ಬೆಂಗಳೂರು: ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಇಂದು ವಿವಿಧ ಸಭೆಗಳು ಸರಣಿ ರೂಪದಲ್ಲಿ ನಡೆದವು. ಇಂದು ಮಧ್ಯಾಹ್ನದ ನಂತರ ಜಲಸಂಪನ್ಮೂಲ ಇಲಾಖೆ ಪರಿಶೀಲನಾ ಸಭೆ ಮೊದಲು ನಡೆಯಿತು.
ವರ್ಚುಯಲ್ ಸಭೆ: ಜಲಸಂಪನ್ಮೂಲ ಇಲಾಖೆ ಸಭೆಯ ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವರ್ಚುಯಲ್ ಮೂಲಕ ಸಿಐಐ ವಾರ್ಷಿಕ ಸಭೆ- ಇಂಡಿಯಾ @75 ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಎಂಟಿಬಿ, ಶಂಕರ್ ಭೇಟಿ:
ಮುಖ್ಯಮಂತ್ರಿಗಳ ಗ್ರಹ ಕಚೇರಿಗೆ ಸಚಿವ ಎಂಟಿಬಿ ನಾಗರಾಜ್ ಹಾಗೂ ಮಾಜಿ ಸಚಿವ ಆರ್.ಶಂಕರ್ ಭೇಟಿ ನೀಡಿದ್ದರು. ಮುಖ್ಯಮಂತ್ರಿಗಳ ಭೇಟಿಯಾಗಲು ಆಗಮಿಸಿದ ಇವರು ಕೆಲಕಾಲ ಕೃಷ್ಣದ ಹೊರಗೆ ನಿಂತು ವಾಪಸ್ ತೆರಳಿದರು. ಇದಾದ ಬಳಿಕ ಮತ್ತೆ ಆಗಮಿಸಿ ಸಿಎಂ ಜೊತೆ ಸುದೀರ್ಘ ಚರ್ಚೆ ನಡೆಸಿದ್ದಾರೆ.
ಒಂದೆಡೆ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ವಾಸ್ತವ್ಯ ಹೂಡಿರುವ ಕಾವೇರಿ ನಿವಾಸಕ್ಕೆ ಸಚಿವ ಆನಂದ್ ಸಿಂಗ್ ಆಗಮಿಸಿದ್ದಾರೆ. ಬಿ.ಎಸ್ ಯಡಿಯೂರಪ್ಪ ಜೊತೆ ಅವರು ಸುದೀರ್ಘ ಚರ್ಚೆಯಲ್ಲಿ ನಿರತರಾಗಿದ್ದಾರೆ. ಬಿಎಸ್ವೈ ಜೊತೆ ನಡೆಸಿದ ಚರ್ಚೆಯ ನಂತರ ಗೃಹ ಕಚೇರಿ ಕೃಷ್ಣಾಗೆ ಆಗಮಿಸಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನು ಭೇಟಿಯಾಗಿ ಸಮಾಲೋಚಿಸುವ ಸಾಧ್ಯತೆ ಇದೆ. ಒಂದೊಮ್ಮೆ ಆನಂದ್ ಸಿಂಗ್ ಅಸಮಾಧಾನ ಸಿಎಂ ನಿವಾಸದಲ್ಲಿ ಶಮನಗೊಂಡರೆ, ಆನಂದ್ ಸಿಂಗ್ ಅಲ್ಲಿಂದಲೇ ವಾಪಸ್ ತೆರಳುವ ಸಾಧ್ಯತೆಯಿದೆ ಎನ್ನಲಾಗ್ತಿದೆ.