ETV Bharat / city

ಕಲಾಸಿಪಾಳ್ಯ, ಕೆ ಆರ್ ಮಾರುಕಟ್ಟೆ ಸೇರಿ ನಾಳೆಯಿಂದ ಐದು ಪ್ರದೇಶಗಳು ಸೀಲ್​ಡೌನ್​​! - ಬೆಂಗಳೂರು ಕೊರೊನಾ ಸುದ್ದಿ

ಬಿಬಿಎಂಪಿ ನಾಳೆಯಿಂದ ಸಿದ್ದಾಪುರ, ಚಿಕ್ಕಪೇಟೆ, ಕಲಾಸಿಪಾಳ್ಯ, ಕೆಆರ್‌ಮಾರುಕಟ್ಟೆ ಹಾಗೂ ವಿವಿ ಪುರಂ ಸೀಲ್​ಡೌನ್ ಮಾಡುತ್ತಿದೆ. ಸೋಂಕಿನ ಪ್ರಕರಣ ದಿನೇದಿನೆ ಹೆಚ್ಚಾಗುತ್ತಿರುವ ಹಿನ್ನೆಲೆ ಪಾಲಿಕೆ ಈ ನಿರ್ಧಾರಕ್ಕೆ ಬಂದಿದೆ..

Seal down to 5 areas of Bangalore
ಪಾಲಿಕೆ ಆಯುಕ್ತ ಬಿ ಹೆಚ್ ಅನಿಲ್ ಕುಮಾರ್
author img

By

Published : Jun 22, 2020, 8:39 PM IST

ಬೆಂಗಳೂರು : ನಗರದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಈ ಹಿನ್ನೆಲೆ ಹೆಚ್ಚು ಸೋಂಕಿತ ಪ್ರಕರಣ ವರದಿಯಾದ ಐದು ಪ್ರದೇಶಗಳನ್ನು ನಾಳೆಯಿಂದಲೇ ಸೀಲ್​ಡೌನ್ ಮಾಡುವುದಾಗಿ ಪಾಲಿಕೆ ಆಯುಕ್ತ ಬಿ ಹೆಚ್ ಅನಿಲ್‌ಕುಮಾರ್ ತಿಳಿಸಿದ್ದಾರೆ.

ಈ ಕುರಿತು ಮಾತನಾಡಿದ ಅವರು, ಬಿಬಿಎಂಪಿ ವ್ಯಾಪ್ತಿಯಲ್ಲಿ ಅನ್​ಲಾಕ್ ಬಳಿಕ ಕೋವಿಡ್-19 ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ, ಹೆಚ್ಚು ಸೋಂಕಿತ ಪ್ರದೇಶಗಳನ್ನು ಕೂಡಲೇ ಲಾಕ್​ಡೌನ್ ಮಾಡಬೇಕು. ಜನರ ಅನವಶ್ಯಕ ಓಡಾಟ ತಡೆಯಬೇಕು ಎಂದು ಸಿಎಂ ಸೂಚನೆ ಕೊಟ್ಟಿದ್ದಾರೆ. ಇಡೀ ವಾರ್ಡ್ ಸೀಲ್​ಡೌನ್ ಆಗುವುದಿಲ್ಲ.

ಹೀಗಾಗಿ ಐದು ಪ್ರದೇಶಗಳನ್ನು ಗುರುತಿಸಿ, ಆ ಪ್ರದೇಶವನ್ನು ಮಾತ್ರ ಸೀಲ್​ಡೌನ್ ಮಾಡಲು ನಾಳೆಯಿಂದಲೇ ಕ್ರಮಕೈಗೊಳ್ಳಲಾಗುವುದು. ಯಾವುದೇ ಕಾರಣಕ್ಕೂ ಸೋಂಕು ಹೆಚ್ಚಾಗದಂತೆ ತಡೆಯಲು ಸಿಎಂ ಸೂಚನೆ ಕೊಟ್ಟಿದ್ದಾರೆ ಎಂದರು.

ಬಿಬಿಎಂಪಿ ಪಾಲಿಕೆ ಆಯುಕ್ತ ಬಿ ಹೆಚ್ ಅನಿಲ್‌ಕುಮಾರ್..

ಚಿಕ್ಕಪೇಟೆ, ಕಲಾಸಿಪಾಳ್ಯ, ಕೆ ಆರ್ ಮಾರುಕಟ್ಟೆಯಲ್ಲಿ ವರ್ತಕರು ಸ್ವಯಂಪ್ರೇರಿತ ಲಾಕ್​ಡೌನ್ ಮಾಡುತ್ತಿದ್ದಾರೆ. ಬಿಬಿಎಂಪಿ ನಾಳೆಯಿಂದ ಸಿದ್ದಾಪುರ, ಚಿಕ್ಕಪೇಟೆ, ಕಲಾಸಿಪಾಳ್ಯ, ಕೆ ಆರ್ ಮಾರುಕಟ್ಟೆ ಹಾಗೂ ವಿವಿಪುರಂ ಸೀಲ್​ಡೌನ್ ಮಾಡುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.