ETV Bharat / city

ದೇವನಹಳ್ಳಿ ರೆಸಾರ್ಟ್​ನಿಂದ ಚೆನ್ನೈನತ್ತ ಶಶಿಕಲಾ ಪ್ರಯಾಣ: ಖಾಸಗಿ ವಿಐಪಿ ಎಸ್ಕಾರ್ಟ್ ಭದ್ರತೆ - ಶಶಿಕಲಾ ನಟರಾಜನ್​ ಲೇಟೆಸ್ಟ್​ ನ್ಯೂಸ್​

ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಕಳೆದ ನಾಲ್ಕು ವರ್ಷದಿಂದ ಜೈಲುವಾಸ ಅನುಭವಿಸಿ ಬಿಡುಗಡೆಯಾದ ಬಳಿಕ ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ತಂಗಿದ್ದ ತಮಿಳುನಾಡಿನ ಶಶಿಕಲಾ ನಟರಾಜನ್​ ಇಂದು ಚೆನ್ನೈಗೆ ಪ್ರಯಾಣ ಬೆಳೆಸಿದ್ದಾರೆ.

sasikala to move chennai from bengaluru
ಚೆನ್ನೈನತ್ತ ಶಶಿಕಲಾ ಪ್ರಯಾಣ
author img

By

Published : Feb 8, 2021, 9:59 AM IST

ದೇವನಹಳ್ಳಿ : ಕಳೆದ ಹತ್ತು ದಿನಗಳಿಂದ ದೇವನಹಳ್ಳಿ ರೆಸಾರ್ಟ್​​ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ತಮಿಳುನಾಡಿನ ಶಶಿಕಲಾ ಇಂದು ಬೆಳಗ್ಗೆ ಚೆನ್ನೈಗೆ ಪ್ರಯಾಣ ಬೆಳೆಸಿದ್ದಾರೆ.

ಚೆನ್ನೈನತ್ತ ಶಶಿಕಲಾ ಪ್ರಯಾಣ
ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಸೆರೆವಾಸ ಅನುಭವಿಸಿ, ಬಿಡುಗಡೆಯಾಗುವ ಹೊತ್ತಿಗೆ ಕೊರೊನಾ ಸೋಂಕಿಗೆ ತುತ್ತಾಗಿದ್ದ ಚಿನ್ನಮ್ಮ, ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆದ ನಂತರ ನೇರವಾಗಿ ಚೆನ್ನೈಗೆ ಹೋಗದೆ ದೇವನಹಳ್ಳಿ ಗಾಲ್ಫ್​ ಶೈರ್ ರೆಸಾರ್ಟ್​ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ರೆಸಾರ್ಟ್​ನಲ್ಲಿಯೇ ಇದ್ದುಕೊಂಡು ತಮಿಳುನಾಡಿನ ರಾಜಕೀಯ ಲೆಕ್ಕಾಚಾರ ಹಾಕುತ್ತಿದ್ದ ಚಿನ್ನಮ್ಮ ಇಂದು ಬೆಳಗ್ಗೆ ತಮ್ಮ ಬೆಂಬಲಿಗರ ಜೊತೆಯಲ್ಲಿ ಚೆನ್ನೈಗೆ ಪ್ರಯಾಣ ಬೆಳೆಸಿದರು. ಜ್ಯೋತಿಷಿಗಳ ಸಲಹೆಯಂತೆ ಇಂದು ಚೆನೈಗೆ ತೆರಳಿದರು. ರೆಸಾರ್ಟ್ ಗೇಟ್​ನಲ್ಲಿಯೇ ಶಶಿಕಲಾ ನಟರಾಜನ್​ಗೆ ಸ್ವಾಗತ ಕೋರಲು ಅಪಾರ ಬೆಂಬಲಿಗರು ಆಗಮಿಸಿ, ಆರತಿ ಎತ್ತಿ ಸ್ವಾಗತ ಕೋರಿದರು. ಸುಮಾರು 200ಕ್ಕೂ ಹೆಚ್ಚು ಕಾರುಗಳಲ್ಲಿ ಚೆನ್ನೈನಿಂದ ಬೆಂಬಲಿಗರು ರೆಸಾರ್ಟ್ ಬಳಿಗೆ ಬಂದಿದ್ದರು.

ಶಶಿಕಲಾಗೆ ಖಾಸಗಿ ಎಸ್ಕಾರ್ಟ್:

ಶಶಿಕಲಾ ಚೆನ್ನೈಗೆ ತೆರಳಲು ಖಾಸಗಿ ಎಸ್ಕಾರ್ಟ್ ವ್ಯವಸ್ಥೆ ಮಾಡಲಾಗಿದ್ದು. 8ಕ್ಕೂ ಹೆಚ್ಚು ವಾಹನಗಳಲ್ಲಿ ಎಸ್ಕಾರ್ಟ್ ಖಾಸಗಿ ಅಂಗ ರಕ್ಷಕರನ್ನ ಶಶಿಕಲಾ ಆಪ್ತರು ವ್ಯವಸ್ಥೆ ಮಾಡಿದ್ದಾರೆ. ಇನ್ನು ತಿರುವಣಮಲೈ, ತಿರುಪತಿ ಸೇರಿದಂತೆ ಹಲವು ದೇವಸ್ಥಾನಗಳ ಪ್ರಸಾದವನ್ನು ಚಿನ್ನಮ್ಮಗೆ ಕೊಡಲು ಆರ್ಚಕರು ತಂದಿದ್ದರು. ರೆಸಾರ್ಟ್​ನಿಂದ ಹೊರಗೆ ಬಂದ ಕಾರಿಗೆ ಮೊದಲು ಮಂಗಳಮುಖಿರಿಂದ ಪೂಜೆ ಮಾಡಿಸಲಾಯಿತು. ಎಐಎಡಿಎಂಕೆ ಬಾವುಟ ಹಾಕಿದ ಕಾರಿನಲ್ಲಿ ಶಶಿಕಲಾ ಪ್ರಯಾಣ ಬೆಳೆಸಿದ್ದಾರೆ. ದೇವನಹಳ್ಳಿ, ಯಲಹಂಕ, ಹೆಬ್ಬಾಳ, ಟಿನ್ ಫ್ಯಾಕ್ಟರಿ ಸಿಲ್ಕ್ ಬೋರ್ಡ್, ಮಾರ್ಗದ ಮೂಲಕ ಶಶಿಕಲಾ ತಮಿಳುನಾಡಿನ ಗಡಿಭಾಗ ತಲುಪಲಿದ್ದಾರೆ. 200 ಕ್ಕೂ ಹೆಚ್ಚು ವಾಹನಗಳು ಬಂದ ಹಿನ್ನೆಲೆ ನಂದಿಬೆಟ್ಟ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.