ETV Bharat / city

ಸಿಡಿ ಪ್ರಕರಣ.. ಎಫ್ಐಆರ್​ನಲ್ಲಿ 376 (c) ಸೆಕ್ಷನ್ ಸೇರಿಸಿರುವುದು ಸರಿಯಲ್ಲ ಅಂತಾರೆ ಕಾನೂನು ಪಂಡಿತರು

ಮಾರ್ಚ್ 26ರಂದು ಯುವತಿ ನೀಡಿದ್ದ ದೂರಿನ ಮೇರೆಗೆ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ರಮೇಶ್ ಜಾರಕಿಹೊಳಿ ವಿರುದ್ಧ ಎಫ್ಐಆರ್ ದಾಖಲಿಸಿದ್ದರು. ಐಪಿಸಿ ಸೆಕ್ಷನ್ 354(ಎ), 506, 504, 376 (ಸಿ) 417 ಹಾಗೂ ಐಟಿ ಕಾಯ್ದೆಯ ಸೆಕ್ಷನ್ 67ರ ಅಡಿ ಪ್ರಕರಣ ದಾಖಲಿಸಿ, ನಗರದ 1ನೇ ಎಸಿಎಂಎಂ ನ್ಯಾಯಾಲಯಕ್ಕೆ ಪ್ರಥಮ ವರ್ತಮಾನ ವರದಿ ಸಲ್ಲಿಸಿದ್ದರು..

author img

By

Published : Mar 30, 2021, 8:05 PM IST

ಸಿಡಿ ಪ್ರಕರಣ
ಸಿಡಿ ಪ್ರಕರಣ

ಬೆಂಗಳೂರು : ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಸಿಡಿ ಪ್ರಕರಣದ ಯುವತಿ ನೀಡಿರುವ ದೂರಿನ ಮೇರೆಗೆ ಪೊಲೀಸರು ಎಫ್ಐಆರ್ ದಾಖಲಿಸುವಾಗ ಅತ್ಯಾಚಾರ ಆರೋಪಕ್ಕೆ ಸಂಬಂಧಿಸಿದಂತೆ 376(ಸಿ) ಅಡಿ ಪ್ರಕರಣ ದಾಖಲಿಸಿರುವುದು ಸರಿಯಾದದ್ದಲ್ಲ ಎಂದು ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಹಿರಿಯ ವಕೀಲ ಹಾಗೂ ಕಾನೂನು ತಜ್ಞ ಸಿ ಹೆಚ್ ಹನುಮಂತರಾಯ ಹಾಗೂ ಕೆಬಿಕೆ ಸ್ವಾಮಿ ಅವರು ಈ ಕುರಿತು ಸ್ಪಷ್ಟನೆ ನೀಡಿದ್ದಾರೆ. ಪ್ರಕರಣದ ಯುವತಿ ನೀಡಿದ ದೂರಿನ ಮೇರೆಗೆ ಪೊಲೀಸರು ಅತ್ಯಾಚಾರ ಆರೋಪವನ್ನೂ ಸೇರಿಸಿದ್ದಾರೆ.

ಆದರೆ, ಅತ್ಯಾಚಾರ ಅಪರಾಧಕ್ಕಿರುವ ಶಿಕ್ಷೆ ಹಾಗೂ ನಿಬಂಧನೆಗಳನ್ನು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376 ವಿವರಿಸುತ್ತದೆ. ಅದರಂತೆ ಈ ಪ್ರಕರಣವನ್ನು ಗಮನಿಸಿದರೆ ಪೊಲೀಸರು ಐಪಿಸಿ ಸೆಕ್ಷನ್ 376 ಅಡಿಯಲ್ಲೇ ಎಫ್ಐಆರ್ ದಾಖಲಿಸಬೇಕಿತ್ತು.

ಆದರೆ, ಪೊಲೀಸರು ಎಫ್ಐಆರ್ ದಾಖಲಿಸುವ ವೇಳೆ ಐಪಿಸಿ ಸೆಕ್ಷನ್ 376(ಸಿ) ಅಡಿ ಪ್ರಕರಣ ದಾಖಲಿಸಿದ್ದಾರೆ. ಐಪಿಸಿ ಸೆಕ್ಷನ್ 376 (ಸಿ) ಸಾಂಸ್ಥಿಕ ವ್ಯವಸ್ಥೆಯೊಳಗೆ ಮಹಿಳೆ ಅತ್ಯಾಚಾರಕ್ಕೊಳಗಾದಾಗ ಶಿಕ್ಷಿಸುವ ಕುರಿತು ಈ ಸೆಕ್ಷನ್ ತಿಳಿಸುತ್ತದೆ. ಅದರಂತೆ ಸಚಿವರನ್ನು ಸಾರ್ವಜನಿಕ ನೌಕರ ಎಂದು ಪರಿಗಣಿಸಿದರೂ, ಸಂಸ್ಥೆ ಎಂದು ಪರಿಗಣಿಸಲು ಸಾಧ್ಯವಿಲ್ಲ.

ಸುಲಭವಾಗಿ ಜಾಮೀನು ಪಡೆಯಬಹುದು : ಜತೆಗೆ ಐಪಿಸಿ ಸೆಕ್ಷನ್ 376(ಸಿ) ಅತ್ಯಾಚಾರ ಎಂದು ಪರಿಗಣಿಸುವುದಿಲ್ಲ. ಲೈಂಗಿಕ ಶೋಷಣೆ ಕುರಿತು ವ್ಯಾಖ್ಯಾನಿಸುತ್ತದೆ. ಇದನ್ನು ಬಳಸಿಕೊಂಡು ಆರೋಪಿ ಸುಲಭದಲ್ಲಿ ಜಾಮೀನು ಪಡೆದುಕೊಳ್ಳಬಹುದಾಗಿದೆ ಎಂದು ಕಾನೂನು ತಜ್ಞರು ವಿವರಿಸಿದ್ದಾರೆ.

ಮಾರ್ಚ್ 26ರಂದು ಯುವತಿ ನೀಡಿದ್ದ ದೂರಿನ ಮೇರೆಗೆ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ರಮೇಶ್ ಜಾರಕಿಹೊಳಿ ವಿರುದ್ಧ ಎಫ್ಐಆರ್ ದಾಖಲಿಸಿದ್ದರು. ಐಪಿಸಿ ಸೆಕ್ಷನ್ 354(ಎ), 506, 504, 376 (ಸಿ) 417 ಹಾಗೂ ಐಟಿ ಕಾಯ್ದೆಯ ಸೆಕ್ಷನ್ 67ರ ಅಡಿ ಪ್ರಕರಣ ದಾಖಲಿಸಿ, ನಗರದ 1ನೇ ಎಸಿಎಂಎಂ ನ್ಯಾಯಾಲಯಕ್ಕೆ ಪ್ರಥಮ ವರ್ತಮಾನ ವರದಿ ಸಲ್ಲಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.