ETV Bharat / city

ಮಧ್ಯಾಹ್ನ ಗಾಜಿನ ಮನೆ, ಸಂಜೆ ರಾಜ್ಯಪಾಲರ ಕಚೇರಿ : 2 ಬಾರಿ ಪ್ರಮಾಣ ವಚನ ಸ್ವೀಕರಿಸಿದ ಮುನೇನಕೊಪ್ಪ - cabinet expansion

ತಾಂತ್ರಿಕ ದೋಷ ಹಿನ್ನೆಲೆ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ಶಾಸಕ ಶಂಕರ ಪಾಟೀಲ್ ಮುನೇನಕೊಪ್ಪ ಮಧ್ಯಾಹ್ನ ಗಾಜಿನ ಮನೆ, ಸಂಜೆ ರಾಜ್ಯಪಾಲರ ಕಚೇರಿಯಲ್ಲಿ 2 ಬಾರಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ..

Shankaragowda Patil Munenakoppa
2 ಬಾರಿ ಪ್ರಮಾಣ ವಚನ ಸ್ವೀಕರಿಸಿದ ಶಂಕರ ಪಾಟೀಲ್
author img

By

Published : Aug 4, 2021, 9:24 PM IST

Updated : Aug 4, 2021, 10:24 PM IST

ಬೆಂಗಳೂರು : ಮಧ್ಯಾಹ್ನವಷ್ಟೇ ಸಿಎಂ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ಶಾಸಕ ಶಂಕರ ಪಾಟೀಲ್ ಮುನೇನಕೊಪ್ಪ ಸಂಜೆ ಮತ್ತೊಮ್ಮೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಮೊದಲ ಬಾರಿ ಪ್ರಮಾಣವಚನ ಸ್ವೀಕಾರ ಮಾಡಿದ ವೇಳೆ ತಾಂತ್ರಿಕ ದೋಷ ಇದ್ದ ಹಿನ್ನೆಲೆಯಲ್ಲಿ ಮತ್ತೆ ರಾಜ್ಯಪಾಲರ ಕಚೇರಿಯಲ್ಲಿ ಏಕಾಂಗಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಮಧ್ಯಾಹ್ನ ಪ್ರಮಾಣವಚನ ಸ್ವೀಕರಿಸುವಾಗ ಅಧಿಕಾರ ಪ್ರಮಾಣವನ್ನೇ 2 ಬಾರಿ ಓದಿದ್ದ ಮುನೇನಕೊಪ್ಪ ಗೌಪ್ಯತಾ ಪ್ರಮಾಣ ವಿಧಿ ಪೂರೈಸಿರಲಿಲ್ಲ.

ದೋಷ ಅರಿವಾದ ಬಳಿಕ ರಾಜಭವನದ ಅಧಿಕಾರಿಗಳು ಶಾಸಕರನ್ನು ಸಂಪರ್ಕಿಸಿ ರಾಜಭವನಕ್ಕೆ ಮರಳಿ ಆಹ್ವಾನಿಸಿದ್ದು, ರಾಜ್ಯಪಾಲರೆದುರು ಪ್ರಮಾಣ ವಿಧಿ ಸ್ವೀಕಾರ ಮಾಡಿದರು. ಈ ವೇಳೆ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಉಪಸ್ಥಿತರಿದ್ದರು.

ಇದನ್ನೂ ಓದಿ: 29 ಸಚಿವರ ಪ್ರಮಾಣ : ಬೊಮ್ಮಾಯಿ ಸಂಪುಟ ಬಹುತೇಕ ಭರ್ತಿ

Last Updated : Aug 4, 2021, 10:24 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.