ETV Bharat / city

ರಾಜ್ಯಾದ್ಯಂತ ನಾಳೆಯಿಂದ ಶಾಲೆ ಆರಂಭ : ಕಲಿಕಾ ಚೇತರಿಕೆ ಕಾರ್ಯಕ್ರಮವೂ ಶುರು

ರಾಜ್ಯಾದ್ಯಂತ ನಾಳೆಯಿಂದ ಶಾಲೆಗಳು ಪುನರ್ ಆರಂಭವಾಗಲಿದೆ..

schools starts from tomorrow
ರಾಜ್ಯಾದ್ಯಂತ ನಾಳೆಯಿಂದ ಶಾಲಾರಂಭ
author img

By

Published : May 15, 2022, 5:46 PM IST

ಬೆಂಗಳೂರು : ರಾಜ್ಯಾದ್ಯಂತ ನಾಳೆಯಿಂದ ಶಾಲೆಗಳು ಪುನಾರಂಭವಾಗಲಿವೆ. ಜೊತೆ ಜೊತೆಗೆ ಕಲಿಕಾ ಚೇತರಿಕೆಯ ವಿಶೇಷ ಕಾರ್ಯಕ್ರಮವೂ ಶುರುವಾಗಲಿದೆ. ರಾಜ್ಯದ ಪಠ್ಯಕ್ರಮ ಹೊಂದಿರುವ ಸರ್ಕಾರಿ, ಅನುದಾನಿತ ಮತ್ತು ಅನುದಾನಿತ ರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ 2022-23ನೇ ಸಾಲಿನ ಶೈಕ್ಷಣಿಕ ವರ್ಷ ನಾಳೆಯಿಂದ ಆರಂಭವಾಗಲಿದೆ.

ಕಳೆದ 3 ವರ್ಷಗಳ ಶೈಕ್ಷಣಿಕ ಚಟುವಟಿಕೆಗಳನ್ನು ಅವಲೋಕಿಸಿದರೆ ಈ ಹಿಂದೆ ಕೋವಿಡ್-19 ಹಿನ್ನೆಲೆಯಲ್ಲಿ ಶಾಲೆಗಳಿಗೆ ಅನಿವಾರ್ಯವಾಗಿ 2020-21ರ ಫೆಬ್ರವರಿಯಿಂದ ರಜೆ ನೀಡುವ ಸಂದರ್ಭ ಒದಗಿ ಬಂದಿತ್ತು.‌ 2019-20, 2020-21 ಮತ್ತು 2021-22ರ ಈ ಮೂರು ಶೈಕ್ಷಣಿಕ ಸಾಲುಗಳಲ್ಲಿ ಆಗಿಂದಾಗ್ಗೆ ರಾಜ್ಯದ ಶಾಲೆಗಳನ್ನು ಸ್ಥಗಿತಗೊಳಿಸಿದ್ದ ಕಾರಣ ಶೇ.50 ರಿಂದ 60ರಷ್ಟು ದಿನಗಳಲ್ಲಿ ಮಾತ್ರ ಭೌತಿಕವಾಗಿ ಶಾಲೆಗಳನ್ನು ನಡೆಸಲಾಗಿತ್ತು.

ಇದರಿಂದಾಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಕಲಿಕೆಗೆ ಹಿನ್ನಡೆ ಉಂಟಾಗಿತ್ತು. ಶಾಲೆಗಳಲ್ಲಿ ಭೌತಿಕ ತರಗತಿಗಳನ್ನು ನಡೆಸಲು ಸಾಧ್ಯವಾಗದೇ ಪರ್ಯಾಯ ಮಾರ್ಗಗಳ ಮುಖಾಂತರ ಆನ್‌ಲೈನ್‌ ಮೂಲಕ ಶಿಕ್ಷಣವನ್ನು ನೀಡಬೇಕಾಯ್ತು. ಆದರೆ, ಈ ಪರ್ಯಾಯ ವಿಧಾನದಿಂದ ನಿರೀಕ್ಷಿತ ಮಟ್ಟದ ಕಲಿಕಾ ಪ್ರಗತಿ ಸಾಧಿಸಲು ಆಗಿಲ್ಲ ಅಂತಾ ಶಿಕ್ಷಣ ಇಲಾಖೆ ತಿಳಿಸಿತ್ತು.

ಕಲಿಕಾ ಚೇತರಿಕೆ ಕಾರ್ಯಕ್ರಮ : ಈ ನಿಟ್ಟಿನಲ್ಲಿ ಮಕ್ಕಳು ಮರೆತಿರುವುದನ್ನು ಕಲಿಸುವ ಪ್ರಯತ್ನದ ಭಾಗವಾಗಿ ಈ ವರ್ಷ ಕಲಿಕಾ ಚೇತರಿಕೆ ಕಾರ್ಯಕ್ರಮವನ್ನ ನಾಳೆಯಿಂದ ಶುರು ಮಾಡಲಾಗುತ್ತಿದೆ. ಕಲಿಕಾ ಚೇತರಿಕೆ ಕಾರ್ಯಕ್ರಮದ ಮೂಲಕ ಶೈಕ್ಷಣಿಕ ವರ್ಷದ ಪೂರ್ಣಾವಧಿಯಲ್ಲಿ ಪ್ರಸ್ತುತ ಸಾಲಿನ ಪಠ್ಯ ವಸ್ತುವಿನ ಬೋಧನೆಗೆ ಹಿನ್ನಡೆಯಾಗದಂತೆ ಸಹಕಾರಿಯಾಗುವಂತೆ ಆಯೋಜಿಸಲಾಗಿದೆ.

ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 2022-23ನೇ ಶೈಕ್ಷಣಿಕ ಸಾಲಿನಲ್ಲಿ ಏಕರೂಪದ ಶೈಕ್ಷಣಿಕ ಚಟುವಟಿಕೆಗಳನ್ನು ಜಾರಿಗೊಳಿಸಲು ಸೂಚಿಸಲಾಗಿದೆ. ಈಗಾಗಲೇ ಶೈಕ್ಷಣಿಕ ವರ್ಷದ ಪ್ರಾರಂಭ ಮತ್ತು ಕಲಿಕಾ ಪೂರಕ ಚಟುವಟಿಕೆಗಳನ್ನು ಅನುಷ್ಠಾನಗೊಳಿಸಲು ಸೂಚಿಸಿದೆ. ಮುಂದುವರೆದು ಶೈಕ್ಷಣಿಕ ಸಾಲಿನ ಚಟುವಟಿಕೆಗಳನ್ನು ಸಮಗ್ರ ನಿರ್ವಹಣೆಗೆ ಸಹಕಾರಿಯಾಗುವಂತೆ ಕಾರ್ಯಸೂಚಿಯನ್ನು ಸಿದ್ಧಪಡಿಸಿ ಅನುಷ್ಠಾನಗೊಳಿಸಲು ಶಿಕ್ಷಣ ಇಲಾಖೆ ಸೂಚಿಸಿದೆ.

ಇನ್ನು ಶೈಕ್ಷಣಿಕ ಸಾಲಿನಲ್ಲಿ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಿಗೆ 256 ಕರ್ತವ್ಯ ದಿನಗಳು ಲಭ್ಯವಾಗಲಿದೆ.‌ ಮಕ್ಕಳ ಶಾಲಾ ಪ್ರವೇಶಾತಿಯ ದಾಖಲಾತಿಯನ್ನು ಮೇ 16ರಿಂದ ಆರಂಭಿಸಿ ಜುಲೈ 31ರೊಳಗಾಗಿ ಮುಕ್ತಾಯಗೊಳಿಸುವಂತೆ ಸೂಚಿಸಲಾಗಿದೆ.‌

ಬಿಸಿಯೂಟ ಆರಂಭ : ನಾಳೆಯಿಂದ ಶಾಲಾರಂಭ ಹಿನ್ನೆಲೆ ಮಕ್ಕಳ ಸ್ವಾಗತಕ್ಕೆ ಸಿದ್ಧತೆ ಮಾಡಿಕೊಳ್ಳಲು ಶಿಕ್ಷಣ ಇಲಾಖೆ ಸೂಚನೆ ನೀಡಿದೆ.‌ ಕೋವಿಡ್ ಕಾರಣಕ್ಕೆ ಕ್ಷೀರಭಾಗ್ಯ ಮತ್ತು ಮಧ್ಯಾಹ್ನದ ಬಿಸಿ ಊಟಕ್ಕೆ ಶಾಲೆಯಲ್ಲಿ ಬ್ರೇಕ್ ಹಾಕಿ ದವಸ, ಧಾನ್ಯಗಳನ್ನು ವಿತರಣೆ ಮಾಡಲಾಗುತ್ತಿತ್ತು. ‌ಆದರೆ, ಇದೀಗ ನಾಳೆಯಿಂದ ಅದನ್ನೂ ಆರಂಭಿಸಲು ತಿಳಿಸಲಾಗಿದೆ. ಹಾಗೇ ಶಾಲಾ ಪ್ರಾರಂಭೋತ್ಸವಕ್ಕೆ ಪೋಷಕರನ್ನು ಆಹ್ವಾನಿಸಲು ತಿಳಿಸಿದ್ದು, ಶಾಲೆಯನ್ನು ತಳಿರು. ತೋರಣಗಳಿಂದ ಸಿಂಗರಿಸಿ ಆಕರ್ಷಣೀಯಗೊಳಿಸಬೇಕೆಂದು ಹೇಳಲಾಗಿದೆ.

ಬಸ್‌ ಪಾಸ್ : ವಿದ್ಯಾರ್ಥಿಗಳ ಹಳೇ ಬಸ್ ಪಾಸ್ ಅನ್ನು ಜೂನ್ 30ರವರೆಗೆ ಬಳಸಿ ನಂತರ ಹೊಸ ಪಾಸ್ ವಿತರಣೆ ಮಾಡುವ ದಿನಾಂಕ ತಿಳಿಸಲಾಗುತ್ತದೆ ಅಂತಾ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮಾಹಿತಿ ನೀಡಿದೆ. ಹಾಗೇ ಬಿಎಂಟಿಸಿ ಸಂಸ್ಥೆಯು 2021-22ನೇ ಸಾಲಿನಲ್ಲಿ ವಿದ್ಯಾರ್ಥಿಗಳಿಗೆ ವಿತರಣೆ ಮಾಡಿರುವ ಸ್ಮಾರ್ಟ್ ಕಾರ್ಡ್ ವಿದ್ಯಾರ್ಥಿ ಪಾಸುಗಳ ಮಾನ್ಯತಾ ಅವಧಿಯು ಜೂನ್ 30ರವರೆಗೆ ಇರಲಿದೆ.

ಹಾಗೇ ವಿದ್ಯಾರ್ಥಿ ಪಾಸುಗಳನ್ನು ಪಡೆಯದ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳಿಗೆ ಅನುವಾಗುವಂತೆ ಸಾರಿಗೆ ಸೌಲಭ್ಯವನ್ನು ಒದಗಿಸುವ ಉದ್ದೇಶದಿಂದ ಮೇ 16 ರಿಂದ 31ರವರೆಗೆ ಪ್ರಸಕ್ತ ಸಾಲಿನಲ್ಲಿ ಶಾಲೆಗೆ ಶುಲ್ಕ ಪಾವತಿಸಿರುವ, ಶುಲ್ಕ ರಸೀದಿಯೊಂದಿಗೆ/ಗುರುತಿನ ಚೀಟಿಯೊಂದಿಗೆ ತಮ್ಮ ವಾಸಸ್ಥಳದಿಂದ ಶಾಲೆಯವರೆಗೆ ಸಂಸ್ಥೆಯ ಸಾಮಾನ್ಯ ಸೇವೆಗಳಲ್ಲಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ.

ಶಾಲಾ ಕರ್ತವ್ಯದ ದಿನಗಳು ಹೀಗಿವೆ : ಮೊದಲ ಅವಧಿ-ಮೇ 16ರಿಂದ ಅಕ್ಟೋಬರ್ 16ರತನಕ.

  • ಎರಡನೇ ಅವಧಿ- ಅಕ್ಟೋಬರ್ 17 ರಿಂದ ಏಪ್ರಿಲ್ 10ರ ತನಕ.
  • ದಸರಾ ರಜೆ- ಅಕ್ಟೋಬರ್ 3 ರಿಂದ 16ರ ತನಕ.
  • ಬೇಸಿಗೆ ರಜೆ - 2023ರ ಏಪ್ರಿಲ್ 11 ರಿಂದ ಮೇ 28ರ ತನಕ.

ಇದನ್ನೂ ಓದಿ: ವರ್ಷದಿಂದ ವರ್ಷಕ್ಕೆ ಡೆಂಗ್ಯೂ ಪ್ರಕರಣ ಇಳಿಕೆ ; ಮೇ 16 ರಾಷ್ಟ್ರೀಯ ಡೆಂಗ್ಯೂ ದಿನಾಚರಣೆ..‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.