ETV Bharat / city

ಕಷ್ಟ ಕಾಲಕ್ಕೆ ಕೂಡಿಟ್ಟಿದ್ದ ಹಣ ಕೋವಿಡ್ ನಿಧಿಗೆ ಸಲ್ಲಿಕೆ: ಮುಖ್ಯಮಂತ್ರಿಯಿಂದ ಪ್ರಶಂಸೆ ಪತ್ರ

ಮುಖ್ಯಮಂತ್ರಿ ಬಿ. ಎಸ್​. ಯಡಿಯೂರಪ್ಪನವರ ತವರು ಜಿಲ್ಲೆಯ ಮಹಿಳೆಯೊಬ್ಬರು ಕೊರೊನಾ ರೋಗ ನಿಯಂತ್ರಣಕ್ಕಾಗಿ ಸಿಎಂ ಕೇರ್ಸ್​ಗೆ ಕಷ್ಟಕಾಲಕ್ಕೆ ಕೂಡಿಟ್ಟ ಹಣವನ್ನು ದಾನ ಮಾಡಿದ್ದು, ಸಿಎಂ ಪ್ರಶಂಸೆಗೆ ಪಾತ್ರರಾಗಿದ್ದಾರೆ.

shivamogga-poor-women-donated-money-to-cm-cares-found
ಸಿಎಂ ಪರಿಹಾರ ನಿಧಿ
author img

By

Published : Apr 30, 2020, 11:02 AM IST

ಬೆಂಗಳೂರು: ಕಷ್ಟಕಾಲಕ್ಕೆಂದು ಕೂಡಿಟ್ಟಿದ್ದ ಅಲ್ಪ ಮೊತ್ತದ ಹಣವನ್ನೇ ಸಿಎಂ ಪರಿಹಾರ ನಿಧಿಗೆ ನೀಡಿದ ತವರು ಜಿಲ್ಲೆಯ ಮಹಿಳೆಯೊಬ್ಬರಿಗೆ ಸಿಎಂ ಬಿ. ಎಸ್​. ಯಡಿಯೂರಪ್ಪ ಪತ್ರ ಬರೆದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

''ತಾವು ತಮ್ಮ ಪತಿ ದಿ. ಗಣಪತಿ ಭಟ್ ರಂತೆಯೇ ದೇಶಾಭಿಮಾನಿಯಾಗಿದ್ದೀರಿ, ಕಷ್ಟ ಕಾಲಕ್ಕೆ ಕೂಡಿಟ್ಟ ಹಣವನ್ನು ಕೋವಿಡ್-19 ರೋಗ ನಿಯಂತ್ರಣಕ್ಕಾಗಿ ಸಿ. ಎಂ. ಕೇರ್ಸ್​​​ ನಿಧಿಗೆ ಅರ್ಪಿಸಿದ್ದು, ನನ್ನ ಮಂತ್ರಿ‌ ಸಹೋದ್ಯೋಗಿ ಎಸ್. ಸುರೇಶ್ ಕುಮಾರ್ ಅವರಿಂದ ತಿಳಿಯಿತು, ತಾವುಗಳು ನಿಮ್ಮ ಕೂಡಿಟ್ಟ ರೂ.2,800/- ಗಳನ್ನು ಆಂಚೆ ಕಛೇರಿ, ಕಂಡಿಕಾ ಗ್ರಾಮ, ಸಾಗರ ತಾಲ್ಲೂಕು ಮೂಲಕ ನೀಡಿದ್ದೀರಿ, ತಮಗೆ ನನ್ನ ಕೃತಜ್ಞತಾಪೂರ್ವಕ ಧನ್ಯವಾದಗಳನ್ನು ತಿಳಿಸಬಯಸುತ್ತೇನೆ'' ಎಂದು ಸಿಎಂ ಪ್ರಶಂಸೆ ಪತ್ರ ಬರೆದಿದ್ದಾರೆ.

shivamogga-poor-women-donated-money-to-cm-cares-found
ಪ್ರಶಂಸೆ ಪತ್ರ

ಅಲ್ಲದೆ '' ಈ ನಿಮ್ಮ ಅಳಿಲು ಸೇವೆ ದೇಶದ ಪ್ರತಿಯೊಬ್ಬ ಪ್ರಜ್ಞಾವಂತ ಪ್ರಜೆಗೂ ಮಾದರಿಯಾಗಿರಲಿ ಮತ್ತು ಸ್ಫೂರ್ತಿದಾಯಕವಾಗಲಿ ಎಂದು ಈ ಸಂದರ್ಭದಲ್ಲಿ ಹಾರೈಸುತ್ತೇನೆ. ತಮ್ಮಂತಹ ದೇಶಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬೆಳೆಯಲಿ ಹಾಗೂ ಸರ್ಕಾರದೊಂದಿಗೆ ತನು ಮನ ಧನದೊಂದಿಗೆ ಸಹಕರಿಸಲೆಂದು ಆಶಿಸುತ್ತೇನೆ. ತಮಗೆ ದೇವರು ಆಯುರಾರೋಗ್ಯ ಐಶ್ವರ್ಯ ಮತ್ತು ನೆಮ್ಮದಿಯನ್ನು ಕರುಣಿಸಲೆಂದು ಪ್ರಾರ್ಥಿಸುತ್ತೇನೆ'' ಎಂದು ಪತ್ರದಲ್ಲಿ ಸಿಎಂ ಧನ್ಯವಾದ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.