ETV Bharat / city

ಶಿವಮೊಗ್ಗ ಹರ್ಷ ಕೊಲೆ ಪ್ರಕರಣ: ಮತ್ತೆ 12 ಜನರ ವಿಚಾರಣೆ ನಡೆಯುತ್ತಿದೆ- ಆರಗ ಜ್ಞಾನೇಂದ್ರ - shivamogga murder case 12 people arrested

ಶಿವಮೊಗ್ಗದಲ್ಲಿ ನಡೆದ ಹಿಂದೂ ಸಂಘಟನೆಯ ಕಾರ್ಯಕರ್ತ ಹರ್ಷನ ಹತ್ಯೆಯ ಸಂಬಂಧ ಎಲ್ಲ ಆಯಾಮಗಳಲ್ಲೂ ಪೊಲೀಸ್‌ ತನಿಖೆ ನಡೆಯುತ್ತಿದೆ ಗೃಹ ಸಚಿವ ಆರಗ ಆರಗ ಜ್ಞಾನೇಂದ್ರ ತಿಳಿಸಿದರು.

shivamogga-murder-case
ಆರಗ ಜ್ಞಾನೇಂದ್ರ
author img

By

Published : Feb 22, 2022, 11:43 AM IST

ಬೆಂಗಳೂರು: ಶಿವಮೊಗ್ಗದಲ್ಲಿ ನಡೆದ ಹರ್ಷ ಎಂಬ ಯುವಕನ ಕೊಲೆ ಪ್ರಕರಣ ಸಂಬಂಧ ಮೂವರ ಬಂಧನದ ನಂತರ ಮತ್ತೆ 12 ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಈ ಪ್ರಕರಣದಲ್ಲಿ ಭಾಗಿಯಾಗಿರುವ ವ್ಯಕ್ತಿಗಳ ಸುಳಿವು ಸಿಕ್ಕಲ್ಲಿ ಅಂಥವರನ್ನು ಬಂಧಿಸಲಾಗುತ್ತದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

ಈ ಕುರಿತು ಜಯಮಹಲ್‌ನಲ್ಲಿ ಮಾತನಾಡಿದ ಅವರು, ನಮ್ಮ ಪೊಲೀಸ್ ಸಿಬ್ಬಂದಿ ಸಮರ್ಥವಾಗಿ ಕರ್ತವ್ಯ ನಿರ್ವಹಣೆ ಮಾಡಿದ್ದಾರೆ. ಶಾಂತಿ ಕದಡಬೇಡಿ ಎಂದು ಜನತೆಯಲ್ಲಿ ಮನವಿ ಮಾಡಿದ್ದಾರೆ. ಸರ್ಕಾರ ಖಂಡಿತವಾಗಿಯೂ ತಪ್ಪಿತಸ್ಥರ ಬಂಧಿಸಿ ಸೂಕ್ತ ಶಿಕ್ಷೆಯನ್ನು ಕೊಡಿಸಲಿದೆ ಎಂದು ವಿನಂತಿ ಮಾಡಿದ್ದೆವು. ಅಂತೆಯೇ ಶಿವಮೊಗ್ಗದ ಸಾರ್ವಜನಿಕರು ನಮ್ಮ ಮನವಿಗೆ ಸ್ಪಂದಿಸಿದ್ದಾರೆ. ಹಾಗಾಗಿ, ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ ಎಂದು ಅವರು ಹೇಳಿದರು.

ಈಗಾಗಲೇ ಹನ್ನೆರಡಕ್ಕಿಂತ ಹೆಚ್ಚು ಜನರನ್ನು ವಶಕ್ಕೆ ಪಡೆಯಲಾಗಿದ್ದು ಎಲ್ಲ ಆಯಾಮದಲ್ಲೂ ಪ್ರಕರಣದ ತನಿಖೆ ನಡೆಸಲಾಗುತ್ತಿದೆ. ಹಿಜಾಬ್ ವಿಷಯಕ್ಕೆ ಮತೀಯ ಸಂಘಟನೆಗಳ ಕೈವಾಡ ಹಾಗು ಅವುಗಳ ಹಿನ್ನೆಲೆಯಲ್ಲಿ ಏನಾದರೂ ಇದೆಯೇ, ಇದಕ್ಕೆ ಯಾರು ಹಣ ಹಾಗೂ ವಾಹನವನ್ನು ಒದಗಿಸಿದ್ದಾರೆ, ಈ ಎಲ್ಲಾ ವಿಷಯದ ಕುರಿತು ವಿಸ್ತೃತವಾದ ತನಿಖೆ ನಡೆಸುವಂತೆ ತಿಳಿಸಿದ್ದೇನೆ. ಈ ರೀತಿಯ ಕೊಲೆಗಳು ಇಲ್ಲಿಗೆ ನಿಲ್ಲಬೇಕು, ಹರ್ಷನ ಕೊಲೆಯೇ ಕೊನೆಯಾಗಬೇಕು ಎನ್ನುವುದು ಸರ್ಕಾರದ ಸಂಕಲ್ಪ ಮತ್ತು ನಮ್ಮ ಇಲಾಖೆಯ ಸಂಕಲ್ಪವಾಗಿದೆ ಎಂದರು.

ನಿನ್ನೆ ಕಲ್ಲುತೂರಾಟ ಮಾಡಿದವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುತ್ತದೆ. ಉದ್ವೇಗಕ್ಕೆ ಒಳಗಾಗಿ ಅಲ್ಲಲ್ಲಿ ಕೆಲವು ಘಟನೆಗಳು ನಡೆದಿವೆ, ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಚಿವರು ಹೇಳಿದರು.

ಕಾನೂನು ಸುವ್ಯವಸ್ಥೆ ವಿಫಲವಾಗಿಲ್ಲ: ಗೃಹ ಸಚಿವರ ಜಿಲ್ಲೆಯಲ್ಲೇ ಕಾನೂನು ಸುವ್ಯವಸ್ಥೆ ವಿಫಲವಾಗಿದೆ ಎನ್ನುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪ ನಿರಾಧಾರ, ಘಟನೆ ನಂತರ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಶಂಕಿತರ ಬಂಧನ ಮಾಡಲಾಗಿದೆ. ಪ್ರಕರಣದ ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಇದನ್ನೂ ಓದಿ: ಉಕ್ರೇನ್​ ಬಿಕ್ಕಟ್ಟು: ಭದ್ರತಾ ಮಂಡಳಿಯ ತುರ್ತು ಸಭೆ ಕರೆದ ವಿಶ್ವಸಂಸ್ಥೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.