವಿಮಾನದ ಮೂಲಕ ಎಚ್‍ಎಎಲ್‍ನಿಂದ ಮೈಸೂರಿಗೆ ಸಿದ್ದರಾಮಯ್ಯ ಪ್ರಯಾಣ ಬೆಳೆಸಲಿದ್ದಾರೆ.ಮಧ್ಯಾಹ್ನ 1 ಗಂಟೆಗೆ ಹೊರತು 1.20ಕ್ಕೆ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣ ತಲುಪುವ ಅವರು, ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಜೆ 6 ಕ್ಕೆ ಹೊರಟು 6.20ಕ್ಕೆ ಎಚ್‍ಎಎಲ್‍ ವಿಮಾನ ನಿಲ್ದಾಣ ತಲುಪಲಿದ್ದಾರೆ.

Conclusion:news
ETV Bharat Logo

Copyright © 2024 Ushodaya Enterprises Pvt. Ltd., All Rights Reserved.