ETV Bharat / city

ಸರ್ಕಾರಿ ಕಾಲೇಜು ಅತಿಥಿ ಉಪನ್ಯಾಸಕರ ಬೇಡಿಕೆ ಈಡೇರಿಸುವಂತೆ ಸರ್ಕಾರಕ್ಕೆ ಸಿದ್ದರಾಮಯ್ಯ ಪತ್ರ

ಸರ್ಕಾರಿ ಕಾಲೇಜು ಅತಿಥಿ ಉಪನ್ಯಾಸಕರ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮುಖ್ಯಮಂತ್ರಿ ಬೊಮ್ಮಾಯಿ ಹಾಗೂ ಉನ್ನತ ಶಿಕ್ಷಣ ಸಚಿವರಿಗೆ ಪತ್ರ ಬರೆದಿದ್ದಾರೆ..

Siddaramaiah letter to government to meet the demand of guest lecturers
ಸರ್ಕಾರಕ್ಕೆ ಸಿದ್ದರಾಮಯ್ಯ ಪತ್ರ
author img

By

Published : Jan 1, 2022, 7:51 PM IST

ಬೆಂಗಳೂರು : ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕೆಲಸ ಮಾಡುತ್ತಿರುವ ಅತಿಥಿ ಉಪನ್ಯಾಸಕರನ್ನು ಸರ್ಕಾರ ಶೋಷಿಸದೇ ಅವರ ಸರಳ ಬೇಡಿಕೆಗಳನ್ನು ಈಡೇರಿಸಿ, ಅವರುಗಳು ತರಗತಿಗಳನ್ನು ತೆಗೆದುಕೊಳ್ಳುವಂತೆ ಮಾಡಬೇಕೆಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಈ ಕುರಿತು ಮುಖ್ಯಮಂತ್ರಿಗಳು ಹಾಗೂ ಉನ್ನತ ಶಿಕ್ಷಣ ಸಚಿವರಿಗೆ ಪತ್ರ ಬರೆದಿರುವ ಸಿದ್ದರಾಮಯ್ಯ, ಅತಿಥಿ ಉಪನ್ಯಾಸಕರ ಜೊತೆ ಮಾನವೀಯತೆಯಿಂದ ವರ್ತಿಸುವಂತೆ ಒತ್ತಾಯಿಸಿದ್ದಾರೆ. ರಾಜ್ಯದ 440 ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿರುವ 14,183 ಉಪನ್ಯಾಸಕರು ಹಲವು ದಿನಗಳಿಂದ ತರಗತಿಗಳನ್ನು ಬಹಿಷ್ಕರಿಸಿ ಪ್ರತಿಭಟನೆ ಮಾಡುತ್ತಿದ್ದಾರೆ.

ಅವರು ಸರ್ಕಾರಕ್ಕೆ ಇಟ್ಟಿರುವ ಬೇಡಿಕೆಗಳು ದುಬಾರಿಯಾದುವೇನಲ್ಲ. ‘ತಾವು ಮಾಡುತ್ತಿರುವ ಸೇವೆಗೆ ಕನಿಷ್ಟ ಭದ್ರತೆ ನೀಡಿ, ವರ್ಷದ ಎಲ್ಲ ತಿಂಗಳುಗಳು ಸಂಬಳ ನೀಡಿ ಮತ್ತು ನೀಡುತ್ತಿರುವ ಸಂಬಳವನ್ನು ಘನತೆಯಿಂದ ಬದುಕುವುದಕ್ಕೆ ಬೇಕಾಗುವಷ್ಟನ್ನು ಹೆಚ್ಚಿಸಿ’ ಎಂಬುದಷ್ಟೇ ಅವರ ಬೇಡಿಕೆ ಎಂದಿದ್ದಾರೆ.

ಪುಡಿಗಾಸಿನಲ್ಲಿ ಇವರು ಬದುಕುವುದು ಹೇಗೆ?

ಸರ್ಕಾರ ಈಗ ನೀಡುತ್ತಿರುವುದಕ್ಕೆ ಗರಿಷ್ಟ ಇನ್ನೂರು ಕೋಟಿ ರೂಪಾಯಿಗಳನ್ನು ಹೆಚ್ಚಿಗೆ ನೀಡಿದರೆ ಈ ಸಮಸ್ಯೆ ಬಗೆ ಹರಿಯುತ್ತದೆ. ಆದರೆ, ಸರ್ಕಾರ ಅವರ ಬೇಡಿಕೆಗಳ ಕುರಿತು ಕಣ್ಣು, ಕಿವಿಗಳನ್ನು ಮುಚ್ಚಿ ಕೂತಿದೆ. ಸರ್ಕಾರದ ಈ ನಿರ್ಲಕ್ಷ್ಯ ಅಮಾನವೀಯವಾದದ್ದಾಗಿದೆ. ಕಳೆದ ಎರಡು ವರ್ಷಗಳಲ್ಲಿ ಪ್ರತಿ ವಸ್ತುಗಳ ಬೆಲೆಯೂ ದುಪ್ಪಟ್ಟಾಗಿದೆ. ಹಾಗಾಗಿ, ಸರ್ಕಾರ ನೀಡುತ್ತಿರುವ ಪುಡಿಗಾಸಿನಲ್ಲಿ ಇವರು ಬದುಕುವುದು ಹೇಗೆ? ಎಂದು ಪ್ರಶ್ನಿಸಿದ್ದಾರೆ.

ಈ ಉಪನ್ಯಾಸಕರುಗಳು ಎಂ.ಎ, ಎಂ.ಎಸ್ಸಿ, ಎಂ.ಕಾಂ, ಪಿಹೆಚ್​ಡಿ ಪದವಿ ಪಡೆದಿದ್ದಾರೆ. ಯುಜಿಸಿ ನಡೆಸುವ ಅರ್ಹತಾ ಪರೀಕ್ಷೆಗಳನ್ನು ಪಾಸು ಮಾಡಿದ್ದಾರೆ. ಇವರಿಗೆ ತಿಂಗಳಿಗೆ 11 ರಿಂದ 13 ಸಾವಿರ ರೂಪಾಯಿಗಳನ್ನು ಮಾತ್ರ ಗೌರವಧನವೆಂದು ನೀಡಲಾಗುತ್ತಿದೆ. ಅದೂ ಕೂಡ ವರ್ಷದಲ್ಲಿ ಕೇವಲ 8 ತಿಂಗಳಿಗೆ ಮಾತ್ರ ನೀಡಲಾಗುತ್ತಿದೆ ಎಂದು ವಿವರಿಸಿದ್ದಾರೆ.

ಅತಿಥಿ ಉಪನ್ಯಾಸಕರನ್ನು ನಿಂದಿಸುವುದು ಅಮಾನವೀಯ

ಈ ಸಂಬಳವು ಯುಜಿಸಿ ಸಂಬಳ ಪಡೆಯುತ್ತಿರುವ ಉಪನ್ಯಾಸಕರ ಸಂಬಳದ ಹತ್ತನೇ ಒಂದು ಮತ್ತು ಇಪ್ಪತ್ತನೇ ಒಂದು ಭಾಗವೂ ಅಲ್ಲ. ಈ ಅತಿಥಿ ಉಪನ್ಯಾಸಕರು ಕೂಡ ಯುಜಿಸಿ ಸಂಬಳ ಪಡೆಯುವ ಉಪನ್ಯಾಸಕರಷ್ಟೇ ಪರಿಣಾಮಕಾರಿಯಾಗಿ ಪಾಠ- ಪ್ರವಚನಗಳನ್ನು ಮಾಡುತ್ತಾರೆ. ಆದರೂ ಅತಿ ಕಡಿಮೆ ಗೌರವಧನ ಪಡೆಯುತ್ತಾರೆ. ಹಾಗಾಗಿಯೇ, ಇದನ್ನು ಕೆಲವರು ಶೋಷಣೆ ಎಂದು ಕರೆದಿದ್ದಾರೆ.

ತಮ್ಮನ್ನು ಸರ್ಕಾರ ಶೋಷಣೆ ಮಾಡುತ್ತಿದೆ ಎಂಬ ಅತಿಥಿ ಉಪನ್ಯಾಸಕರ ಮಾತಿಗೆ ಸಚಿವರೊಬ್ಬರು ಕೆರಳಿ ಪ್ರತಿಭಟನಾಕಾರರನ್ನು ನಿಂದಿಸಿದ್ದಾರೆಂದು ಪತ್ರಿಕೆಗಳು ವರದಿ ಮಾಡಿವೆ. ಇದು ಸರಿಯಾದ ಕ್ರಮವಲ್ಲ. ಸರ್ಕಾರದ ನಿಲುವು ಖಂಡನೀಯವಾದುದು.

ಎನ್‌ಇಪಿ ಜಾರಿಗೆ ತಂದ ಮೊದಲ ರಾಜ್ಯ, ಉನ್ನತ ಶಿಕ್ಷಣ ಪಡೆಯುವವರ ಸಂಖ್ಯೆಯನ್ನು ಹೆಚ್ಚಿಸುವುದಕ್ಕಾಗಿ ಸುಸ್ಥಿರ ಅಭಿವೃದ್ಧಿ ಗುರಿ ಹಾಕಿಕೊಂಡಿದ್ದೇವೆ ಎಂದೆಲ್ಲ ಹೇಳಿಕೊಂಡು ಕಳಪೆ ಯಂತ್ರೋಪಕರಣಗಳನ್ನು ಅಳವಡಿಸಲು ಸಾವಿರಾರು ಕೋಟಿ ಖರ್ಚು ಮಾಡುತ್ತಿರುವ ಸರ್ಕಾರ, ತಮ್ಮ ಕೆಲಸಕ್ಕೆ ನ್ಯಾಯ ಒದಗಿಸಿ ಎಂದು ಕೇಳುವ ಅತಿಥಿ ಉಪನ್ಯಾಸಕರನ್ನು ನಿಂದಿಸುವುದು, ಹಂಗಿಸುವುದು ಅಮಾನವೀಯ ನಡವಳಿಕೆ ಎಂದಿದ್ದಾರೆ.

ಮನುಷ್ಯರಿಂದ ಮಾತ್ರ ಸಾಮಾಜಿಕ ಶಿಕ್ಷಣ ಕೊಡಲು ಸಾಧ್ಯ

ಯಂತ್ರಗಳು ಮನುಷ್ಯರಿಗೆ ಸಾಮಾಜಿಕ ಶಿಕ್ಷಣವನ್ನು ಕಲಿಸಲಾರವು. ಮನುಷ್ಯತ್ವವನ್ನು ಹೇಳಿಕೊಡಲಾರವು. ಈ ಕೆಲಸವನ್ನು ಅನ್ನ ತಿನ್ನುವ ಮನುಷ್ಯರೇ ಮಾಡಬೇಕು. ಅತಿಥಿ ಉಪನ್ಯಾಸಕರು ತರಗತಿಗಳನ್ನು ತೆಗೆದುಕೊಳ್ಳದ ಕಾರಣದಿಂದ ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗದೇ ಕಾರಿಡಾರುಗಳಲ್ಲಿ ಓಡಾಡುತ್ತಿದ್ದಾರೆ.

ಇತ್ತೀಚೆಗೆ ಬೆಂಗಳೂರಿನ ಸರ್ಕಾರಿ ಕಾಲೇಜೊಂದರಲ್ಲಿ ವಿದ್ಯಾರ್ಥಿಗಳು ಹೊಡೆದಾಡಿಕೊಂಡು ವಿದ್ಯಾರ್ಥಿಯೊಬ್ಬ ಜೀವನ್ಮರಣದ ಸ್ಥಿತಿಯಲ್ಲಿ ಕೆ ಸಿ ಜನರಲ್ ಆಸ್ಪತ್ರೆಯ ಐಸಿಯುನಲ್ಲಿದ್ದಾನೆಂದು ವೈದ್ಯರೊಬ್ಬರು ಇಂದು ಹೇಳುತ್ತಿದ್ದರು. ಸರ್ಕಾರ ಕೂಡಲೇ ಗಮನ ಹರಿಸಿ ಆ ವಿದ್ಯಾರ್ಥಿಗೆ ಉತ್ತಮ ಚಿಕಿತ್ಸೆ ಕೊಡಿಸಿ ಗಾರೆ ಕೆಲಸ ಮಾಡುವ ಬಡ ಕೂಲಿಕಾರನ ಮಗನನ್ನು ಉಳಿಸಿಕೊಡಬೇಕೆಂದು ಒತ್ತಾಯಿಸುತ್ತೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಪೊಲೀಸ್ ದೌರ್ಜನ್ಯಕ್ಕೊಳಗಾದ ಕುಟುಂಬ ಭೇಟಿಯಾದ ಗೃಹ ಸಚಿವರು.. ಪ್ರಕರಣ ತನಿಖೆ ಹೊಣೆ ಸಿಒಡಿಗೆ

ಸಮರ್ಪಕ ಸಂಬಳವಿಲ್ಲದೇ ಕೋವಿಡ್ ಸಂದರ್ಭದಲ್ಲಿ ಅನೇಕ ಅತಿಥಿ ಉಪನ್ಯಾಸಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾಯಿಲೆಗಳಿಗೆ ಚಿಕಿತ್ಸೆ ಪಡೆದುಕೊಳ್ಳಲಾಗದೇ ಅಸುನೀಗಿದ್ದಾರೆ. ಹಾಗಾಗಿ, ಸರ್ಕಾರ ಇವರನ್ನು ಇನ್ನಷ್ಟು ಶೋಷಣೆ ಮಾಡದೇ ಅವರ ಸರಳ ಬೇಡಿಕೆಗಳನ್ನು ಈಡೇರಿಸಿ ಕೂಡಲೇ ಸಮಸ್ಯೆ ಬಗೆಹರಿಸಿ ಅವರುಗಳು ತರಗತಿಗಳನ್ನು ತೆಗೆದುಕೊಳ್ಳುವಂತೆ ಮಾಡಬೇಕೆಂದು ಆಗ್ರಹಿಸುತ್ತೇನೆ ಎಂದು ಅವರು ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.