ETV Bharat / city

ರಾಜ್ಯದಲ್ಲಿ ಅಧಿಕಾರದಲ್ಲಿರುವುದು ಕಮೀಷನ್ ಸರ್ಕಾರ: ಸಿದ್ದರಾಮಯ್ಯ - ಸೇವಾದಳ ಕಾರ್ಯಕರ್ತರಿಗೆ ಕೋವಿಡ್ ಲಸಿಕೆ

ವಿವಿಧ ಇಲಾಖೆಗಳಲ್ಲಿ ಎಲ್ಲೆಲ್ಲಿ ಟೆಂಡರ್ ಆಗುತ್ತೋ ಅಲ್ಲೆಲ್ಲ ಶೇ. 8-10ರಷ್ಟು ಕಮೀಷನ್ ಸಂಗ್ರಹ ಮಾಡ್ತಿದ್ದಾರೆ. ಅಪ್ಪರ್ ಭದ್ರಾ ಕೇಂದ್ರ ಸರ್ಕಾರದ ಯೋಜನೆಯಲ್ಲೂ ವಿಜಯೇಂದ್ರನೇ ಕಲೆಕ್ಟ್ ಮಾಡ್ತಿದಾರೋ ಇಲ್ಲ ಬೇರೆಯವರು ಕಮಿಷನ್ ಕಲೆಕ್ಟ್ ಮಾಡ್ತಿದ್ದಾರೋ ಗೊತ್ತಿಲ್ಲ. ಆದರೆ ಇದು ಶೇ.8-10 ಕಮಿಷನ್ ಸರ್ಕಾರ ಅನ್ನೋದು ಗೊತ್ತಿರುವ ವಿಚಾರವೇ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ರಾಜ್ಯ ಸರ್ಕಾರದ ವಿರುದ್ಧ ಆರೋಪ ಮಾಡಿದರು.

state-bjp-govt-is-commission-government
ಸಿದ್ದರಾಮಯ್ಯ
author img

By

Published : Jun 19, 2021, 3:07 PM IST

ಬೆಂಗಳೂರು: ಬಿಜೆಪಿಗರು ಎಲ್ಲೆಲ್ಲಿ ಟೆಂಡರ್ ಆಗುತ್ತೋ ಅಲ್ಲೆಲ್ಲಾ ಶೇ.8-10 ರಷ್ಟು ಕಮೀಷನ್ ಸಂಗ್ರಹ ಮಾಡ್ತಿದ್ದಾರೆ. ಇದು ಕಮಿಷನ್ ಸರ್ಕಾರ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ರಾಹುಲ್ ಗಾಂಧಿಯವರ ಜನ್ಮದಿನದ ಅಂಗವಾಗಿ ರೇಸ್ ಕೋರ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಇಂದು ಸೇವಾದಳ ಕಾರ್ಯಕರ್ತರಿಗೆ ಕೋವಿಡ್ ಲಸಿಕೆ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ಬಿಜೆಪಿ ಸರ್ಕಾರ ರೂರಲ್ ಡೆವಲಪ್ಮೆಂಟ್ ಹಾಗೂ ಲೋಕೋಪಯೋಗಿ ಇಲಾಖೆಯಲ್ಲಿ ಎಲ್ಲೆಲ್ಲಿ ಟೆಂಡರ್ ಆಗುತ್ತೋ ಅಲ್ಲೆಲ್ಲ ಶೇ. 8-10ರಷ್ಟು ಕಮೀಷನ್ ಸಂಗ್ರಹ ಮಾಡ್ತಿದೆ. ಅಪ್ಪರ್ ಭದ್ರಾ ಕೇಂದ್ರ ಸರ್ಕಾರದ ಯೋಜನೆಯಲ್ಲೂ ವಿಜಯೇಂದ್ರನೇ ಕಲೆಕ್ಟ್ ಮಾಡ್ತಿದಾರೋ ಇಲ್ಲ ಬೇರೆಯವರು ಕಮಿಷನ್ ಕಲೆಕ್ಟ್ ಮಾಡ್ತಿದ್ದಾರೋ ಗೊತ್ತಿಲ್ಲ. ಆದರೆ ಇದು ಶೇ.8-10 ಕಮಿಷನ್ ಸರ್ಕಾರ ಅನ್ನೋದು ಗೊತ್ತಿರುವ ವಿಚಾರವೇ ಎಂದು ವಾಗ್ದಾಳಿ ನಡೆಸಿದರು.

ಜಿಂದಾಲ್ ಕಿಕ್ ಬ್ಯಾಕ್​ನಲ್ಲಿ ಸಿದ್ದರಾಮಯ್ಯ ಹೆಸರಿದೆ ಎಂಬ ವಿಧಾನ ಪರಿಷತ್​ ಸದಸ್ಯ ಹೆಚ್​ ವಿಶ್ವನಾಥ್ ಆರೋಪ ಕುರಿತು ಮಾತನಾಡಿ, ನಾನು ಈ ಹಿಂದೆಯೇ ಇದನ್ನು ನಿರಾಕರಿಸಿದ್ದೇನೆ. ಯಾವುದೋ ಹಳೆಯ ಸುಳ್ಳು ಆರೋಪಗಳಿಗೆ ಉತ್ತರ ಕೊಡ್ತಾ ಕೂರ್ಲಾ?, ಜಿಂದಾಲ್ ವಿಷಯದಲ್ಲಿ ಸುಳ್ಳು ಆರೋಪವನ್ನು ತಳ್ಳಿ ಹಾಕಿದ್ದೇನೆ ಎಂದರು.

ಕಾರ್ಯಕ್ರಮದಲ್ಲಿ ಸ್ವತಃ ವೈದ್ಯರೂ ಆಗಿರುವ ವಿಧಾನಸಭೆಯ ಪ್ರತಿಪಕ್ಷದ ಮುಖ್ಯ ಸಚೇತಕ ಡಾ. ಅಜಯ್ ಸಿಂಗ್ ಅವರು ಕಾರ್ಯಕರ್ತರಿಗೆ ಲಸಿಕೆ ಹಾಕಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.