ETV Bharat / city

ಜನವರಿಯಿಂದ ಶಾಲೆಗಳು ಪುನಾರಂಭ : ಶಿಕ್ಷಣ ಸಚಿವರಿಂದ ಶಾಲಾ-ಕಾಲೇಜುಗಳಿಗೆ ರೌಂಡ್ಸ್​

ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 700 ವಿದ್ಯಾರ್ಥಿಗಳು ಹಾಗೂ ಮಹಾರಾಣಿ ಅಮ್ಮಣಿ ಕಾಲೇಜಿನಲ್ಲಿ 600 ಪಿಯು ವಿದ್ಯಾರ್ಥಿನಿಗಳಿದ್ದಾರೆ. ಈಗಾಗಲೇ ಸೆಕ್ಷನ್ ಮಾಡಿ ಟೈಂ ಟೇಬಲ್ ರಚನೆ ಮಾಡಿದ್ದಾರೆ. ಜ್ವರ-ನೆಗಡಿ ಇದ್ದರೆ ಐಸೋಲೇಷನ್ ರೂಂ ಮಾಡಿದ್ದು, ನರ್ಸ್ ಸೌಲಭ್ಯ ಕೂಡ ಇದೆ..

school-college-rounds-by-education-minister-suresh-kumar
ಜನವರಿಯಿಂದ ಶಾಲಾರಂಭ: ಶಿಕ್ಷಣ ಸಚಿವರಿಂದ ಶಾಲಾ-ಕಾಲೇಜು ರೌಂಡ್ಸ್​
author img

By

Published : Dec 30, 2020, 12:48 PM IST

ಬೆಂಗಳೂರು : ಜನವರಿಯಿಂದ ಶಾಲಾಗಳು ಪುನಾರಂಭ ಹಿನ್ನೆಲೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಶಾಲಾ-ಕಾಲೇಜುಗಳಿಗೆ ಭೇಟಿ ನೀಡುತ್ತಿದ್ದಾರೆ.

ಶಾಲೆ-ಕಾಲೇಜುಗಳಿಗೆ ಭೇಟಿ ನೀಡ್ತಿರುವ ಶಿಕ್ಷಣ ಸಚಿವರು..​

ಮೊದಲನೆಯದಾಗಿ ಮಲ್ಲೇಶ್ವರಂನ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಭೇಟಿ ನೀಡಿದ ಸಚಿವರು, ಶಾಲೆ ಪುನಾರಂಭದ ಕುರಿತಂತೆ ತೆಗೆದುಕೊಂಡಿರುವ ಮುಂಜಾಗ್ರತಾ ಕ್ರಮಗಳನ್ನು ವೀಕ್ಷಿಸಿದರು. ಬಳಿಕ ಅಮ್ಮಣಿ ಮಹಿಳಾ ಕಾಲೇಜಿಗೆ ಭೇಟಿ ನೀಡಿ ಪ್ರಾಂಶುಪಾಲರಿಂದ ಮಾಹಿತಿ ಪಡೆದರು. ಜೊತೆಗೆ ಸ್ಯಾನಿಟೈಸ್​ ವ್ಯವಸ್ಥೆ, ಸಾಮಾಜಿಕ ಅಂತರದ ಬಾಕ್ಸ್‌ಗಳು ಇರುವುದನ್ನ ಖಚಿತ ಪಡಿಸಿಕೊಂಡರು.

ನಂತರ ಮಾತಾನಾಡಿದ ಸಚಿವರು​​, ಪೋಷಕರಿಂದ ಬಂದ ಅಭಿಪ್ರಾಯದ ಬಗ್ಗೆಯೂ ಮಾಹಿತಿ ಸಂಗ್ರಹ ಮಾಡಲಾಗುತ್ತಿದೆ‌‌. ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 700 ವಿದ್ಯಾರ್ಥಿಗಳು ಹಾಗೂ ಮಹಾರಾಣಿ ಅಮ್ಮಣಿ ಕಾಲೇಜಿನಲ್ಲಿ 600 ಪಿಯು ವಿದ್ಯಾರ್ಥಿನಿಗಳಿದ್ದಾರೆ. ಈಗಾಗಲೇ ಸೆಕ್ಷನ್ ಮಾಡಿ ಟೈಂ ಟೇಬಲ್ ರಚನೆ ಮಾಡಿದ್ದಾರೆ. ಜ್ವರ-ನೆಗಡಿ ಇದ್ದರೆ ಐಸೋಲೇಷನ್ ರೂಂ ಮಾಡಿದ್ದು, ನರ್ಸ್ ಸೌಲಭ್ಯ ಕೂಡ ಇದೆ ಎಂದರು.

ಮೊದಲ ದಿನ ಶೇ. 50 ರಿಂದ 60 ರಷ್ಟು ಮಕ್ಕಳು ಬರುವ ನಿರೀಕ್ಷೆ ಇದೆ.‌ ಆರ್​ಪಿಸಿಆರ್ ಪರೀಕ್ಷೆ ಸರ್ಟಿಫಿಕೇಟ್ ಪ್ರಾಂಶುಪಾಲರಿಗೆ ಕೊಡಬೇಕು. ಕಾಲೇಜಿಗೆ ಕರೆಸಿ ಕೋವಿಡ್ ಪರೀಕ್ಷೆ ಮಾಡುವ ವ್ಯವಸ್ಥೆ ಇದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.